Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಿಂದ ಗಡಿಗಾವಲು ಮೇಲೆ ನಿಗಾ: ಸ್ಪೈ ಸೆಟಿಲೈಟ್ ಗಳ ತಯಾರಿಕೆ ಗಡುವು ಕಡಿತ

Spread the love

ಬೆಂಗಳೂರು: ಪಾಕಿಸ್ತಾನದಿಂದ ಯಾವಾಗ ಬೇಕಾದರೂ ಕಿತಾಪತಿ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಶತ್ರು ದೇಶಗಳ ಮೇಲೆ ಹದ್ದಿನ ಕಣ್ಣಿಡಲು ಸರ್ವೇಲೆನ್ಸ್ ಸೆಟಿಲೈಟ್​​ಗಳನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ನಿಯೋಜಿಸಲು ಹೊರಟಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ನಿರ್ಮಾಣವಾಗುವ ಉದ್ದೇಶವಿದ್ದ ಸ್ಪೈ ಸೆಟಿಲೈಟ್​​​ಗಳನ್ನು ಸಾಧ್ಯವಾದಷ್ಟೂ ಶೀಘ್ರದಲ್ಲಿ ತಯಾರಿಸಿ ಆಗಸದಲ್ಲಿ ನಿಯೋಜಿಸುವ ಇರಾದೆಯಲ್ಲಿ ಸರ್ಕಾರ ಇದೆ. ವರದಿ ಪ್ರಕಾರ, ಕೆಲ ಸ್ಪೈ ಸೆಟಿಲೈಟ್​​ಗಳ ತಯಾರಿಕೆಗೆ ಮೂರು ಕಂಪನಿಗಳಿಗೆ ನೀಡಿದ್ದ ಡೆಡ್​​ಲೈನ್​​​ನ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಈ ಮೂರು ಕಂಪನಿಗಳಲ್ಲಿ ಎರಡು ಬೆಂಗಳೂರಿನದ್ದಾಗಿವೆ.

ಹೈದರಾಬಾದ್ ಮೂಲದ ಅನಂತ್ ಟೆಕ್ನಾಲಜೀಸ್, ಬೆಂಗಳೂರು ಮೂಲದ ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಗಳು ಸರ್ವೇಲೆನ್ಸ್ ಸೆಟಿಲೈಟ್​ಗಳನ್ನು ತಯಾರಿಸಲು ಗುತ್ತಿಗೆ ಪಡೆದಿದ್ದುವು. 2028ರ ಕೊನೆಗೆ ಈ ಸೆಟಿಲೈಟ್​ಗಳನ್ನು ತಯಾರಿಸಿಕೊಡಬೇಕು. ಆದರೆ, ಗಡುವನ್ನು 12-18 ತಿಂಗಳಿಗೆ ಪರಿಷ್ಕರಿಸಲಾಗಿದೆ. ಅಂದರೆ, 2028 ಬದಲು 2026ರಷ್ಟರಲ್ಲಿ ಈ ಸ್ಪೈ ಉಪಗ್ರಹಗಳನ್ನು ತಯಾರಿಸಬೇಕು ಎಂದು ಸರ್ಕಾರ ಸೂಚಿಸಿದೆ ಎಂದು ಮನಿ ಕಂಟ್ರೋಲ್ ವೆಬ್​ಸಸೈಟ್​​​ನಲ್ಲಿ ವರದಿಯಾಗಿದೆ.

2024ರ ಅಕ್ಟೋಬರ್​​​ನಲ್ಲಿ ಸರ್ಕಾರವು ಬಾಹ್ಯಾಕಾಶ ಆಧಾರಿತ ಸರ್ವೇಲೆನ್ಸ್-3 ಮಿಷನ್ ಅನ್ನು ಆರಂಭಿಸಿತು. 3 ಬಿಲಿಯನ್ ಡಾಲರ್​ನ ಈ ಯೋಜನೆ ಅಡಿ 52 ಸೆಟಿಲೈಟ್​​ಗಳ ಜಾಲವನ್ನು ಭೂಕಕ್ಷೆಯಲ್ಲಿ ಸೇರಿಸುವ ಉದ್ದೇಶ ಇದೆ. ಭಾರತದ ಗಡಿ ಭಾಗಗಳನ್ನು ಗಮನಿಸಲು ಪ್ರಮುಖ ಉದ್ದೇಶ ಈ ಸ್ಪೈ ಸೆಟಿಲೈಟ್​​ಗಳದ್ದಾಗಿದೆ. ಈಗ ಪಾಕಿಸ್ತಾನದೊಂದಿಗಿನ ಸಂಬಂಧ ಮತ್ತಷ್ಟು ಸೂಕ್ಷ್ಮಗೊಂಡ ಹಿನ್ನೆಲೆಯಲ್ಲಿ ಈ ಸೆಟಿಲೈಟ್​​ಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುತ್ತದೆ.

ಚಂದ್ರಯಾನ ಯೋಜನೆಗಳೊಂದಿಗೆ ಇದೆ ಈ ಕಂಪನಿಗಳ ಸಂಬಂಧ

ಅನಂತ್ ಟೆಕ್ನಾಲಜೀಸ್, ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಆಲ್ಫ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಗಳು ಈ ಮುಂಚೆಯೂ ಇಸ್ರೋಗೆ ವಿವಿಧ ಸೇವೆಗಳನ್ನು ನೀಡುತ್ತಾ ಬಂದಿವೆ. ಚಂದ್ರಯಾನ ಇತ್ಯಾದಿ ಯೋಜನೆಗಳಲ್ಲಿ ಇವರ ಪಾಲು ಇದೆ. 2024ರಲ್ಲಿ ಸ್ಪೈ ಸೆಟಿಲೈಟ್​​ಗಳ ಮಿಷನ್ ಆರಂಭವಾದಾಗಲೇ ಈ ಕಂಪನಿಗಳಿಗೆ ಗುತ್ತಿಗೆ ಕೊಡಲಾಗಿತ್ತು. ಈ ಪೈಕಿ ಅನಂತ್ ಟೆಕ್ನಾಲಜೀಸ್ ಸಂಸ್ಥೆಯ ಒಂದು ಸೆಟಿಲೈಟ್ ಅಂತಿಮ ಹಂತದ ಅಭಿವೃದ್ಧಿಯಲ್ಲಿದೆ. ಈ ವರ್ಷವೇ ಇದು ಬಿಡುಗಡೆ ಆಗಬಹುದು. ವರದಿ ಪ್ರಕಾರ ಈ ಸೆಟಿಲೈಟ್ ಅನ್ನು ಇಸ್ರೋದ ಎಲ್​​ವಿಎಂ-3 ಅಥವಾ ಸ್ಪೇಸ್​ಎಕ್ಸ್ ರಾಕೆಟ್ ಮೂಲಕ ನಭಕ್ಕೆ ಕಳುಹಿಸುವ ಸಾಧ್ಯತೆ ಇದೆ.


Spread the love
Share:

administrator

Leave a Reply

Your email address will not be published. Required fields are marked *