Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಪಿಎಲ್ ಟಿಕೆಟ್‌ಗಳ GST ದರದಲ್ಲಿ ಬೃಹತ್ ಏರಿಕೆ: ಅಭಿಮಾನಿಗಳ ಕವಲತ್ತು ಶುರು

Spread the love

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯಿಂದಾಗಿ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬರಲಿದೆ. ಆದರೆ ಇತ್ತ ಇದೇ ಪರಿಷ್ಕರಣೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಟಿಕೆಟ್​ಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.

ಹೌದು, ಕೇಂದ್ರ ಸರ್ಕಾರ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಪರಿಷ್ಕರಣೆ ಮಾಡಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್ ಜಿಎಸ್​ಟಿ ತೆರಿಗೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆಗಳು ಕಡಿಮೆಯಾಗಲಿದೆ.

ಆದರೆ ಇದೇ ವೇಳೆ ಐಪಿಎಲ್ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಹೆಚ್ಚಿಸಲಾಗಿದೆ.  ಅಂದರೆ ಕಳೆದ ಬಾರಿಗಿಂತ ಇನ್ಮುಂದೆ ಐಪಿಎಲ್ ಟಿಕೆಟ್ ಮೇಲೆ ಶೇ.12 ರಷ್ಟು ಜಿಎಸ್​ಟಿ ದರ ಹೆಚ್ಚಾಗಲಿದೆ.

ಈ ಹಿಂದೆ, 1000 ರೂ. ಮೌಲ್ಯದ ಐಪಿಎಲ್ ಟಿಕೆಟ್‌ಗಳ ಮೇಲೆ 28% ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದರಿಂದಾಗಿ ಟಿಕೆಟ್‌ನ ಒಟ್ಟು ಬೆಲೆ 1280 ರೂ.ಗಳಾಗುತ್ತಿದ್ದರು. ಇದೀಗ ಐಪಿಎಲ್ ಟಿಕೆಟ್​ಗಳ ಮೇಲೆ ಶೇ.40 ರಷ್ಟು ಜಿಎಸ್​ಟಿ ವಿಧಿಸಲಿದ್ದಾರೆ ಎಂದು ವರದಿಯಾಗಿದೆ.

ಅದರಂತೆ ಮುಂದಿನ ಸೀಸನ್​ ಐಪಿಎಲ್ ವೇಳೆ ಟಿಕೆಟ್​ ದರಗಳು ಮತ್ತಷ್ಟು ದುಬಾರಿಯಾಗಲಿದೆ. ಅಂದರೆ 1000 ರೂ. ಟಿಕೆಟ್ ಖರೀದಿಸಿದರೆ, ಅದರ ಮೇಲೆ ಶೇ.40 ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ. ಇದರಿಂದ 1000 ರೂ. ಟಿಕೆಟ್ ದರವು 1400 ರೂ. ಆಗಲಿದೆ ಎಂದು ವರದಿಯಾಗಿದೆ.

ಇದೇ ರೀತಿ ಅತೀ ಕಡಿಮೆ ಟಿಕೆಟ್ ದರವಾಗಿರುವ 500 ರೂ.ಗಳ ಟಿಕೆಟ್‌ನ ಹೊಸ ಬೆಲೆಯು 700 ರೂ. ಆಗಲಿದೆ. ಇದಕ್ಕೂ ಮುನ್ನ 500 ರೂ. ಟಿಕೆಟ್ ದರವು ಜಿಎಸ್​ಟಿ ಸೇರಿ 640 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು 2000 ರೂ.ಗಳ ಟಿಕೆಟ್​ಗೆ 2560 ರೂ.ಗಳ ಬದಲಿಗೆ 2800 ರೂ.ಗಳನ್ನು ಪಾವತಿಸಬೇಕಾಗುತ್ತದೆ. 

ಅಂದರೆ ಹೊಸ ಜಿಎಸ್​ಟಿ ಪರಿಷ್ಕರಣೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರ ಟಿಕೆಟ್​ ದರಗಳು ಮತ್ತಷ್ಟು ಹೆಚ್ಚಾಗಲಿರುವುದು ಖಚಿತ. ಈ ದರವನ್ನು ಕಡಿಮೆ ಮಾಡಲು ಐಪಿಎಲ್ ಫ್ರಾಂಚೈಸಿಗಳು ಮುಂದಾಗಲಿದ್ದಾರಾ ಕಾದು ನೋಡಬೇಕಿದೆ.

ಅಭಿಮಾನಿಗಳ ಕೊರತೆ ಆತಂಕ:

ಐಪಿಎಲ್ ಟಿಕೆಟ್​ಗಳ ಬೆಲೆಯು ದುಬಾರಿಯಾದರೆ ಅಭಿಮಾನಿಗಳ ಕೊರತೆ ಕಂಡು ಬರುವ ಸಾಧ್ಯತೆ ಹೆಚ್ಚು. ಇದೀಗ ಪರಿಷ್ಕೃತ ಜಿಎಸ್​ಟಿ ದರದ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಅಭಿಮಾನಿಗಳು ಬರುವುದು ಕಡಿಮೆಯಾಗಲಿದೆಯಾ ಎಂಬ ಆತಂಕವೊಂದು ಶುರುವಾಗಿದೆ. ಹೀಗಾಗಿಯೇ ಮುಂಬರುವ ಐಪಿಎಲ್​ಗೂ ಮುನ್ನ ಟಿಕೆಟ್ ದರಗಳ ಬಗ್ಗೆ ಫ್ರಾಂಚೈಸಿಗಳ ನಡುವೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮತ್ತೊಂದೆಡೆ ಮಾನ್ಯತೆ ಪಡೆದ ಕ್ರೀಡಾಕೂಟದ ಟಿಕೆಟ್‌ನ ಬೆಲೆ 500 ರೂ. ಆಗಿದ್ದರೆ, ಅದರ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಐನೂರಕ್ಕಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗಳಿಗೆ ಶೇ. 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದಲ್ಲದೆ, ಬೆಟ್ಟಿಂಗ್, ಜೂಜು, ಲಾಟರಿ, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಮನಿ ಗೇಮ್​ ಚಟುವಟಿಕೆಗಳ ಮೇಲೆ ಶೇ. 40 ರಷ್ಟು ಜಿಎಸ್‌ಟಿ ವಿಧಿಸಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ. 


Spread the love
Share:

administrator

Leave a Reply

Your email address will not be published. Required fields are marked *