Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಲಾರದಲ್ಲಿ ಚಾಕೋಲೆಟ್‌ನಲ್ಲಿ ಮಾನವನ ಹಲ್ಲು ಪತ್ತೆ: ಆತಂಕಕ್ಕೆ ಒಳಗಾದ ಗ್ರಾಹಕರು!

Spread the love

ಕೋಲಾರ: ಚಾಕೋಲೆಟ್‌ನಲ್ಲಿ ಮಾನವನ ಹಲ್ಲು ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಬೂದಿಕೋಟೆ ಗ್ರಾಮದ ನಿವಾಸಿ ಭಾರತಿ ಎಂಬುವವರು ಚಿಲ್ಲರೆ ಅಂಗಡಿಯಲ್ಲಿ ಟೂಟಿ ಫ್ರೂಟ್ ಕಂಪನಿಯ ಚಾಕೋಲೆಟ್ ಖರೀದಿಸಿದ್ದರು. ಅದರ ರ್‍ಯಾಪರ್‌ ಬಿಡಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸುವಾಗ ಗಟ್ಟಿಯಾದ ಪದಾರ್ಥ ಇರುವುದು ಕಂಡು ಬಂದು ಚುಚ್ಚುವಂತೆ ಭಾಸವಾಗಿದೆ.

ಕೂಡಲೇ ಅದನ್ನು ಬಾಯಿಯಿಂದ ಹೊರತೆಗೆದು ನೋಡಿದಾಗ ಮಾನವನ ಹಲ್ಲು ಎಂಬುದು ಗೊತ್ತಾಗಿದೆ. ಹಲ್ಲಿನಲ್ಲಿ ಕಬ್ಬಿಣದ ಸಣ್ಣ ತುಂಡು ಇರುವುದು ಸಹ ಕಂಡು ಬಂದಿದ್ದು, ಭಾರತಿ ಆತಂಕಕ್ಕೆ ಒಳಗಾಗಿದ್ದಾರೆ. ಈ ಚಾಕೋಲೆಟ್‌ನ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಭಾರತಿ ಎಂಬವರು ತಮ್ಮ ಮನೆಯ ಸಮೀಪದ ಚಿಲ್ಲರೆ ಅಂಗಡಿಯಲ್ಲಿ ಚಾಕೊಲೇಟ್ ಖರೀದಿಸಿದ್ದರು. ಚಾಕೊಲೇಟ್ ತಿನ್ನುವಾಗ ಅದರೊಳಗೆ ಗಟ್ಟಿಯಾದ ವಸ್ತುವೊಂದು ಕಾಣಿಸಿತು. ತಕ್ಷಣ ತೆಗೆದು ನೋಡಿದಾಗ ಅದು ಮನುಷ್ಯನ ಹಲ್ಲು ಎಂಬುದು ದೃಢಪಟ್ಟಿದೆ.

ಈ ಘಟನೆಯಿಂದ ಗಾಬರಿಗೊಂಡ ಭಾರತಿ, ತಕ್ಷಣ ಚಿಲ್ಲರೆ ಅಂಗಡಿಯ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಚಿಲ್ಲರೆ ಅಂಗಡಿಯ ಮಾಲೀಕ, ಈ ಚಾಕೋಲೆಟ್‌ ತಾವು ಖರೀದಿಸಿದ ಡಿಸ್ಟ್ರಿಬ್ಯೂಟರ್‌ನಿಂದ ಬಂದಿದೆ ಎಂದು ತಿಳಿಸಿದ್ದಾರೆ. ಆದರೆ, ಚಾಕೊಲೇಟ್ ಯಾವ ಕಂಪನಿಯದ್ದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ನಾವು ಡಿಸ್ಟ್ರಿಬ್ಯೂಟರ್ ಕೊಟ್ಟ ಚಾಕೋಲೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ಇಂತಹ ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅಂಗಡಿಯ ಮಾಲೀಕರು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *