Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜ್ಯದ ಶಾಲಾ ಮಕ್ಕಳಲ್ಲಿಯೂ “ಹೈಪರ್‌ಟೆನ್ಷನ್ ಪತ್ತೆ” -ಅಘಾತಕಾರಿ ಮಾಹಿತಿ ಬಹಿರಂಗ

Spread the love

ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿರುವ ಆಘಾತಕಾರಿ ಸಂಗತಿ ಅಧ್ಯಯನದಿಂದ ಹೊರ ಬಿದ್ದಿದೆ.

ಅಧ್ಯಯನಕ್ಕೆ ಒಳಪಟ್ಟ 8 ಮತ್ತು 9 ನೇ ತರಗತಿಯ 30 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮಧುಮೇಹದಿಂದ ಬಳಲುತ್ತಿದ್ದರೆ, ನಾಲ್ಕು ವಿದ್ಯಾರ್ಥಿಗಳು ಹೈಪರ್ ಟೆನ್ಷನ್ ನಿಂದ ನರಳುತ್ತಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ.
11 ವಿದ್ಯಾರ್ಥಿಗಳಲ್ಲಿ ಟೈಗ್ರಿಸೈರೆಡ್ ( ಕೊಬ್ಬು) ಕೊಬ್ಬಿನಾಂಶ ಹೆಚ್ಚಾಗಿದ್ದು, ಒಬ್ಬ ವಿದ್ಯಾರ್ಥಿಯಲ್ಲಿ ಅಪಾಯಕಾರಿ ಹಂತ ತಲುಪಿದೆ!

ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್‌ ಸೆಂಟರ್ ನ ಮಲ್ಟಿ ಡಿಸಿಪ್ಲೆನರಿ ರಿಸರ್ಚ್‌ ಘಟಕ ಇತ್ತೀಚಿನ ದಿನಗಳಲ್ಲಿ ಕಿಶೋರರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅಧ್ಯಯನ ನಡೆಸಿತು. ಧಾರವಾಡ ಜಿಲ್ಲೆಯಲ್ಲಿ 8 ರಿಂದ 9 ನೇ ತರಗತಿಯಲ್ಲಿ ವ್ಯಾಸಂಗ ಮಾಆಡುತ್ತಿರುವ ಆರು ಶಾಲೆಗಳ 30 ಅಧಿಕ ತೂಕದ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಬಾಲ್ಯಾವ್ಯಸ್ಥೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗಗಳ ಬಗ್ಗೆ ವೈದ್ಯರ ತಂಡ ಅಧ್ಯಯನ ನಡೆಸಿದಾಗ ಆಘಾತಕಾರಿ ಸಂಗತಿಗಳು ಹೊರ ಬಿದ್ದಿವೆ. ಇಂದಿನ ದಿನಗಳಲ್ಲಿ ದೈಹಿಕ ಚಟುವಟಿಕೆ ರಹಿತ ಮಕ್ಕಳ ಜೀವನ, ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಬಾಲ್ಯಾವ್ಯವಸ್ಥೆಯಲ್ಲಿಯೇ ಮಕ್ಕಳು ನಾನಾ ಕಾಯಿಲೆಗಳ ಸಮೀಪ ಇರುವ ಅಂಶ ಈ ಅಧ್ಯಯನದಲ್ಲಿ ಬಹಿರಂಗವಾಗಿದೆ.

ಅಧ್ಯಯನ ವರದಿಯ ಫಲಿತಾಂಶ: ಅಧ್ಯಯನಕ್ಕೆ ಒಳಪಟ್ಟ 30 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾನೆ. ನಾಲ್ಕು ವಿದ್ಯಾರ್ಥಿಗಳು ಹೈಪರ್‌ಟೆನ್ಷನ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಐದು ವಿದ್ಯಾರ್ಥಿಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುವುದು ಪತ್ತೆಯಾಗಿದ್ದು, ಟ್ರೈಗ್ಲೀಸೆರೈಡ್ ಕೊಬ್ಬಿನಾಂಶ 11 ವಿದ್ಯಾರ್ಥಿಗಳಲ್ಲಿ ಹೆಚ್ಚಳ ಇರುವುದು ಕಂಡು ಬಂದಿದೆ. ಅದರಲ್ಲಿ ಒಬ್ಬ ವಿದ್ಯಾರ್ಥಿ ಅಪಾಯಕಾರಿ ಹಂತ (499 Mg/DL) ಇರುವುದು ಬೆಳಕಿಗೆ ಬಂದಿದೆ. ಪಾರ್ಶವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗುವ LDL ಕೊಬ್ಬಿನಾಂಶ ಐದು ವಿದ್ಯಾರ್ಥಿಗಳಲ್ಲಿ ಅಧಿಕ ಇರುವುದು ಅಧ್ಯಯನದಿಂದ ಪತ್ತೆಯಾಗಿದೆ.

