ಈ ಊರಿನಲ್ಲಿ ಹನುಮಾನ್ ಭಕ್ತರೇ ಇಲ್ಲ -ಮಾರುತಿ ಸುಜುಕಿ ಕಾರು ಖರೀದಿಸಲು ನಿರಾಕರಣೆ

ಮಹಾರಾಷ್ಟ್ರ :ಭಾರತದ ಒಂದೊಂದು ಹಳ್ಳಿಯಲ್ಲಿ ದೇವರು, ದೇವತೆಗಳ ಪೂಜೆ, ಆರಾಧನೆ ಮಾಡಲಾಗುತ್ತದೆ. ಇದು ಸರ್ವೇ ಸಾಮಾನ್ಯ. ಕೆಲ ಹಳ್ಳಿಗಳು ವಿಶೇಷ, ಉತ್ತರ ಪ್ರದೇಶದ ಬಿಸ್ರಾಖ್ ಹಳ್ಳಿಯಲ್ಲಿ ರಾವಣನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ಹಳ್ಳಿ ಇದೆ. ಇದು ವಿಶೇಷವಾದ ಹಳ್ಳಿ.

ಇಲ್ಲಿಯ ಜನ ಅಸುರರನ್ನು ದೇವರೆಂದು ಪೂಜಿಸುತ್ತಾರೆ. ಇವರ ಎಲ್ಲಾ ಕೆಲಸ ಕಾರ್ಯಗಳ ಶಕ್ತಿ ಇದೇ ಅಸುರರು, ಪೌರಾಣಿಕದಲ್ಲಿ ಬರುವ ರಾಕ್ಷಸರೇ ಇವರ ದೇವರು. ಈ ಹಳ್ಳಿ ಜನ ಹನುಮಾನ್ ದೇವರನ್ನು ಪೂಜಿಸಲ್ಲ. ಈ ಹಳ್ಳಿಯಲ್ಲಿ ಒಂದೇ ಒಂದು ಹನುಮಾನ್ ಮಂದಿರವಿಲ್ಲ. ಇಷ್ಟೇ ಅಲ್ಲ ಹನುಮಂತ ಸೇರಿದಂತೆ ಹನುಮಾನ್ ಸಂಬಂಧಿಸ ಯಾವ ಹೆಸರು ಯಾರೂ ಇಡುವುದಿಲ್ಲ. ಮತ್ತೊಂದು ವಿಶೇಷ ಅಂದರೆ ಈ ಹಳ್ಳಿಯ ಜನ ಮಾರುತಿ ಸುಜುಕಿ ಕಾರನ್ನೂ ಖರೀದಿಸುವುದಿಲ್ಲ. ಈ ವಿಶೇಷ ಹಳ್ಳಿ ಮಹಾರಾಷ್ಟ್ರದ ಅಹೆಮ್ಮದನಗರ ಜಿಲ್ಲೆಯ ನಂದೂರು ನಿಂಬ ದೈತ್ಯ.
ನಂದೂರು ನಿಂಬ ದೈತ್ಯ ಹಳ್ಳಿ ಜನರ ನಂಬಿಕೆ, ಪುರಾಣ
ನಂದೂರು ನಿಂಬ ದೈತ್ಯ ಹಳ್ಳಿ ಹೆಸರಿನಲ್ಲೇ ಅಸರರ ಉಲ್ಲಖವಿದೆ. ದೈತ್ಯ ಎಂದರೆ ಅತಿಮಾನುಷ ದೇವಮಾನವರು ಅಥವಾ ರಾಕ್ಷಸರು ಎಂದರ್ಥ. ಈ ಹಳ್ಳಿಯಲ್ಲಿ ಅಸುರರ ಕುರಿತು ಹಲವು ಪೌರಾಣಿಕ ಕತೆಗಳಿವೆ. ಅಸರರೇ ಈ ಹಳ್ಳಿಯನ್ನು ರಕ್ಷಣೆ ಮಾಡಿ ಇಲ್ಲಿನ ಜನಕ್ಕೆ ಅಭಯ ನೀಡಿದ್ದರು. ಹೀಗಾಗಿ ಅಸರರನ್ನೇ ಈ ಹಳ್ಳಿಯ ಜನ ದೇವರೆಂದು ಪೂಜಿಸುತ್ತಾರೆ. ಈ ಹಳ್ಳಿಯ ಪೌರಾಣಿಕ ಕತೆ ಹೇಳುವ ಪ್ರಕಾರ, ಈ ಹಳ್ಳಿಯಲ್ಲಿ ನಿಂಬ ದೈತ್ಯನೆಂಬ ಅಸುರನಿದ್ದ. ಆತ ಹನುಮಾನ್ ಜೊತೆ ಸಂಘರ್ಷಕ್ಕಿಳಿದಿದ್ದ, ಹೋರಾಟ, ಯುದ್ಧವೂ ನಡೆದಿತ್ತು. ಈ ವೇಳೆ ತಾನು ಶ್ರೀರಾಮನ ಭಕ್ತ ಎಂದು ನಿಂಬ ದೈತ್ಯ ಹನುಮಾನ್‌ಗೆ ಹೇಳಿದ್ದ. ತನ್ನ ಪ್ರದೇಶಕ್ಕೆ ಹನುಮಾನ್ ಆಗಮಿಸುತ್ತಿದ್ದಾನೆ, ಸುತ್ತುವರಿಯುತ್ತಿದ್ದಾನೆ ಎಂದು ನಿಂಬ ದೈತ್ಯ ಶ್ರೀರಾಮನ ಪೂಜಿಸಿದ್ದ. ಈ ವೇಳೆ ಶ್ರೀರಾಮ ಈ ಹಳ್ಳಿಗೆ ನೀನೆ ದೇವರು ಎಂದಿದ್ದರು. ಹೀಗಾಗಿ ನಿಂಬ ದೈತ್ಯ ಈ ಹಳ್ಳಿಯ ದೇವರು. ನಿಂಬ ದೈತ್ಯನೇ ಈ ಹಳ್ಳಿಯನ್ನು ಕಾಪಾಡುತ್ತಿದ್ದಾನೆ ಎಂದು ಇಲ್ಲಿನ ಜನ ಭಕ್ತಿಯಿಂದ ನಮಿಸುತ್ತಾರೆ.
ಈ ಹಳ್ಳಿಯಲ್ಲಿಲ್ಲ ಮಾರುತಿ ಮಂದಿರ
ಈ ಹಳ್ಳಿ ಜನ ನಿಂಬ ದೈತ್ಯನ ಆರಾಧಕರು. ಹನುಮಾನ್ ಜೊತೆ ಯುದ್ಧ, ಸಂಘರ್ಷ ಮಾಡಿದ್ದ ಕಾರಣ ಈ ಹಳ್ಳಿಯಲ್ಲಿ ಒಂದೇ ಒಂದು ಹನುಮಾನ್ ಮಂದಿರವಿಲ್ಲ. ಇತರ ಶಿವ ಪಾರ್ವತಿ, ಶ್ರೀರಾಮ ಸೇರಿದಂತೆ ಇತರ ಹಲವು ಮಂದಿರಗಳು ಇಲ್ಲಿ ಕಾಣಸಿಗುತ್ತದೆ. ಆದರೆ ಇಡೀ ಹಳ್ಳಿಯಲ್ಲಿ ಹನುಮಾನ್ ಮಂದಿರವಿಲ್ಲ.
ಈ ಹಳ್ಳಿ ಜನ ಮಾರುತಿ ಸುಜುಕಿ ಕಾರು ಖರೀದಿಸಲ್ಲ
ಈ ಹಳ್ಳಿ ಜನ ಮಾರುತಿ ಸುಜುಕಿ ಕಾರು ಖರೀದಿಸುವುದಿಲ್ಲ. ಇಲ್ಲಿ ಟಾಟಾ, ಹ್ಯುಂಡೈ, ಮಹೀಂದ್ರ ಸೇರಿದಂತೆ ಇತರ ಬ್ರ್ಯಾಂಡ್ ಕಾರುಗಳಿವೆ. ಆದರೆ ಮಾರುತಿ ಸುಜುಕಿ ಕಾರಿಲ್ಲ. ಕಾರಣ ಮಾರುತಿ ಅನ್ನೋ ಸಂಸ್ಕೃತ ಪದ ಮಾರುತ್‌ದಿಂದ ಬಂದಿದೆ. ಮಾರುತ್ ಅಂದರೆ ವಾಯು, ವಾಯುವಿನ ಪುತ್ರ ಹನುಮಾನ್‌ಗೆ ಮಾರುತಿ ಎಂದು ಕರೆಯುತ್ತಾರೆ. ಹೀಗಾಗಿ ಇಲ್ಲಿಯ ಜನ ಮಾರುತಿ ಸುಜುಕಿ ಕಾರು ಖರೀದಿಸುವುದಿಲ್ಲ. ಈ ಹಳ್ಳಿಯಲ್ಲಿ ಅತ್ಯಂತ ಪ್ರಸಿದ್ಧ ವೈದ್ಯರಾದ ಡಾ.ಸುಭಾಷ್ ದೇಶಮುಖ್ ಹಲವರ ನೆಚ್ಚಿನ ವೈದ್ಯರಾಗಿ ಹೊರಹೊಮ್ಮಿದ್ದರು. ಬೇರೆ ಯಾವುದೇ ಕ್ಲಿನಿಕ್ ತೆರಳಿದರೂ ಗುಣವಾದ ರೋಗವನ್ನು ಸುಭಾಷ್ ದೇಶ್‌ಮುಖ ಗುಣಪಡಿಸುತ್ತಿದ್ದರು. ಹೀಗಾಗಿ ಇಡೀ ಹಳ್ಳಿ ಜನರು ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಇವರ ಬಳಿ ಬರುತ್ತಿದ್ದರು. 2000ನೇ ಇಸವಿಯ ಆರಂಭದಲ್ಲಿ ಸುಭಾಷ್ ವೈದ್ಯರು ಮಾರುತಿ 800 ಕಾರು ಖರೀದಿಸಿದ್ದರು. ಈ ಮಾಹಿತಿ ಹಳ್ಳಿ ಜನಕ್ಕೆ ತಿಳಿಯಿತು. ವೈದ್ಯರಾಗಿದ್ದ ಕಾರಣ ನೇರವಾಗಿ ಜನರು ವೈದ್ಯರಲ್ಲಿ ಮಾರುತಿ ಕಾರು ಈ ಹಳ್ಳಿಯಲ್ಲಿ ನಿಷಿದ್ಧ ಎಂದು ಹೇಳಲಿಲ್ಲ.ಬದಲಾಗಿ ಇವರ ಬಳಿ ಬರುವುದನ್ನೇ ನಿಲ್ಲಿಸಿದರು. ಕಾರಣ ತಿಳಿದ ಸುಭಾಷ್ ವೈದ್ಯರು ಮಾರುತಿ 800 ಕಾರು ಮಾರಾಟ ಮಾಡಿ ಟಾಟಾ ಸುಮೋ ಖರೀದಿಸಿದ್ದರು.
ಈ ಹಳ್ಳಿಯಲ್ಲಿ ಮಕ್ಕಳಿಗೆ ಹನುಮಂತ ಸೇರಿದಂತೆ ಹನುಮಾನ್ ಹೆಸರಿಗೆ ಸಂಬಂಧಪಟ್ಟ ಯಾವ ಹೆಸರು ಇಡುವುದಿಲ್ಲ. ಈ ಹಳ್ಳಿಯಲ್ಲಿ ಯಾವುದೇ ಪ್ರಾಣಿ ವಧೆ ಮಾಡುವುದಿಲ್ಲ ಎಂದು ಇಲ್ಲಿನ ಜನರು ಹೇಳಿದ್ದಾರೆ.
