Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾನ್ ಮಸಾಲಾ ಉಗುಳಿ ಶಾಸಕರ ಅಸಭ್ಯತೆ-ಸ್ವಚ್ಛಗೊಳಿಸಿದ ಸ್ಪೀಕರ್

Spread the love

ಲಕ್ನೋ: ಉತ್ತರ ಪ್ರದೇಶದ ವಿಧಾನಸಭೆಯಲ್ಲಿಂದು ವಿಚಿತ್ರ ಪ್ರಸಂಗವೊಂದು ನಡೆದಿದೆ. ಸ್ಪೀಕರ್‌ ಸತೀಶ್‌ ಮಹಾನಾ ಅವರು, ಕೆಲ ಸದಸ್ಯರು ಪಾನ್‌ ಮಸಾಲ ಸೇವಿಸಿದ ಬಳಿಕ ವಿಧಾನಸಭೆಯ ಸಭಾಂಗಣದಲ್ಲೇ ಉಗುಳಿರುವ ವಿಚಾರವನ್ನು ಪ್ರಸ್ತಾಪಿಸಿದರು. ಅಲ್ಲದೇ ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿಯೂ ಹೇಳಿದರು.

ಕಲಾಪ ಆರಂಭಕ್ಕೂ ಮುನ್ನವೇ ಮಾತನಾಡಿದ ಸ್ಪೀಕರ್‌, ಇಂದು ಬೆಳಗ್ಗೆ ಮಾನ್ಯ ಸದಸ್ಯರೊಬ್ಬರು ನಮ್ಮ ವಿಧಾನಸೌಧದ ಈ ಸಭಾಂಗಣದಲ್ಲಿ ಪಾನ್‌ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ಬಂತು. ಹಾಗಾಗಿ ನಾನಿಲ್ಲಿಗೆ ಬಂದು ಅದನ್ನು ಸ್ವಚ್ಛಗೊಳಿಸಿದೆ ಎಂದು ತಿಳಿಸಿದರು.
ಮುಂದುವರಿದು.. ನಾನು ಉಗುಳಿದ ಶಾಸಕರನ್ನು ವಿಡಿಯೋನಲ್ಲಿ ನೋಡಿದ್ದೇನೆ. ಆದ್ರೆ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ, ಹಾಗಾಗಿ ನಾನು ಅವರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಅಂತ ನಾನು ಎಲ್ಲಾ ಸದರಿಗೆ ಇತ್ತಾಯಿಸುತ್ತೇನೆ. ಈ ಸಭೆಯಲ್ಲಿ ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿ ಪ್ರಶ್ನೆಯಲ್ಲಿರುವ ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದ್ರೆ ಒಳ್ಳೆಯದು, ಇಲ್ಲದಿದ್ದರೆ ನಾನೇ ಅವರನ್ನು ಕರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.


Spread the love
Share:

administrator

Leave a Reply

Your email address will not be published. Required fields are marked *