ಆಧಾರ್ ಕಾರ್ಡ್ ಸಮೇತ ನಾಪತ್ತೆಯಾಗಿದ್ದ ಮೂವರು ಬಾಲಕಿಯರ ಪ್ರಕರಣದಲ್ಲಿ ಟ್ವಿಸ್ಟ್

ನಂಜನಗೂಡು : ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಎಫೆಕ್ಟ್ ನಿಂದ ಆಧಾರ್ ಕಾರ್ಡ್ ಸಮೇತ ಎಸ್ಕೇಪ್ ಆಗಿದ್ದ ಮೂವರು ಬಾಲಕಿಯರು ಸುರಕ್ಷಿತವಾಗಿ ವಾಪಸ್ ಆಗಿರುವ ಘಟನೆ ನಂಜನಗೂಡು ಪಟ್ಟಣದ ಅಶೋಕಪುರಂ ಬಡಾವಣೆಯಲ್ಲಿ ನಡೆದಿದೆ.

ರಾತ್ರಿ ಮಲಗಿ ಬೆಳಗಾಗುವುದರೊಳಗೆ ಮೂವರು ಬಾಲಕಿಯರು ನಾಪತ್ತೆಯಾಗಿದ್ದರು.
ನಂಜನಗೂಡು ನಗರದ ನೀಲಕಂಠೇಶ್ವರ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯರು ಆಧಾರ ಕಾರ್ಡ್ ಮತ್ತು ಬಟ್ಟೆಗಳನ್ನು ತೆಗೆದುಕೊಂಡು ನಾಪತ್ತೆಯಾಗಿದ್ದರು.
ಪುಟ್ಟ ಬಾಲಕಿಯರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ತಂದೆ ತಾಯಿ ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದರು. ನಂಜನಗೂಡು ನಗರ ಪೊಲೀಸ್ ಠಾಣೆಯಲ್ಲಿ ಮೂವರು ಬಾಲಕಿಯರು ನಾಪತ್ತೆಯಾಗಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು. ಅಶೋಕಪುರಂ ಬಡಾವಣೆಯ ಮುದ್ದಯ್ಯ ಎಂಬುವರ ಪುತ್ರಿ 11 ವರ್ಷದ ಬಾಲಕಿ ಯಶ, ಸಿದ್ದರಾಜು ಎಂಬುವರ ಪುತ್ರಿ ಸಿಂಚನ 10 ವರ್ಷ, ಮತ್ತೋರ್ವ ಸಿದ್ದರಾಜು ಎಂಬುವರ ಪುತ್ರಿ ಅಮೂಲ್ಯ 10 ವರ್ಷ ನಾಪತ್ತೆಯಾಗಿದ್ದ ಬಾಲಕಿಯರು.
ನಂಜನಗೂಡು ನಗರದ ಹಳೆ ಬಸ್ ನಿಲ್ದಾಣದಲ್ಲಿ ಮೂವರು ಬಾಲಕಿಯರು ಧರ್ಮಸ್ಥಳಕ್ಕೆ ತೆರಳುವ ಸರ್ಕಾರಿ ಬಸ್ ಹತ್ತಿದ್ದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ್ದರು. ದಿನನಿತ್ಯ ಬಳಕೆ ಮಾಡುವ ಬಟ್ಟೆಗಳು ಮತ್ತು ಆಧಾರ್ ಕಾರ್ಡ್ ಸಮೇತ ಮೂವರು ಬಾಲಕಿಯರು ನಾಪತ್ತೆಯಾಗಿದ್ದ ಕಾರಣ ಪೋಷಕರು ಆತಂಕಕ್ಕೆ ಒಳಗಾಗಿದ್ದರು.
