Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

IAF 93ನೇ ವಾರ್ಷಿಕೋತ್ಸವ: ಮೆನು ಮೂಲಕ ಪಾಕಿಸ್ತಾನಕ್ಕೆ ವಾಯುಸೇನೆಯ ಟಾಂಗ್!

Spread the love

ನವದೆಹಲಿ: ಭಾರತೀಯ ವಾಯುಸೇನೆ (Indian Air Force) ಬುಧವಾರ 93ನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು. ಈ ವೇಳೆ ತನ್ನ ಊಟದ ಮೆನುವಿನ ಮೂಲಕ ಪಾಕಿಸ್ತಾನವನ್ನು (Pakistan) ವ್ಯಂಗ್ಯ ಮಾಡಿದೆ.

ಊಟದ ಮೆನುವಿನ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ವಾಯುಸೇನೆ ವ್ಯಂಗ್ಯ ಮಾಡಿದೆ. ಭಾರತ ವಾಯುದಾಳಿ ನಡೆಸಿದ ಪ್ರಮುಖ ಸ್ಥಳಗಳ ಹೆಸರನ್ನು ಖಾದ್ಯಗಳಿಗೆ ಇಡಲಾಗಿದೆ. ಊಟದ ಹೆಸರಿನಲ್ಲಿ ಬಾಲಕೋಟ್‌ನಿಂದ ಆಪರೇಷನ್ ಸಿಂಧೂರ ವರೆಗೂ ಭಾರತ ದಾಳಿ ಮಾಡಿದ ಸ್ಥಳಗಳ ಹೆಸರಿನಲ್ಲಿ ಖಾದ್ಯಗಳ ಹೆಸರು ಉಲ್ಲೇಖಿಸಲಾಗಿದೆ. 

ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಊಟಕ್ಕೆ ಬಳಸಿದ ಖಾದ್ಯಗಳಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ದಾಳಿ ಮಾಡಿದ ಪ್ರದೇಶಗಳ ಹೆಸರಿನಲ್ಲಿ ಖಾದ್ಯಗಳನ್ನು ಉಲ್ಲೇಖಿಸಲಾಗಿದೆ. ‘IAFಗೆ 93 ವರ್ಷ: ದೋಷರಹಿತ, ಪ್ರಭಾವಶಾಲಿ ಮತ್ತು ನಿಖರ’ ಎಂಬ ಶೀರ್ಷಿಕೆಯ ಮೆನುವಿನಲ್ಲಿ, 2019 ರ ಬಾಲಕೋಟ್ ವೈಮಾನಿಕ ದಾಳಿ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ ಸೇರಿದಂತೆ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಸಮಯದಲ್ಲಿ ಗುರಿಯಾಗಿಸಿಕೊಂಡ ಪ್ರಮುಖ ಸ್ಥಳಗಳನ್ನು ಭಕ್ಷ್ಯ ಮಾಡಿದ್ದೇವೆ ಎಂಬಂತೆ ಬಿಂಬಿಸಿ ಪಾಕಿಸ್ತಾನಕ್ಕೆ ಟಾಂಗ್‌ ಕೊಟ್ಟಿದೆ.

ಮೆನುವಿನಲ್ಲಿ ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ, ರಫೀಕಿ ರಾರಾ ಮಟನ್, ಭೋಲಾರಿ ಪನೀರ್ ಮೇಥಿ ಮಲೈ, ಸುಕ್ಕೂರ್ ಶಾಮ್ ಸವೇರಾ ಕೋಫ್ತಾ, ಸರ್ಗೋಧಾ ದಾಲ್ ಮಖಾನಿ, ಜಾಕೋಬಾಬಾದ್ ಮೇವಾ ಪುಲಾವ್ ಮತ್ತು ಬಹವಾಲ್ಪುರ್ ನಾನ್ ಹಾಗೂ ಸಿಹಿತಿಂಡಿ ವಿಭಾಗದಲ್ಲಿ ಬಾಲಕೋಟ್ ತಿರಮಿಸು, ಮುಜಫರಾಬಾದ್ ಕುಲ್ಫಿ ಫಲೂಡಾ ಮತ್ತು ಮುರಿಡ್ಕೆ ಮೀಠಾ ಪಾನ್ ಎಂದು ಉಲ್ಲೇಖಿಸಲಾಗಿದೆ.

ಸದ್ಯ ಎಕ್ಸ್ ಖಾತೆಯಲ್ಲಿ ಮೆನು ವೈರಲ್ ಆಗುತ್ತಿದೆ. ಪಾಕಿಸ್ತಾನವನ್ನು ರೋಸ್ಟ್ ಮಾಡಲಾಗಿದೆ ಎಂದು ಜನರು ಕಾಮೆಂಟ್‌ ಮಾಡುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *