ಸಿಎಂ ಅವರನ್ನ ನೋಡಿದ್ರೆ ಪಾಪ ಅನಿಸುತ್ತೆ; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೀಗಂದಿದ್ಯಾಕೆ?

ಸಿಎಂ ಸಿದ್ದರಾಮಯ್ಯ ನಿನ್ನೆ ಕೇಂದ್ರದ ವಿರುದ್ಧ ಅನುದಾನ ತಾರತಮ್ಯ ಆರೋಪ ಮಾಡಿದ್ದಾರೆ. ರಾಜ್ಯಕ್ಕೆ ಸರಿಯಾಗಿ ಅನುದಾನ ನೀಡುತ್ತಿಲ್ಲ ಕೇಂದ್ರ ಸರ್ಕಾರ ಎಂಬ ಆರೋಪ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ನೋಡಿದ್ರೆ ಪಾಪ ಅನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಅವರ ಬಳಿ ಹಣ ಇಲ್ಲ ಅಂತ ಅರ್ಧಂಬರ್ಧ ಸುಳ್ಳು ಹೇಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ವಿರುದ್ಧ ಟೀಕೆ ಮಾಡಿದ್ದಾರೆ.

ನಿನ್ನೆ 16ನೇ ಹಣಕಾಸು ಆಯೋಗದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಅನುದಾನ ತಾರತಮ್ಯ ಆರೋಪ ಮಾಡಿದ್ದಾರೆ.
ಅನುದಾನ ತಾರತಮ್ಯ ಆರೋಪಕ್ಕೆ ವಿಜಯೇಂದ್ರ ತಿರುಗೇಟು!
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯರವರ ಅನುದಾನ ತಾರತಮ್ಯ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ. ನಿನ್ನೆ ದೆಹಲಿಯಲ್ಲಿ ಸಿಎಂ ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕುತಂತ್ರ, ಷಡ್ಯಂತ್ರ ಮಾಡಿದ್ದಾರೆ. ಸಿಎಂ ಅವರನ್ನ ನೋಡಿದ್ರೆ ಪಾಪ ಅನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಆಗ್ತಿಲ್ಲ, ಅವರ ಬಳಿಯಲ್ಲಿ ಅಭಿವೃದ್ಧಿ ಮಾಡಲು ಹಣ ಇಲ್ಲ. ನಿನ್ನೆ ದೆಹಲಿಯಲ್ಲಿ ಸಿಎಂ ಅರ್ಧ ಸತ್ಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆರೋಪಗಳು ಸತ್ಯವಲ್ಲ, ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಅಷ್ಟೇ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅನುದಾನ ತಾರತಮ್ಯ ಆರೋಪ ತಳ್ಳಿಹಾಕಿದ ವಿಜಯೇಂದ್ರ!
ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಕೇಂದ್ರದ ಮೇಲೆ ಆರೋಪ ಮಾಡ್ತಿದೆ. ಕೇಂದ್ರದ ಯೋಜನೆಗಳಿಗೂ ಕತ್ತರಿ ಹಾಕ್ತಿದೆ. ರಾಜ್ಯ ಸರ್ಕಾರದ ಆರೋಪ ಸತ್ಯವಲ್ಲ ಎಂದು ಅನುದಾನ ತಾರತಮ್ಯ ಆರೋಪವನ್ನು ವಿಜಯೇಂದ್ರ ತಳ್ಳಿ ಹಾಕಿದ್ದಾರೆ.
ಜಾತಿಗಣತಿ ಬಗ್ಗೆ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ ಎಂದ ವಿಜಯೇಂದ್ರ!
ಇನ್ನೂ ಹೊಸದಾಗಿ ಜಾತಿ ಜನಗಣತಿಗೆ ನಿರ್ಧಾರ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಮೊದಲಿಂದಲೂ ಜಾತಿ ಜನಗಣತಿ ಅವೈಜ್ಞಾನಿಕ, ಅವಾಸ್ತವ ಅಂತ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ಯಪಡಿಸಿದರು. ಸರ್ಕಾರಕ್ಕೆ ಈಗ ಜ್ಞಾನೋದಯ ಆಗಿದೆ. ಕಾಲ್ತುಳಿತ ದುರಂತ ಪ್ರಕರಣ ಡೈವರ್ಟ್ ಮಾಡಲು ಹೊಸದಾಗಿ ಸಮೀಕ್ಷೆ ಮಾಡೋ ಪ್ರಸ್ತಾಪ ಮಾಡಿದ್ದಾರೆ. ಅಂತಿಮವಾಗಿ ಈ ವಿಚಾರದಲ್ಲಿ ಇವ್ರು ಏನೂ ಮಾಡಲು ಆಗೋದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಜನಗಣತಿ, ಜಾತಿ ಜನಗಣತಿ ಎರಡೂ ಮಾಡ್ತಿದೆ. ಇದು ರಾಜ್ಯದ ವ್ಯಾಪ್ತಿಗೆ ಬರೋದಿಲ್ಲ, ಗೊಂದಲ ಸೃಷ್ಟಿಸಲು ಹೊಸದಾಗಿ ಜಾತಿ ಜನಗಣತಿ ಪ್ರಸ್ತಾಪ ಮಾಡಿದ್ದಾರೆ. ಇವರಿಂದ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಆಗೋದಿಲ್ಲ. ರಾಜ್ಯದಲ್ಲಿ ಗೊಂದಲ ಸೃಷ್ಟಿಗೆ ಮುಂದಾಗಿದ್ದಾರೆ ಅಷ್ಟೇ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಸಿಎಂ ಸರ್ಕಾರದ ದಬ್ಬಾಳಿಕೆಗೆ ಹೆದರಲ್ಲ ಎಂದು ವಿಜಯೇಂದ್ರ ಗುಡುಗು!
ನಿನ್ನೆ ಕೋಮು ನಿಗ್ರಹ ದಳಕ್ಕೆ ಚಾಲನೆ ವಿಚಾರವಾಗಿಯೂ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೋಮು ನಿಗ್ರಹ ದಳ ಅಲ್ಲ. ಬಿಜೆಪಿ ಕಾರ್ಯಕರ್ತರನ್ನು ಹಿಂದೂಗಳನ್ನು ಬೆದರಿಸಲು ಇರುವ ಷಢ್ಯಂತ್ರ ಇದು. ಇದಕ್ಕೆಲ್ಲ ನಾವು ಬಗ್ಗೋದಿಲ್ಲ. ಸಿದ್ದರಾಮಯ್ಯ ಸರ್ಕಾರದ ದಬ್ಬಾಳಿಕೆಗೆ ಹೆದರಲ್ಲ, ಎದುರಿಸ್ತೇವೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುಡುಗಿದ್ದಾರೆ.