ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಕಾರು ಮೇಲೆ ಬೃಹತ್ ಮರ ಬಿದ್ದು ಜಖಂ

ಚಿಕ್ಕಮಗಳೂರು: ಕಲ್ಲತ್ತಗಿರಿ ಫಾಲ್ಸ್‌ಗೆ ಬಂದಿದ್ದ ಪ್ರವಾಸಿಗರ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದ್ದು, ಕಾರು ಸಂಪೂರ್ಣ ಜಖಂ ಆಗಿದೆ.
ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್‌ಗೆ ಪ್ರವಾಸಿಗರು ಬಂದಿದ್ದರು. ಈ ವೇಳೆ, ಕಾರು ನಿಲ್ಲಿಸಿ ಫಾಲ್ಸ್ ನೋಡಲು ತೆರಳಿದ್ದಾಗ ಗಾಳಿ ಮಳೆಗೆ ಮರ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.