Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಿಂದ ಫಿಫ್ತ್ ಜನರೇಶನ್ ಯುದ್ಧವಿಮಾನ ಯೋಜನೆಗೆ ಶಂಕುಸ್ಥಾಪನೆ: ಎಎಂಸಿಎ ಯೋಜನೆಗೆ ಅನುಮೋದನೆ

Spread the love

ನವದೆಹಲಿ: ರಫೇಲ್​​ನಂತಹ ನಾಲ್ಕನೇ ತಲೆಮಾರಿನ ಫೈಟರ್ ಜೆಟ್ ಹೊಂದಿರುವ ಭಾರತ ಈಗ ಇನ್ನೂ ಬಲಿಷ್ಠವಾದ ಯುದ್ಧವಿಮಾನಗಳನ್ನು ಸ್ವಂತವಾಗಿ ತಯಾರಿಸಲು ಹೆಜ್ಜೆ ಇಟ್ಟಿದೆ. ಮುಂದಿನ ವರ್ಷಗಳಲ್ಲಿ ಭಾರತವು ಐದನೇ ತಲೆಮಾರಿನ ಫೈಟರ್ ಜೆಟ್ ಅಭಿವೃದ್ಧಿಪಡಿಸಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಎಂಸಿಎ ಪ್ರೋಗ್ರಾಮ್ ಎಕ್ಸಿಕ್ಯೂಶನ್ ಮಾಡಲ್​​ಗೆ ಇಂದು ಮಂಗಳವಾರ ಅನುಮೋದನೆ ನೀಡಿದ್ದಾರೆ. ಈ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​​ಕ್ರಾಫ್ಟ್ ಯೋಜನೆ ಅಡಿಯಲ್ಲಿ ಭಾರತವು ಅತ್ಯಾಧುನಿಕ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ.

ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಈ ಎಎಂಸಿಎ ಯೋಜನೆಯನ್ನು ನಡೆಸಲಿದ್ದು, ವಿವಿಧ ಕಂಪನಿಗಳ ನೆರವನ್ನು ಬಳಸಿಕೊಳ್ಳಲಿದೆ. ಎಎಂಸಿಎ ಯೋಜನೆಯ ಅಭಿವೃದ್ಧಿ ಹಂತವನ್ನು ಕಾರ್ಯಗತಗೊಳಿಸಲು ಉದ್ಯಮ ವಲಯಕ್ಕೆ ಆಹ್ವಾನ (ಇಒಐ) ನೀಡಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಸಮಾನ ಅವಕಾಶ ನೀಡಲಾಗುತ್ತಿದೆ.

ಯಾವುದೇ ಕಂಪನಿಗಳು ಏಕಾಂಗಿಯಾಗಿ, ಅಥವಾ ಜಂಟಿಯಾಗಿ, ಅಥವಾ ಸಮೂಹವಾಗಿ ಈ ಯೋಜನೆಗೆ ಬಿಡ್ ಸಲ್ಲಿಸಬಹುದು. ಆದರೆ, ಎಲ್ಲಾ ಕಂಪನಿಗಳೂ ಕೂಡ ಭಾರತದವೇ ಆಗಿರಬೇಕು. ದೇಶದ ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿರಬೇಕು ಎಂಬುದು ಪ್ರಮುಖ ಷರತ್ತು.

ರಾಡಾರ್ ಕಣ್ಣಿಗೆ ಗೋಚರವಾಗದಂತೆ ಚಲಿಸುವ (ಸ್ಟೀಲ್ತ್), ಬಹಳ ವೇಗವಾಗಿ ಸಾಗಬಲ್ಲ, ಪ್ರಬಲ ಸೆನ್ಸಾರ್ ಫ್ಯೂಶನ್ ಇರುವ, ಸುಧಾರಿತ ಏವಿಯಾನಿಕ್ಸ್ ಹೊಂದಿರುವ ಹಾಗೂ ಇನ್ನೂ ಹಲವು ಸಾಮರ್ಥ್ಯಗಳನ್ನು ಹೊಂದಿರುವ ಮಲ್ಟಿರೋಲ್ ಫೈಟರ್ ಜೆಟ್​​ಗಳನ್ನು ತಯಾರಿಸುವುದು ಎಎಂಸಿಎ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇನ್ನು ಹತ್ತು ವರ್ಷದಲ್ಲಿ, ಅಂದರೆ 2035ರೊಳಗೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​ಕ್ರಾಫ್ಟ್ ಯೋಜನೆ ಕಾರ್ಯಗತವಾಗುವ ನಿರೀಕ್ಷೆ ಇದೆ.

ಫಿಫ್ತ್ ಜನರೇಶನ್ ಫೈಟರ್ ಜೆಟ್ ಎಂದರೇನು?

ಇದು ಸುಧಾರಿತ ಮಿಲಿಟರಿ ಸಾಮರ್ಥ್ಯ ಹೊಂದಿರುವ ಯುದ್ಧವಿಮಾನ. ಇದಕ್ಕೆ ನಿರ್ದಿಷ್ಟ ಮಾನದಂಡ ಇಲ್ಲ. ರಾಡಾರ್​​ನಿಂದ ತಪ್ಪಿಸಿಕೊಳ್ಳಬಲ್ಲ ಸಾಮರ್ಥ್ಯ ಇರಬೇಕು. ಶತ್ರುವಿನ ಕ್ಷಿಪಣಿ ಅಥವಾ ಜೆಟ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ತೀಕ್ಷ್ಣವಾಗಿ ತಿರುಗುವ ಸಾಮರ್ಥ್ಯ ಇರಬೇಕು. ಸೂಪರ್ ಸಾನಿಕ್ ಸ್ಪೀಡ್​​ನಲ್ಲಿ ಹೋಗಬೇಕು. ವಿವಿಧ ವಿಭಾಗಗಳ ನಡುವೆ ಡಾಟಾ ಫ್ಯೂಶನ್ ಮಾಡಿ ಸಮರ್ಥವಾಗಿ ದಾಳಿ ಮಾಡಬಲ್ಲಂತಿರಬೇಕು. ಕಮ್ಯಾಂಡ್, ಕಂಟ್ರೋಲ್, ಕಮ್ಯೂನಿಕೇಶನ್ ಇತ್ಯಾದಿ ಮಲ್ಟಿರೋಲ್ ಕೇಪಬಿಲಿಟಿ ಇರಬೇಕು ಎಂದು ಭಾವಿಸಲಾಗಿದೆ.

ಸದ್ಯ ಯಾವ್ಯಾವು ಫಿಫ್ತ್ ಜನರೇಶನ್ ಫೈಟರ್ ಜೆಟ್?

ಅಮೆರಿಕದ ಎಫ್-22 ರಾಪ್ಟರ್, ಎಫ್-35 ಲೈಟನಿಂಗ್, ಚೀನಾದ ಜೆ-20, ರಷ್ಯಾದ ಸುಖೋಯ್ ಎಸ್​​ಯು-57 ಅನ್ನು ಐದನೇ ತಲೆಮಾರಿನ ಫೈಟರ್ ಜೆಟ್ ಎಂದು ಪರಿಗಣಿಸಲಾಗಿದೆ. ಭಾರತ ಬಳಸುತ್ತಿರುವ ಫ್ರೆಂಚ್ ಆಮದಿತ ರಫೇಲ್ ಯುದ್ಧವಿಮಾನವು ನಾಲ್ಕನೇ ತಲೆಮಾರಿಗಿಂತ ತುಸು ಉಚ್ಚವಾಗಿರಬಹುದು (4.5 ಜನರೇಶನ್) ಎಂದು ಹೇಳಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *