Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಮಲ್ ಹಾಸನ್ ‘ಥಗ್ ಲೈಫ್’ಗೆ ಭಾರಿ ನಷ್ಟ: ₹300 ಕೋಟಿ ಬಜೆಟ್‌ಗೆ ₹46 ಕೋಟಿ ಗಳಿಕೆ!

Spread the love

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾದ ಗಳಿಕೆ ದಿನ ಕಳೆದಂತೆ ಹೀನಾಯ ಸ್ಥಿತಿ ತಲುಪಿದೆ. ಈ ಚಿತ್ರದ ಬಜೆಟ್ 300 ಕೋಟಿ ರೂಪಾಯಿ ಎಂದು ತಂಡ ಬೀಗಿದೆ. ಆದಾಗ್ಯೂ ಸಿನಿಮಾದ ಗಳಿಕೆ ಮಾತ್ರ 46 ಕೋಟಿ ರೂಪಾಯಿ ಮಾತ್ರ. ಹೀಗೆ ಮುಂದುವರಿದರೆ ನಿರ್ಮಾಪಕ ಕಮಲ್ ಹಾಸನ್​ಗೆ ಮತ್ತಷ್ಟು ನಷ್ಟ ಆಗಲಿದೆ. ಕರ್ನಾಟಕದಲ್ಲಿ ರಿಲೀಸ್​ನ ಅವರು ಎದುರು ನೋಡುತ್ತಿದ್ದಾರೆ. ಒಂದೊಮ್ಮೆ ಅವರು ಕ್ಷಮೆ ಕೇಳಿ ಸಿನಿಮಾ ಇಲ್ಲಿ ರಿಲೀಸ್ ಆದರೂ ಪರಿಸ್ಥಿತಿಯಲ್ಲಿ ಅಂಥ ಬದಲಾವಣೆ ಏನನ್ನೂ ನಿರೀಕ್ಷಿಸಲಾಗದು.

‘ಥಗ್ ಲೈಫ್’ ಸಿನಿಮಾ ರಿಲೀಸ್​ಗೂ ಮೊದಲೇ ವಿವಾದ ಮಾಡಿಕೊಂಡಿತು. ಈ ಚಿತ್ರದ ನಿರ್ಮಾಪಕ ಹಾಗೂ ನಟ ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿಕೆ ನೀಡಿ ಕಷ್ಟಕ್ಕೆ ಸಿಲುಕಿದರು. ಆಮೇಲೆ ಪತ್ರದ ಮೇಲೆ ಪತ್ರ ಬರೆದ ಅವರು ಎಲ್ಲಿಯೂ ಕ್ಷಮೆ ಕೇಳಿಲ್ಲ. ಇದರಿಂದ ಸಿನಿಮಾ ರಿಲೀಸ್​ಗೆ ಅವಕಾಶ ಸಿಕ್ಕಿಲ್ಲ. ಇದರ ಜೊತೆಗೆ ಸಿನಿಮಾ ಕೆಟ್ಟ ವಿಮರ್ಶೆ ಪಡೆಯಿತು. ಈ ಎರಡೂ ಕಾರಣಕ್ಕೆ ಸಿನಿಮಾಗೆ ದೊಡ್ಡ ನಷ್ಟ ಉಂಟಾಗಿದೆ.

‘ಥಗ್ ಲೈಫ್’ ಸಿನಿಮಾ ಶುಕ್ರವಾರ (ಜೂನ್ 13) 75 ಲಕ್ಷ ರೂಪಾಯಿ, ಶನಿವಾರ (ಜೂನ್ 14) 93 ಲಕ್ಷ ರೂಪಾಯಿ ಹಾಗೂ ಭಾನುವಾರ (ಜೂನ್ 15) 69 ಲಕ್ಷ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರ ಒಟ್ಟಾರೆ ಗಳಿಕೆ ಕೇವಲ 46.35 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ಯವಾಗಿದೆ. ಇದರಿಂದ ನಿರ್ಮಾಪಕರು ಅದೆಷ್ಟು ದೊಡ್ಡ ನಷ್ಟ ಅನುಭವಿಸಿರಬಹುದು ನೀವೇ ಊಹಿಸಿ.

ಬುಕ್ ಮೈ ಶೋನಲ್ಲಿ ‘ಥಗ್ ಲೈಫ್’ ಚಿತ್ರಕ್ಕೆ 4.9 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 4.3 ರೇಟಿಂಗ್ ಸಿಕ್ಕಿದೆ. ಈ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *