Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದ್ರೆ, ಸಸ್ಯಾಹಾರಿಗಳು ಸಸ್ಯಾಹಾರಿ ಹೋಟೆಲ್ ಬಿಟ್ಟು ಮಾಂಸ-ಸಸ್ಯಾಹಾರ ಸೇವೆ ನೀಡುವ ಹೋಟೆಲ್‌ಗೆ ಹೋದೇಕೆ?

Spread the love

7 Best Non-Veg Restaurants in Mumbai for Hungry Souls

ಮುಂಬೈ: ಸಸ್ಯಾಹಾರದ ತಿನಿಸನ್ನು ಆರ್ಡರ್‌ ಮಾಡಿದರೆ ಮಾಂಸಹಾರದ ತಿನಿಸನ್ನು ನೀಡಿದರು, ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಯಿತು ಎಂದು ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಇಬ್ಬರು ಗ್ರಾಹಕರು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಗ್ರಾಹಕರ ಆಯೋಗ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎನ್ನುವುದಾದರೆ ಸಸ್ಯಾಹಾರಿಗಳು ಸಸ್ಯಾಹಾರಿ ಹೊಟೇಲ್‌ಗಳನ್ನು ಬಿಟ್ಟು ಮಾಂಸಹಾರ ಸಸ್ಯಾಹಾರ ಎರಡನ್ನೂ ಮಾಡುವ ಹೊಟೇಲ್‌ಗಳಿಂದ ಮಾಡುವುದೇಕೆ ಎಂದು ಪ್ರಶ್ನಿಸಿದೆ.

ʼವಿವೇಕಿಯಾದವನು ಸಸ್ಯಾಹಾರ ಹಾಗೂ ಮಾಂಸಹಾರಗಳೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾನೆʼ ಎಂದು ಮುಂಬೈ ಉಪನಗರ ( ಹೆಚ್ಚುವರಿ ) ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶದಲ್ಲಿ ತಿಳಿಸಿದೆ.

ʼವಾವ್‌ ಮೊಮೊಸ್‌ʼ ಫಾಸ್ಟ್‌ಫುಡ್‌ ರೆಸ್ಟೋರೆಂಟ್‌ನಿಂದ 2020ರ ಡಿಸೆಂಬರ್‌ 19ರಂದು ʼಡಾರ್ಜಿಲಿಂಗ್‌ ಮೊಮೊಸ್ ಕಾಂಬೊʼ ಅನ್ನು ಆರ್ಡರ್‌ ಮಾಡಿದ್ದರು. ಆರ್ಡರ್‌ ಮಾಡುವ ವೇಳೆ ವೆಜ್‌ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದರೂ ಅಲ್ಲಿನ ಸಿಬ್ಬಂದಿ ʼಚಿಕನ್‌ ಡಾರ್ಜಿಲಿಂಗ್‌ ಮೊಮೊಸ್‌ʼ ಅನ್ನು ನೀಡಿದರು ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ಸಿಬ್ಬಂದಿ ನಿರ್ಲಕ್ಷ್ಯದಿಂದ ತಮ್ಮ ಮನಸ್ಸಿಗೆ ನೋವುಂಟಾಗಿದ್ದು, ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ವಾವ್‌ ಮೊಮೊಸ್‌ ತಮಗೆ 6 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಅತ್ತ ಈ ಆರೋಪವನ್ನು ನಿರಾಕರಿಸಿರುವ ವಾವ್‌ ಮೊಮೊಸ್‌ ಕಂಪನಿ ಇನ್ವಾಯ್ಸ್‌ ಅನ್ನು ಸಾಕ್ಷಿಯನ್ನಾಗಿ ನೀಡಿ ದೂರುದಾರರು ಮಾಂಸಹಾರವನ್ನೇ ಆರ್ಡರ್‌ ಮಾಡಿದರು ಎಂದು ವಾದಿಸಿದೆ.

ಎರಡೂ ಕಡೆಯ ವಾದ ಆಲಿಸಿದ ಆಯೋಗ ಆರೋಪಗಳನ್ನು ಸಾಬೀತುಪಡಿಸುವಲ್ಲಿ ದೂರುದಾರರು ವಿಫಲರಾಗಿದ್ದಾರೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *