Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೈದರಾಬಾದ್‌: 14 ದಿನಗಳ ಮಗುವನ್ನು ತಂದೆಯೇ ಕೊಂದು, ಮೃತದೇಹ ಕಸದ ತೊಟ್ಟಿಗೆ ಎಸೆದ ಭೀಕರ ಪ್ರಕರಣ

Spread the love

ಹೈದರಾಬಾದ್‌: 14 ದಿನಗಳ ಮಗುವನ್ನು ತಂದೆಯೇ ಭೀಕರವಾಗಿ ಕೊಂದು ಮೃತದೇಹವನ್ನು ಕಸದ ತೊಟ್ಟಿಗೆ ಎಸೆದ ಘಟನೆ ಹೈದರಾಬಾದ್‌ನ ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ಜಗತ್‌ ಈ ಕೊಲೆ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ.

ನೇಪಾಳ ಮೂಲದ ಆರೋಪಿ ಜಗತ್‌, ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಹೈದರಾಬಾದ್‌ನ ಗೋಲ್ಕೊಂಡದಲ್ಲಿ ವಾಸವಿದ್ದ.

ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜಗತ್‌ ದಂಪತಿಗೆ ಕಳೆದ 14 ದಿನಗಳ ಹಿಂದಷ್ಟೇ ಮುದ್ದಾದ ಹೆಣ್ಣು ಮಗು ಜನಿಸಿತ್ತು.

ಅದೇನಾಯ್ತೋ ಗೊತ್ತಿಲ್ಲ ನಿನ್ನೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಜಗತ್‌ ಏಕಾಏಕಿ ಮಗುವನ್ನು ಅಪಾರ್ಟ್ಮೆಂಟ್‌ನಿಂದ ಹೊರಗೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಮಗುವಿನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮೃತದೇಹವನ್ನು ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಟೋಲಿಚೌಕಿಯ ಕಸದ ತೊಟ್ಟಿಯ ಬಳಿ ಎಸೆದು ಹೋಗಿದ್ದಾನೆ. ಹಸುಗೂಸನ್ನು ಕಳೆದುಕೊಂಡ ಜಗತ್ ಪತ್ನಿ ಪತಿಯ ಕ್ರೌರ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿ ದೂರಿನ ಮೇರೆಗೆ ಗೋಲ್ಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಸದ್ಯ ಆರೋಪಿ ಜಗತ್‌ನನ್ನು ಬಂಧಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *