ಭಾರತ-ರಷ್ಯಾ ಬಾಂಧವ್ಯದ ‘ಆಳವಾದ ಸಾಕ್ಷಿ’ ಎಂದ ರಾಜನಾಥ್ ಸಿಂಗ್

ಚಂಡೀಗಢ: ಮಿಗ್-21 ಕೇವಲ ಯುದ್ಧ ವಿಮಾನವಲ್ಲ, ಬದಲಾಗಿ ಭಾರತ ಹಾಗೂ ರಷ್ಯಾ ನಡುವಿನ ಆಳವಾದ ಸಂಬಂಧಕ್ಕೆ ಇದು ಉಜ್ವಲ ಉದಾಹರಣೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಯುದ್ಧ ವಿಮಾನವು ರಕ್ಷಣಾ ಗುರಾಣಿ, ದೇಶದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ.ಮಿಗ್ -21 ಹಲವಾರು ದೇಶದ ವೀರರ ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ. ಇದರ ಕೊಡುಗೆ ಒಂದೇ ಒಂದು ಘಟನೆ ಅಥವಾ ಒಂದೇ ಯುದ್ಧಕ್ಕೆ ಸೀಮಿತವಾಗಿಲ್ಲ. ಇಂದು ಮಿಗ್-21 ಯುದ್ಧ ವಿಮಾನ ನಿವೃತ್ತಿಗೊಳ್ಳುತ್ತಿದ್ದು ಕೊನೆಯ ಹಾರಾಟ ನಡೆಸಿದೆ.
