Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಕ್ಕಳು ಪೋಷಕರನ್ನು ನಿರ್ಲಕ್ಷಿಸಿದರೆ ಆಸ್ತಿ ವಾಪಸ್

Spread the love

ಚೆನ್ನೈ: ಹಿರಿಯ ನಾಗರಿಕರ ಯೋಗಕ್ಷೇಮ ನೋಡಿಕೊಳ್ಳಲು ಅವರ ಮಕ್ಕಳು ಅಥವಾ ಸಂಬಂಧಿಕರು ವಿಫಲರಾದಲ್ಲಿ ಹಿರಿಯ ನಾಗರಿಕರು ಅಂಥವರಿಗೆ ಈ ಹಿಂದೆ ವರ್ಗಾಯಿಸಿರಬಹುದಾದ ಗಿಫ್ಟ್ ಡೀಡ್ ಅಥವಾ ಸೆಟಲ್‌ಮೆಂಟ್ ಡೀಡ್ ಆಸ್ತಿಯನ್ನು ಹಿಂಪಡೆಯಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಎಸ್.ನಾಗಲಕ್ಷ್ಮೀ ಎಂಬ ಮೃತ ಮಹಿಳೆಯ ಸೊಸೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದ್ದು, ಆಸ್ತಿ ವರ್ಗಾವಣೆಯು ಕೇವಲ ಕಾನೂನು ಪ್ರಕ್ರಿಯೆಯಾಗಿರದೆ, ವೃದ್ಧಾಪ್ಯದಲ್ಲಿ ಆರೈಕೆ ಪಡೆಯುವ ಭರವಸೆಯಿಂದ ಕೈಗೊಂಡ ನಿರ್ಧಾರವೂ ಆಗಿರುತ್ತದೆ ಎಂದಿದೆ.

ಪುತ್ರ ತಮ್ಮನ್ನು ಆರೈಕೆ ಮಾಡಿಲ್ಲ ಎಂಬ ಕಾರಣಕ್ಕೆ ನಾಗಲಕ್ಷ್ಮೀ ತಮ್ಮ ಪುತ್ರನಿಗೆ ನೀಡಿದ್ದ ಸೆಟಲ್‌ಮೆಂಟ್ ಡೀಡ್‌ನ್ನು ರದ್ದು ಮಾಡಿಸಿದ್ದರು. ಅದನ್ನು ಪ್ರಶ್ನಿಸಿ ಸೊಸೆ ಹೈಕೋರ್ಟ್ ಮೆಟ್ಟಿಲೇರಿದ್ದರು.


Spread the love
Share:

administrator

Leave a Reply

Your email address will not be published. Required fields are marked *