ಈ ಊರಿನಲ್ಲಿದೆ ರಕ್ತ ಬಣ್ಣದ ‘ರಕ್ತ ಸಿಕ್ತ ನದಿ’

ಅರುಣಾಚಲ ಪ್ರದೇಶ : ಲೋಹಿತ್ ನದಿಯನ್ನು ‘ರಕ್ತಸಿಕ್ತ ನದಿ’ ಎಂದೂ ಕರೆಯುತ್ತಾರೆ. ಈ ನದಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿಯುತ್ತದೆ. ಅಷ್ಟಕ್ಕೂ ಈ ನದಿ ಯಾಕೆ ಕೆಂಪು ಬಣ್ಣದಿಂದ ಕೂಡಿದೆ. ಇದರ ನೀರು ಕೆಂಪಾಗಿ ಕಾಣೋದಕ್ಕೆ ರಕ್ತ ಕಾರಣವೇ?
ಲೋಹಿತ್ ನದಿಯು ಪೂರ್ವ ಟಿಬೆಟ್ನಲ್ಲಿರುವ ಝಯಾಲ್ ಚು ಪರ್ವತ ಶ್ರೇಣಿಯಿಂದ ಹುಟ್ಟುತ್ತದೆ. ಈ ನದಿ ಅರುಣಾಚಲ ಪ್ರದೇಶದಲ್ಲಿ ಸುಮಾರು 200 ಕಿಲೋಮೀಟರ್ ಹರಿಯುತ್ತದೆ. ಇದಾದ ನಂತರ ಅದು ಅಸ್ಸಾಂನ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಲೋಹಿತ್ ನದಿ ಅಂತಿಮವಾಗಿ ಬ್ರಹ್ಮಪುತ್ರ ನದಿಯನ್ನುಸೇರುತ್ತದೆ. ಈ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗೋದಕ್ಕೆ ಏನು ಕಾರಣ ಗೊತ್ತಾ? ಖಂಡಿತವಾಗಿಯೂ ನೀವು ಅಂದುಕೊಂಡಂತೆ ಇದಕ್ಕೆ ಕಾರಣ ರಕ್ತ ಅಲ್ವೇ ಅಲ್ಲ. ಇಲ್ಲಿ ನದಿಯಲ್ಲಿ ಕೆಂಪು ಮಣ್ಣು ಇರೋದರಿಂದ, ನದಿ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಹಾಗಾಗಿಯೇ ಈ ನದಿಯನ್ನು ರಕ್ತ ನದಿ ಅಥವಾ ಬ್ಲಡಿ ರಿವರ್ ಎನ್ನುತ್ತಾರೆ. ಅಷ್ಟೇ ಅಲ್ಲ ಲೋಹಿತ್ ನದಿಗೆ ಅದರ ಅಪಾಯಕಾರಿ ಹರಿವು ಮತ್ತು ಬಣ್ಣದಿಂದಾಗಿ ಈ ಹೆಸರು ಬಂದಿದೆ. ಈ ನದಿಯು ತುಂಬಾನೆ ವೇಗದಲ್ಲಿ ಹರಿಯುತ್ತದೆ. ಇದರ ವೇಗಕ್ಕೆ ಜೀವವೇ ಹೋಗಬಹುದು ಅಷ್ಟೊಂದು ವೇಗವಾಗಿ ಹರಿಯುತ್ತೆ ನದಿ, ಜೊತೆಗೆ ಇದರ ಬಣ್ಣ ಕೆಂಪಾಗಿರೋದರಿಂದ ಈ ನದಿಯನ್ನು ರಕ್ತ ನದಿ ಎನ್ನುತ್ತಾರೆ.
ಈ ನದಿಯು ನೈಸರ್ಗಿಕ ಸೌಂದರ್ಯ ಮತ್ತು ನಿಗೂಢತೆಯಿಂದ ತುಂಬಿದೆ. ಈ ನದಿ ಕೇವಲ ಭಯಾನಕ ಮಾತ್ರ ಅಲ್ಲ. ನೈಸರ್ಗಿಸ ಸೌಂದರ್ಯದಿಂದ ಕೂಡ ಕೂಡಿದೆ. ಕೊನೆಯದಾಗಿ ಇದು ಬ್ರಹ್ಮ ಪುತ್ರ ನದಿಯನ್ನು ಸೇರಿ ದೊಡ್ಡ ನದಿಯಾಗಿ ಹರಿಯುತ್ತೆ