Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಹಸ್ಯ ಕ್ಯಾಮರಾ ಅಳವಡಿಸಿದ್ದ ಪತಿ: ದೂರು ದಾಖಲಾಗುತ್ತಿದ್ದಂತೆ ಪರಾರಿ; ಪತ್ನಿಯ ಖಾಸಗಿ ವಿಡಿಯೋ ಲೀಕ್!

Spread the love

ಬೆಂಗಳೂರು: ಮನೆಯ ಬೆಡ್​ ರೂಂನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಸೈಯದ್ ಇನಾಮುಲ್ ಎಂಬಾತನೊಂದಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಕೆಯ ಮದುವೆಯಾಗಿದೆ. ಆದರೆ, ಆತ ಈಗಾಗಲೇ ಮತ್ತೊಂದು ಮದುವೆಯಾಗಿದ್ದ. ಆ ವಿಚಾರವನ್ನು ತಿಳಿಸದೇ ಎರಡನೇ ಮದುವೆ ಮಾಡಿಕೊಂಡಿದ್ದಾನೆಂದು ಆರೋಪ ಮಾಡಲಾಗಿದೆ.

19 ಮಹಿಳೆಯರ ಜತೆ ಸಂಬಂಧವಿದೆ ಎಂದಿದ್ದ ಸಯ್ಯದ್!

ಆರೋಪಿ ಸಯ್ಯದ್ ದಿನನಿತ್ರ ಹೆಂಡತಿಗೆ ಕಿರುಕುಳ ನೀಡುತ್ತಿದ್ದುದಲ್ಲದೆ, 19 ಮಂದಿ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೆಮ್ಮೆಪಟ್ಟು ಹೇಳಿಕೊಳ್ಳುತ್ತಿದ್ದ ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಹೆಂಡತಿ ಜತೆಗಿನ ಸೆಕ್ಸ್ ವಿಡಿಯೋ ದುಬೈಯಲ್ಲಿರೋ ಸ್ನೇಹಿತರಿಗೆ ಕಳುಹಿಸ್ತಿದ್ದ ಸಯ್ಯದ್

ಮನೆಯ ಬೆಡ್​ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿ ಹೆಂಡತಿ ಜತೆಗಿನ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ಆರೋಪಿ, ಆ ಖಾಸಗಿ ವಿಡಿಯೋಗಳನ್ನು ದುಬೈಯಲ್ಲಿ ವಾಸಿಸುವ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲದೆ, ಹೊರದೇಶದಲ್ಲಿರುವ ತನ್ನ ಕೆಲವು ಮಂದಿ ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಪತ್ನಿಯನ್ನು ಒತ್ತಾಯಿಸಿರುವ ಗಂಭೀರ ಆರೋಪ ಕೂಡ ದಾಖಲಾಗಿದೆ.

ಭರ್ಜರಿ ವರದಕ್ಷಿಣೆಯನ್ನೂ ಪಡೆದಿದ್ದ ಆರೋಪಿ

ಆರೋಪಿಗೆ ವಿವಾಹದ ಸಮಯದಲ್ಲಿ ವರದಕ್ಷಿಣೆಯಾಗಿ ಯಮಹಾ ಏರೋಕ್ ದ್ವಿ ಚಕ್ರ ವಾಹನ, 340 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕೊಲಾಗಿತ್ತು. ಮದುವೆ ಸಮಯದಲ್ಲಿ ಆರೋಪಿಯ ದೊಡ್ಡ ತಂಗಿಯ ಗಂಡನಾದ ಅಮೀನ್ ಬೇಗ್ (ಆರೋಪಿ-2) ಎಂಬಾತನು ಕ್ಯಾಟರಿಂಗ್ ವಿಳಂಬವಾಗಿರುವ ವಿಚಾರದಲ್ಲಿ, ಹಲವಾರು ಜನರ ಎದುರು ಜಗಳ ಮಾಡಿ ಪಿರ್ಯಾದಿಯ ಕುಟುಂಬ ವರ್ಗದವರಿಗೆ ಅವಮಾನ ಮಾಡಿರುತ್ತಾನೆ. 17-12-2024 ರಂದು ಆರೋಪಿ ಸಯ್ಯದ್, ತನಗೆ ಈಗಾಗಲೇ ಮದುವೆಯಾಗಿದ್ದು, ನೀನು 2ನೇ ಹೆಂಡತಿಯಾಗಿದ್ದಿ. ಅಲ್ಲದೇ ನನಗೆ 19 ಹೆಂಗಸರೊಂದಿಗೆ ಸಂಬಂಧವಿದೆ ಎಂಬುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆಯು ಆಕೆಯ ತಂದೆ-ತಾಯಿಯನ್ನು ಭೇಟಿ ಮಾಡದಂತೆ ನೋಡಿಕೊಂಡಿದ್ದ ಆರೋಪಿ, ಒಂದು ವೇಳೆ ಭೇಟಿಯಾಗಿ ತನ್ನ ಬಗ್ಗೆ ದೂರಿತ್ತರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದ. ಸದ್ಯ ಮಹಿಳೆಯ ದೂರಿನ ಆಧಾರದಲ್ಲಿ ಪುಟ್ಟೇನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *