‘ಜಲಜಗಳ’ದಲ್ಲಿ ಮಹಿಳೆಯರು ರೋಡ್ ಸ್ಟಾರ್ – ಪೊಲೀಸರು ಮ್ಯೂಟ್ ಮೋಡ್!

ತುಮಕೂರು : ನೀರಿಗಾಗಿ ಮಹಿಳೆಯರು ರೋಡ್ ನಲ್ಲೇ ಕಿತ್ತಾಡೋದು ತುಂಬಾನೇ ಕಾಮನ್ ಆಗಿದೆ. ಕಲ್ಪತರು ನಾಡು ತುಮಕೂರಲ್ಲಿ ಪಿಡಿಓ ಹಾಗೂ ಪೊಲೀಸರ ಮುಂದೆಯೇ ನೀರಿಗಾಗಿ ಮಹಿಳೆಯರ ಜಗಳ ಅಡಿದ್ದಾರೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆಯರ ಬಾಯಿಗೆ ನೋಡುಗರು ಕಕ್ಕಾಬಿಕ್ಕಿಯಾಗಿದ್ದಾರೆ.
ಜುಟ್ಟು ಹಿಡಿದು ಪರಸ್ಪರ ತಳ್ಳಾಡಿ, ನೂಕಾಡಿಕೊಂಡ ಮಹಿಳೆಯರು ರಸ್ತೆಯಲ್ಲೇ ಹೈಡ್ರಾಮಾ ಸೃಷ್ಟಿಸಿದ್ದಾರೆ.ಕಾರೇಹಳ್ಳಿ ಗ್ರಾಮದ ತೋಟದಲ್ಲಿ ಸಮೀಪ ಇಬ್ಬರ ಜಗಳ ಸಾಕಷ್ಟು ಸದ್ದು ಮಾಡಿದೆ.
ಗ್ರಾ.ಪಂ ಸದಸ್ಯೆ ಯಶೋದಮ್ಮ ಹಾಗೂ ಮಮತ ಜಮೀನಿನಲ್ಲಿ ಪೈಪ್ಲೈನ್ ಹಾದು ಹೋಗಿದೆ.
ಗ್ರಾ.ಪಂನ ಕುಡಿಯುವ ನೀರನ್ನ ತೋಟಕ್ಕೆ ಅಕ್ರಮವಾಗಿ ಬಿಟ್ಟುಕೊಳ್ಳಲಾಗಿತ್ತು ಎಂಬ ಆರೋಪ ಇದೆ.ಅಕ್ರಮವಾಗಿ ನೀರು ಬಿಟ್ಟುಕೊಳ್ಳಲಾಗಿದೆ ಎಂಬ ಆರೋಪದ ಹಿನ್ನಲೆ ಪಿಡಿಓ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಪಿಡಿಓ ಕೋಕಿಲಾ ಹಾಗೂ ಪೊಲೀಸರ ಮುಂದೆ ಇಬ್ಬರು ಜಗಳವಡಿಕೊಂಡಿದ್ದಾರೆ.ಈ ವೇಳೆ ಇಬ್ಬರ ಪತಿಯಂದಿರು ಹೆಂಡ್ತಿಯರ ಜಗಳ ಬಿಡಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
