“ನನಗೆ ಇಷ್ಟವಾಗಲಿಲ್ಲ” ಎಂದು ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ ನೀಡಿದ ಉದ್ಯೋಗಿ – HR ಹಂಚಿಕೊಂಡ ಪೋಸ್ಟ್ ವೈರಲ್!

ಇತ್ತೀಚಿನ ದಿನಗಳಲ್ಲಿ ಕಷ್ಟಪಟ್ಟು ಕೆಲಸ ಪಡೆಯುವ ಜನರು ತಾವು ಪಡೆದ ಉದ್ಯೋಗ ಬಿಡಲು ಸಾಮಾನ್ಯವಾಗಿ ಬಯಸುವುದಿಲ್ಲ. ಆದರೆ, ಕೆಲವರು ತುಂಬಾ ದೃಢನಿಶ್ಚಯದಿಂದ ಕೆಲಸ ಬಿಡಲು ನಿರ್ಧರಿಸಿದ ನಂತರ ಅದನ್ನು ಬಿಡುತ್ತಾರೆ. ಇದೀಗ ಒಬ್ಬ ಕಂಪನಿಯ ಎಚ್ಆರ್(ಮಾನವ ಸಂಪನ್ಮೂಲ) ತಮಗೆ ತಮ್ಮ ಉದ್ಯೋಗಿ ಕೆಲಸದ ದಿನವೇ ರಿಸೈನ್ ಮಾಡಿದ ಬಗ್ಗೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಇದೀಗ ಪೋಸ್ಟ್ ವೈರಲ್ ಆಗುತ್ತಿದೆ.

ಉದ್ಯೋಗಿ HRಗೆ ರಿಸೈನ್ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ಅವರು ಕಾರಣವನ್ನೂ ಹೇಳಿದ್ದಾರೆ. ಈ ಸಂದೇಶವನ್ನು ಓದಿದ ನಂತರ HR ದಿಗ್ಭ್ರಮೆಗೊಂಡಿದ್ದಾಳೆ.
ಹೌದು, ಲಿಂಕ್ಡ್‌ಇನ್ ಬಳಕೆದಾರ ಖುಷಿ ಚೌರಾಸಿಯಾ ನೋಯ್ಡಾದಲ್ಲಿ ಮಾನವ ಸಂಪನ್ಮೂಲ ತಜ್ಞೆಯಾಗಿದ್ದಾರೆ(HR). ಇತ್ತೀಚೆಗೆ ಅವರು ಕೆಲಸಕ್ಕೆ ಸೇರಿದ ಮೊದಲ ದಿನದಲ್ಲಿದ್ದ ಅಭ್ಯರ್ಥಿಯ ಪೋಸ್ಟ್ ಮತ್ತು ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಉದ್ಯೋಗಿ ಹೇಳಿದ್ದೇನು..?
ವೈರಲ್ ಆಗುತ್ತಿರುವ ಚಾಟ್‌ನಲ್ಲಿ, ‘ನನಗೆ ನನ್ನ ಮೇಲೆ ಸರಿಯಾದ ಭಾವನೆ ಇಲ್ಲ, ಕೆಲಸ ಮುಂದುವರಿಸಲು ಇಷ್ಟವಿಲ್ಲ ಎಂದು ಉದ್ಯೋಗಿ ಚಾಟ್‌ನಲ್ಲಿ ಹೇಳಿದ್ದಾರೆ. ಯಾಕೆ ಎಂದು ಪ್ರಶ್ನಿಸಿದ ಎಚ್‌ಆರ್, ಏನನ್ನೂ ವಿವರವಾಗಿ ಹೇಳುವುದಿಲ್ಲ ನನಗೆ ಕೆಲಸ ಇಷ್ಟವಾಗಲಿಲ್ಲ ಅಷ್ಟೇ ಎಂದಿದ್ದಾರೆ. ಇದನ್ನು ಕೇಳಿದ ಎಚ್ಆರ್ ತೆಪ್ಪಗಾಗಿದ್ದಾರೆ.
ಅಭ್ಯರ್ಥಿ ಪುರುಷನೋ ಅಥವಾ ಮಹಿಳೆಯೋ ಎಂಬುದು ಸ್ಪಷ್ಟವಾಗಿಲ್ಲ, ಖುಷಿ ಚೌರಾಸಿಯಾ ಚಾಟ್‌ನಿಂದ ಅಭ್ಯರ್ಥಿಯ ಹೆಸರನ್ನು ಸಹ ಮಸುಕುಗೊಳಿಸಿದ್ದಾರೆ, ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹೆಸರು ಶ್ರುತಿಕಾ ಎಂದು ತಿಳಿದುಬಂದಿದೆ. ಇದರಿಂದ ನಾವು ಇದು ಹುಡುಗಿಯ ಚಾಟ್ ಎಂದು ಊಹಿಸಬಹು
