ಅಪ್ಪನ ಎದುರೇ ಮಗಳನ್ನು ಕಾರಿನಲ್ಲಿ ಅಪಹರಿಸಿದ ಪತಿ!

ಹಾಸನ : ಅಪ್ಪನ ಎದುರೇ ಮಗಳನ್ನು ಕಾರಿನಲ್ಲಿ ಅಪಹರಿಸಿದ ಆರೋಪ ಕೇಳಿಬಂದಿದೆ. ಬೇಲೂರು (Belur) ತಾಲೂಕಿನ, ಅರೇಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಮಗಳನ್ನು ಕಾಪಾಡಲು ಹೋಗಿ ತಂದೆ ಚಲಿಸುತ್ತಿದ್ದ ಕಾರಿನ (Car) ಡೋರ್ಗೆ ನೇತಾಡುತ್ತ ಸುಮಾರು 200 ಮೀಟರ್ ದೂರ ಸಾಗಿದ್ದಾರೆ.
ಬಳಿಕ, ಕೆಳೆಗೆ ಬಿದ್ದು ಗಾಯಗೊಂಡಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದೊಂದು ಪ್ರೇಮ ಕಹಾನಿ
ಚನ್ನರಾಯಪಟ್ಟಣ ಮೂಲದ ಯುವಕ ಪ್ರಜ್ವಲ್ ಮತ್ತು ಮಲಸಾವರ ಗ್ರಾಮದ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಪ್ರೇಮಿಗಳು. ಎರಡು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಈ ವಿಚಾರ ತಿಳಿದ ಯುವತಿ ಪ್ರಸ್ಟಲ್ ಡಿಯಲಾರ ತಂದೆ-ತಾಯಿ ಮರಳಿ ಮನೆಗೆ ಬರುವಂತೆ ಮಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಪೋಷಕರ ಒತ್ತಡ ಹಿನ್ನೆಲೆಯಲ್ಲಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಮರಳಿ ಮನೆಗೆ ಬಂದಿದ್ದಾರೆ.
ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಮನೆಗೆ ಮರಳುತ್ತಿದ್ದಂತೆ ಆಕೆಯ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಪತಿ ಪ್ರಜ್ವಲ್ಗೆ ಹೇಳಿದ್ದಾರೆ. ಅಲ್ಲದೇ, ತನ್ನನ್ನು ಕರೆದುಕೊಂಡು ಹೋಗುವಂತೆ ಪತಿ ಪಜ್ವಲ್ಗೆ ಹೇಳಿದ್ದಾರೆ.
ಪತ್ನಿಯ ಇಚ್ಚೆಯಂತೆ ಅರೇಹಳ್ಳಿ ಗ್ರಾಮಕ್ಕೆ ಪ್ರಜ್ವಲ್ ಬಂದಿದ್ದಾರೆ. ಪತ್ನಿಯನ್ನು ತನ್ನ ಜೊತೆ ಕಳಸಿಕೊಡುವಂತೆ ಪತಿ ಪ್ರಜ್ವಲ್ ಹೇಳಿದಾಗ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ (ಮೇ.13) ರಂದು ತಂದೆ ಜೊತೆ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಅರೇಹಳ್ಳಿ ಪಟ್ಟಣದ ಹೈಸ್ಕೂಲ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರಜ್ವಲ್, ಪತ್ನಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ರನ್ನು ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ತಡೆಯಲು ಹೋಗಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ರ ತಂದೆ ಕಾರಿನ ಡೋರ್ಗೆ ಜೋತು ಬಿದ್ದಿದ್ದಾರೆ. ಚಾಲಕ ಮಾತ್ರ ಕಾರು ನಿಲ್ಲಿಸಿದೆ ಸುಮಾರು 200 ಮೀಟರ್ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ರ ತಂದೆಯನ್ನು ಎಳೆದೊಯ್ದಿದ್ದಾನೆ. ದಂಪತಿಗಳು ಚನ್ನರಾಯಪಟ್ಟಣ ಶಹರ ಠಾಣೆ ಪೊಲೀಸರ ಎದುರು ಹಾಜಾರಾಗಿದ್ದಾರೆ.