ಸ್ನೇಹಿತನಿಗೆ ಸಾಲ ತೀರಿಸಲು ಪತ್ನಿಯನ್ನು ಮಾರಾಟ ಮಾಡಿದ ಪತಿ

ಭೋಪಾಲ್: ಸ್ನೇಹಿತನಿಂದ ಪಡೆದಿದ್ದ 50,000 ರೂ. ಮರುಪಾವತಿಸಲು ಸಾಧ್ಯವಾಗದೇ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ಮಾರಾಟ ಮಾಡಿದ್ದು, ಬಳಿಕ ಸ್ನೇಹಿತ ಆ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಸಂತ್ರಸ್ತೆ ಇಂಧೋರ್ನಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು “ಜೀರೋ’ ಎಫ್ಐಆರ್ (ಠಾಣಾ ವ್ಯಾಪ್ತಿಯಿಲ್ಲದ, ಯಾವುದೇ ಠಾಣೆಯಲ್ಲೂ ಕ್ರಮ ಕೈಗೊಳ್ಳಬಹುದಾದ) ದಾಖಲಿಸಿ ಧಾರ್ ಪೊಲೀಸರಿಗೆ ಕಳುಹಿಸಿದ್ದಾರೆ.

ದೂರಿನನ್ವಯ ಮಹಿಳೆಯ ಪತಿ ಜೂಜುಕೋರನಾಗಿದ್ದು, ಇದರಿಂದ ದಿನದಿಂದ ದಿನಕ್ಕೆ ಆತನ ಸಾಲ ಹೆಚ್ಚುತ್ತಿತ್ತು. ಅದರ ಬದಲಿಗೆ ತನ್ನ ಸ್ನೇಹಿತನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಪತಿ ಪೀಡಿಸಿದ್ದ ಎನ್ನಲಾಗಿದೆ. ಇದೀಗ ಪತಿ ಹಾಗೂ ಆತನ ಸ್ನೇಹಿತರಿಬ್ಬರೂ ಪರಾರಿಯಾಗಿದ್ದಾರೆ.