ಗೌರವದ ಹೆಸರಿನಲ್ಲಿ ಅಮಾನವೀಯತೆ: ತಂದೆಯಿಂದ ಮಗಳ ಮರ್ಯಾದಾ ಹತ್ಯೆ

ಬಿಹಾರ: ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಮಗಳನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡ ಅಪ್ಪ ಆಕೆಯನ್ನು ಕೊಲೆ ಮಾಡಿ ಮನೆಯ ಬಾತ್ ರೂಮ್ ನಲ್ಲಿ ಅಡಗಿಸಿಟ್ಟ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ಕೊಲೆಯಾದ ಯುವತಿಯನ್ನು ಮುಖೇಶ್ ಸಿಂಗ್ ಅವರ ಪುತ್ರಿ ಸಾಕ್ಷಿ (25 ವರ್ಷ) ಎಂದು ಗುರುತಿಸಲಾಗಿದೆ. ಸಮಸ್ತಿಪುರ ಜಿಲ್ಲೆಯ ಮೊಹಿಯುದ್ದೀನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಾಡಾ ಗ್ರಾಮದಲ್ಲಿ ನಡೆದಿದೆ.
ಯುವತಿ ಸಾಕ್ಷಿ ಮನೆಯ ಹತ್ತಿರದ ಯುವನಕನೊಬ್ಬನನ್ನು ಪ್ರೀತಿಸಿದ್ದಳು, ಆದರೆ ಯುವಕನ ಜಾತಿ ಬೆರೆಯಾಗಿದ್ದರಿಂದ ಮದುವೆಗೆ ಮನೆಯವರುಸ ನಿರಾಕರಿಸಿದ್ದರು. ಈ ಹಿನ್ನಲೆ ಸಾಕ್ಷಿ ಮಾರ್ಚ್ 4 ರಂದು ಪ್ರಿಯಕರನೊಂದಿಗೆ ದೆಹಲಿಗೆ ಓಡಿ ಹೋಗಿದ್ದಳು. ಈ ಸುದ್ದಿ ಇಡೀ ಗ್ರಾಮದಲ್ಲಿ ಹರಡಿದ್ದರಿಂದ ಹುಡುಗಿ ತಂದೆ ಮುಖೇಶ್ ಸಿಂಗ್ ಅವಮಾನಕ್ಕೀಡಾಗಿದ್ದರು ಎಂದು ಹೇಳಲಾಗಿದೆ.
ಈ ನಡುವೆ ಹುಡುಗಿಯ ನಂಬರ್ ಪಡೆದ ಆಕೆಯ ಕುಟುಂಬಸ್ಥರು ಆಕೆಯನ್ನು ಮತ್ತೆ ಮನೆಗೆ ಬರುವಂತೆ ಮಾಡಿದ್ದರು. ಮನೆಗೆ ಬಂದ ನಂತರ ಎಪ್ರಿಲ್ 7 ರಿಂದ ಯುವತಿ ಮತ್ತೆ ನಾಪತ್ತೆಯಾಗಿದ್ದಳು. ಈ ಕುರಿತಂತೆ ಯುವತಿ ತಾಯಿ ಮುಖೇಶ್ ಸಿಂಗ್ ಹತ್ತಿರ ಕೆಳಿದಾಗ ಮಗಳು ಮತ್ತೆ ಓಡಿ ಹೋಗಿದ್ದಾಳೆ ಎಂದು ಹೇಳಿದ್ದ, ಆದರೆ ತಾಯಿ ತನ್ನ ಸಹೋದರಿ ಮತ್ತು ಸೋದರ ಮಾವನಿಗೆ ಎಲ್ಲವನ್ನೂ ಹೇಳಿ ಕೊಲೆಯ ಅನುಮಾನ ವ್ಯಕ್ತಪಡಿಸಿದಳು. ನಂತರ ಅವಳ ಸೋದರ ಮಾವ ಹುಡುಗಿಯನ್ನು ಹುಡುಕಲು ಬಂದಿದ್ದಾರೆ. ಈ ವೇಳೆ ಮುಖೇಶ್ ಅವರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಈ ಹಿನ್ನಲೆ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಾಕ್ಷಿ ಅಪ್ಪ ಮುಖೇಶ್ ನನ್ನು ವಿಚಾರಣೆ ನಡೆಸಿದಾಗ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಗಳನ್ನು ಕೊಂದು ಆಕೆಯ ಮೃತದೇಹವನ್ನು ಮನೆಯ ಹಿಂದೆ ಇರುವ ಟಾಯ್ಲೆಟ್ ನಲ್ಲಿ ಇಟ್ಟಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ಟಾಯ್ಲೆಟ್ ರೂಂ ತೆಗೆದಾಗ ಸಾಕ್ಷಿ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಬಾಲಕಿಯ ತಂದೆ ಮುಖೇಶ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಹಳ್ಳಿಯ ಜನರ ಪ್ರಕಾರ, ತನ್ನ ಮಗಳನ್ನು ಕೊಂದ ನಂತರ, ತಂದೆ ಕೂಡ ಆ ಯುವಕನನ್ನು ಕೊಲ್ಲಲು ಹೊರಟಿದ್ದನು, ಆದರೆ ಆ ಯುವಕ ಪತ್ತೆಯಾಗಲಿಲ್ಲ ಹೀಗಾಗಿ ಮಗಳನ್ನು ಮರ್ಯಾದೆ ಹತ್ಯೆ ಮಾಡಿದ್ದಾನೆ.