ಅಧ್ಯಯನಕ್ಕೆ ಒಳಪಟ್ಟ 30 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳಲ್ಲಿ ಹೋಮೋಸಿಸ್ಟೀನ್ ಹೆಚ್ಚಳ ಕಂಡು ಬಂದಿದ್ದು, ಇದು ವ್ಯಕ್ತಿಯ ದೇಹದಲ್ಲಿ ವಿಟಮಿನ್ ಕಡಿಮೆಯಿರುವುದನ್ನುಸೂಚಿಸುತ್ತದೆ. ಅಂದರೆ ಅಧ್ಯಯನಕ್ಕೆ ಒಳಪಟ್ಟ ಬಹುತೇಕ ವಿದ್ಯಾರ್ಥಿಗಳು ವಿಟಮಿನ್ ಕೊರತೆಯಿಂದ ಬಳಲುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ನಾಲ್ಕು ವಿದ್ಯಾರ್ಥಿಗಳಲ್ಲಿ ಲಿಪೋಪ್ರೋಟೀನ್ ಕಂಡು ಬಂದಿದ್ದು, ಇದು ಸಹ ಕೆಟ್ಟ ಕೊಲೆಸ್ಟ್ರಾಲ್ ಮಾದರಿಯ ಒಂದು ಕೊಬ್ಬಿನಾಂಶವಾಗಿದ್ದು, ಹೃದಯಘಾತ, ಸ್ಟ್ರೋಕ್ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ.

ಶೇ. 85 ರಷ್ಟು ವಿದ್ಯಾರ್ಥಿಗಳಲ್ಲಿ C-reactive protein ಹೆಚ್ಚಳವಾಗಿರುವುದು ಅಧ್ಯಯನದಲ್ಲಿ ದೃಢಪಟ್ಟಿದೆ. ಇದು ಸೋಂಕು ಮತ್ತು ಹೃದಯ ಅಪಾಯದಲ್ಲಿರುವ ಸೂಚಕವಾಗಿದ್ದು, ಶೇ. 85 ರಷ್ಟು ವಿದ್ಯಾರ್ಥಿಗಳಲ್ಲಿ C-reactive protein ಹೆಚ್ಚಳವಾಗಿರುವುದು ಅಧ್ಯಯನದಲ್ಲಿ ಪತ್ತೆಯಾಗಿರುವುದು ಅಧ್ಯಯನ ತಂಡವನ್ನೇ ಬೆಚ್ಚಿ ಬೀಳಿಸಿದೆ.

ಅಧ್ಯಯನ ತಂಡದ ಸಲಹೆ

ವಿದ್ಯಾರ್ಥಿಗಳು ಹೃದಯ ಸಂಬಂಧಿ ಕಾಯಿಲೆ, ಹೈಪರ್‌ಟೆನ್ಷನ್ ಮತ್ತಿತರ ಕಾಯಿಲೆಗಳಿಗೆ ಒಳಗಾಗುತ್ತಿರುವುದು ಆಘಾತಕಾರಿ ಸಂಗತಿ. ವಿದ್ಯಾರ್ಥಿಗಳ ಜೀವನ ಶೈಲಿ ಬದಲಾವಣೆ, ನಿರಂತರ ಹೃದಯ ತಪಾಸಣೆಗೆ ಶಾಲಾ ಆರೋಗ್ಯ ಕಾರ್ಯಕ್ರಮದಲ್ಲಿ ಅನುಷ್ಠಾನಗೊಳಿಸುವ ತುರ್ತು ಅಗತ್ಯವಿದೆ. ಈ ಬಗ್ಗೆ ಸಾರ್ವಜನಿಕ ಆರೋಗ್ಯ ಸುಧಾರಣೆ ಕ್ರಮ ಕೈಗೊಳ್ಳಬೇಕಿದೆ ಎಂದು ಅಧ್ಯಯನ ತಂಡದಲ್ಲಿದ್ದ ಡಾ. ಮಂಜುನಾಥ್ ನೇಕಾರ್ ಅವರು ತಿಳಿಸಿದ್ದಾರೆ.

ಇನ್ನೂ ವಿಷನ್ ಗ್ರೂಪ್ ಆನ್ ಬಯೋಟೆಕ್ನಾಲಜಿಯ ಸದಸ್ಯರಾದಂತ ಪ್ರೊ.ಡಾ.ಯುಎಸ್ ವಿಶಾಲ್ ರಾವ್ ಅವರು, ಶಾಲಾ ಮಕ್ಕಳ ಅರೋಗ್ಯದ ಬಗ್ಗೆ ಕಾಳಜಿ ವಹಿಸಿ ಅಧ್ಯಯನ ನಡೆಸಿದ ಕಿಮ್ಸ್ ವೈದ್ಯರ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮಕ್ಕಳ ಆರೋಗ್ಯ ರಕ್ಷಣೆ ಮಾಡುವುದು ಪೋಷಕರ ಮತ್ತು ಮತ್ತು ಸರ್ಕಾರದ ಆದ್ಯ ಕರ್ತವ್ಯ. ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆ, ಹೈಪರ್ ಟೆನ್ಷನ್ ಕಾಣಿಸಿಕೊಂಡಿರುವುದು ಎಚ್ಚರಿಕೆಯ ಗಂಟೆ. ಮಕ್ಕಳಿಗೆ ನಿರಂತರವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವ, ಅವರಿಗೆ ಆರಂಭದಿಂದಲೇ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸುವ ಅಗತ್ಯತೆಯನ್ನು ಈ ಅಧ್ಯಯನ ವರದಿ ಸೂಚಿಸುತ್ತದೆ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *