ಮದುವೆಯಾಗಿ ನಾಪತ್ತೆಯಾಗಿದ್ದ ಗಂಡ , ರೀಲ್ಸ್‌ನಲ್ಲಿ ಬೇರೆ ಯುವತಿಯ ಜೊತೆ ಪತ್ತೆ

ಬೆಂಗಳೂರು : ಕಾಣೆಯಾದ ತನ್ನ ಪತ್ನಿಯನ್ನು ಪತ್ತೆ ಹಚ್ಚಿಕೊಡುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಹತ್ತಿ ಸುಮಾರು 2 ಗಂಟೆಗಳ ಕಾಲ ಹೈಡ್ರಾಮಾ ಸೃಷ್ಟಿಸಿದ ಘಟನೆ ಆನೇಕಲ್ ಬಳಿ ಭಾನುವಾರ ನಡೆದಿದೆ. ಅಂತಿಮವಾಗಿ ಪೊಲೀಸ್ ಇನ್ಸ್‌ಪೆಕ್ಟರ್ ನಮ್ಮನೆ ದೇವ್ರಾಣೆ ನಿನ್ನ ಹೆಂಡತಿ ಹುಡುಕಿ ಕೊಡುವ ಜವಾಬ್ದಾರಿ ನಂದು ಎಂದು ಭರವಸೆಯನ್ನು ಕೊಟ್ಟ ನಂತರ ಮಣಿದ ವ್ಯಕ್ತಿ ಕೆಳಗೆ ಇಳಿದು ಬಂದಿದ್ದಾನೆ.

ಘಟನೆಯ ವಿವರ:
ಆನೇಕಲ್‌ನ ಅತ್ತಿಬೆಲೆ ಬಳಿ ಕಟ್ಟಡ ಕಾರ್ಮಿಕನಾಗಿರುವ ಚಿರಂಜೀವಿ (30) ಎಂಬಾತ ಈ ಹೈಡ್ರಾಮಾದ ಕೇಂದ್ರಬಿಂದು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ 112 ತುರ್ತು ಸಹಾಯವಾಣಿಗೆ ಕರೆ ಮಾಡಿದ ಚಿರಂಜೀವಿ, ತನ್ನ ಪತ್ನಿ ರೋಜಾ (25) ಮನೆಗೆ ಹಿಂದಿರುಗದೇ ಇದ್ದರೆ ಮೊಬೈಲ್ ಟವರ್ ಮೇಲಿಂದ ಬಿದ್ದು ಆತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಕರೆ ಬಂದ ಕೂಡಲೇ ಪೊಲೀಸರು ಅವನಿರುವ ಸ್ಥಳವನ್ನು ಪತ್ತೆಹಚ್ಚಿದರು. ತಕ್ಷಣವೇ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಯನ್ನೂ ಸ್ಥಳಕ್ಕೆ ಕರೆಸಿ ರಕ್ಷಣೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಚಿರಂಜೀವಿ ಸುಮಾರು 150 ಅಡಿ ಎತ್ತರದ ಮೊಬೈಲ್ ಟವರ್ ಹತ್ತಿ ಕುಳಿತಿದ್ದನು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆತನನ್ನು ಕೆಳಗೆ ಇಳಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಚಿರಂಜೀವಿ ತನ್ನ ಪತ್ನಿ ರೋಜಾ ಕಾಣೆಯಾಗಲು ತಮ್ಮ ಮನೆ ಮಾಲೀಕ ಹರೀಶ್ ಕಾರಣ ಎಂದು ಆರೋಪಿಸಿದ್ದಾನೆ. ಹರೀಶ್‌ಗೆ ನನ್ನ ಹೆಂಡತಿ ರೋಜಾ ಜೊತೆ ಸಂಬಂಧವಿದೆ ಎಂದು ಚಿರಂಜೀವಿ ಅನುಮಾನ ವ್ಯಕ್ತಪಡಿಸಿದ್ದನು. ಆದರೆ, ಅಲ್ಲಿಯೇ ಇದ್ದ ಹರೀಶ್ ಆರೋಪವನ್ನು ನಿರಾಕರಿಸಿದರೂ, ಚಿರಂಜೀವಿ ಕೆಳಗೆ ಇಳಿಯಲು ಒಪ್ಪಲಿಲ್ಲ.
