ಪತ್ನಿಯ ದೂರು ಹಿಂಪಡೆಯಲು ಪತಿಯ ‘ಮಧುರ ಗಾನ’ದ ಮೊರೆ

ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ ಅಂತ ಗಾದೆಯೊಂದಿತ್ತು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದ್ದರೂ. ಈ ಗಾದೆ ಇತ್ತೀಚಿನ ದಿನಗಳಲ್ಲಿ ಸುಳ್ಳು ಎಂಬುದು ಸಾಬೀತಾಗುತ್ತಿದೆ. ಗಂಡ ಹೆಂಡತಿ ಜಗಳ ಕೋರ್ಟ್ ಮೆಟ್ಟಿಲೇರಿ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿದೆ.

ಆದರೆ ಇಲ್ಲೊಂದು ಕಡೆ ವಿಭಿನ್ನ ಎಂಬಂತೆ ಗಂಡ ಹೆಂಡತಿ ಜಗಳ ಪತಿಯ ಮಧುರ ಹಾಡಿನಿಂದಾಗಿ ಅಂತ್ಯಗೊಂಡಿದೆ. ಆದರೆ ಇದು ಹಳೆಯ ಘಟನೆಯೊಂದರ ವೀಡಿಯೋ ಆಗಿದೆ.
ಆದರೆ ಇತ್ತೀಚೆಗೆ ಗಂಡ ಹೆಂಡತಿ ಜಗಳ ತೀವ್ರ ವಿಕೋಪಕ್ಕೆ ಹೋಗುತ್ತಿದ್ದು, ಪರಸ್ಪರರನ್ನು ಕೊಲ್ಲುವಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಕ್ಷುಲ್ಲಕ ಕಾರಣಕ್ಕೆ ವಿಚ್ಚೇದನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ವಾಸ್ತವದ ನಡುವೆ ಸಾಮಾಜಿಕ ಜಾಲತಾಣದಲ್ಲಿಈ ವೀಡಿಯೋ ಮತ್ತೆ ವೈರಲ್ ಆಗಿದೆ. ಜನ ಈ ವೀಡಿಯೋ ನೋಡಿ ಹಲವು ಕಾಮೆಂಟ್ ಮಾಡುತ್ತಿದ್ದಾರೆ.
ಈ ವೀಡಿಯೋದ ಹಿನ್ನೆಲೆ ಹೀಗಿದೆ.
ಗಂಡನ ಮೇಲಿನ ಸಿಟ್ಟಿನಿಂದ ಅಸಮಾಧಾನಗೊಂಡಿದ್ದ ಹೆಂಡತಿಯೊಬ್ಬಳು ಗಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಆದರೆ ಅಲ್ಲಿ ಪತಿ ಆಕೆಗಾಗಿ ಸಿನಿಮಾವೊಂದರ ಪ್ರೇಮಗೀತೆಯನ್ನು ಹಾಡಿದ್ದು, ಗಂಡನ ಹಾಡು ಕೇಳಿ ದೂರು ನೀಡಲು ಬಂದ ಹೆಂಡತಿ ಪ್ಲಾಟ್ ಆಗಿದ್ದು, ಗಂಡನ ಹೆಗಲಿಗೆ ತಲೆಒರಗಿಸಿದ್ದಾಳೆ. ವೀಡಿಯೋದಲ್ಲಿ ಗಂಡ 2015ರ ಬದ್ಲಾಪುರ ಸಿನಿಮಾದ ಜೀನಾ ಜೀನಾ ಹಾಡನ್ನು ಹಾಡಿದ್ದಾರೆ.
ಹಾಡಿನ ಲಿರೀಕ್ಸ್ ಹೀಗಿದೆ ನೋಡಿ…
ದಹಲೀಜ್ ಪೆ ಮೇರೆ ದಿಲ್ ಕಿ
ಜೋ ರಖೆ ಹೆ ತೂನೆ ಕದಂ
ತೇರೆ ನಾಮ ಪೇ ಮೇರಿ ಜಿಂದಗಿ
ಲಿಖ ದೀ ಮೇರೆ ಹಮದಮ್
ಹಾಂ ಸೀಖಾ ಮೈನ್ನೆ ಜೀನಾ ಜೀನಾ ಕೈಸೆ ಜೀನಾ
ಹಾಂ ಸೀಖಾ ಮೈನ್ನೆ ಜೀನಾ ಮೇರೆ ಹಮದಮ್
ನಾ ಸೀಖಾ ಕಭಿ ಜೀನಾ ಜೀನಾ ಕೈಸೇ ಜೀನಾ
ನಾ ಸೀಖಾ ಜೀನಾ ತೇರೆ ಬಿನಾ ಹಮದಮ್
ನೀನು ನನ್ನ ಹೃದಯದ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಿದ್ದೀಯಾ, ನನ್ನ ಜೀವನವನ್ನು ನಿನ್ನ ಹೆಸರಿನಲ್ಲಿ ಬರೆದಿದ್ದೇನೆ ನೀನು ಹೇಗೆ ಬದುಕ ಬೇಕು ಎಂದು ನನಗೆ ಕಲಿಸಿದ್ದಿ ಆದರೆ ನೀನಿಲ್ಲದೇ ನಾನು ಹೇಗೆ ಬದುಕಬೇಕು ಎಂದು ನೀನು ಕಲಿಸಿಲ್ಲ ಎಂದು ಈ ಹಾಡಿನ ಭಾವಾರ್ಥವಿದೆ. ಗಂಡ ಹೀಗೆ ಹಾಡು ಹೇಳಿದರೆ ಯಾವ ಹೆಣ್ಣು ತಾನೇ ಬಿಟ್ಟು ಹೋಗ್ತಾಳೆ ಅಲ್ವಾ? ಸೋ ಆ ಹೆಂಡ್ತಿಯೂ ಗಂಡನ ಹಾಡಿಗೆ ಕರಗಿ ಹೋಗಿದ್ದಾಳೆ.
ಗಂಡ ಹೆಂಡತಿ ಸಂಬಂಧದ ಅರ್ಥ ಮೌಲ್ಯ ಬದಲಾಗುತ್ತಿರುವ, ದಿನೇ ದಿನೇ ಬಿರುಕುಗಳು ಹೆಚ್ಚಾಗುತ್ತಿರು ಕಾಲಘಟ್ಟದಲ್ಲಿ ನಾವಿರುದ ಈ ಸಂದರ್ಭದಲ್ಲಿ ಈ ಗಂಡಹೆಂಡತಿಯ ಭಾವುಕ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ
ಘಟನೆ ನಡೆದಿದ್ದೆಲ್ಲಿ?
ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಝಾನ್ಸಿಯಲ್ಲಿ. ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಪತ್ನಿಯ ಮುಂದೆಯೇ ಪತಿ ಈ ಭಾವುಕ ರೋಮ್ಯಾಂಟಿಕ್ ಹಾಡನ್ನು ಹಾಡಿದ್ದು, ಪತ್ನಿ ಗಂಡನ ಹಾಡು ಕೇಳಿ ಭಾವುಕಳಾಗಿದ್ದಾಳೆ. ಈ ದೃಶ್ಯ ಅಲ್ಲಿದ್ದ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಕೂಡ ಭಾವುಕಗೊಳಿಸಿದೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಡಿವೋರ್ಸ್ ಹೇಗೆ ತಡೆಯಬಹುದು ಎಂಬುದನ್ನು ಈತ ಹೇಳಿಕೊಟ್ಟಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಈತ ಡಿವೋರ್ಸ್ ತಡೆಯುವ ಮೂಲಕ ತನ್ನ ಆಸ್ತಿಯನ್ನು ಬುದ್ಧಿವಂತಿಕೆಯಿಂದ ಉಳಿಸಿದ್ದಾನೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ 2023ರ ವೀಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಈಗ ಈ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಮತ್ತೆ ಕೆಲವರು ಈ ದಂಪತಿ ಚೆನ್ನಾಗಿ ಬದುಕುತ್ತಿದ್ದಾರೆ ಎಂಬ ಭರವಸೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾನು ಈಗಲೇ ಹಾಡುವುದಕ್ಕೆ ಕಲಿಯಬೇಕು ಎಂದು ತಮಾಷೆ ಮಾಡಿದ್ದಾರೆ.
ಅದೇನೆ ಇರಲಿ ಸಂಸಾರದಲ್ಲಿ ಸೋತು ಗೆಲ್ಲಬೇಕು ಎಂಬುದು ಹಿರಿಯರ ಮಾತು ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
