Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತೀಯ ಯುಪಿಐ ಡಿಜಿಟಲ್ ಕ್ರಾಂತಿ ಮೂಲಕ ವಿಶ್ವದ ಗಮನ ಸೆಳೆದದ್ದು ಹೇಗೆ?

Spread the love

ನವದೆಹಲಿ:ಭಾರತದ ಯುಪಿಐ ಪೇಮೆಂಟ್ ಸಿಸ್ಟಂ (UPI) ಬಗ್ಗೆ ಐಎಂಎಫ್ ಹಾಡಿಹೊಗಳಿದೆ. ಭಾರತದಲ್ಲಿ ಅತ್ಯಂತ ವೇಗದ ಪೇಮೆಂಟ್ ಸಿಸ್ಟಂ ಇದೆ. ಪ್ರಪಂಚದಲ್ಲಿ ಬೇರಾವ ದೇಶದಲ್ಲೂ ಇಷ್ಟು ವೇಗದ ಪಾವತಿ ವ್ಯವಸ್ಥೆ ಇಲ್ಲ. ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಯುಪಿಐ ಗಣನೀಯವಾಗಿ ಬದಲಿಸಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಭಾರತದ ಯುಪಿಐ ವಿಶೇಷತೆ ಏನು?

ಯುಪಿಐ ಎಂದರೆ ಯೂನಿವರ್ಸಲ್ ಪೇಮೆಂಟ್ ಇಂಟರ್​​ಫೇಸ್. ಹೆಸರೇ ಸೂಚಿಸುವಂತೆ ಇದು ವಿವಿಧ ಪ್ಲಾಟ್​ಫಾರ್ಮ್​ಗಳಿಗೆ ಇರುವ ಕಾಮನ್ ಇಂಟರ್​ಫೇಸ್ ಆಗಿರಬಲ್ಲುದು. ನೀವು ಫೋನ್ ಪೇ ಬಳಸಿ, ಗೂಗಲ್ ಬಳಸಿ, ಪೇಟಿಎಂ ಬಳಸಿ, ಅಥವಾ ವಾಟ್ಸಾಪ್ ಬಳಸಿ, ಯಾವುದೇ ಪ್ಲಾಟ್​ಫಾರ್ಮ್​​ನಲ್ಲೂ ಯುಪಿಐ ಅನ್ನು ಅಳವಡಿಸಬಹುದು. ಇಂಟರ್ ಆಪರಾಬಿಲಿಟಿ ಎನ್ನುವುದೇ ಯುಪಿಐನ ಶಕ್ತಿ. ಭಾರತದ ಮೂಲೆಮೂಲೆಯಲ್ಲೂ ಜನರು ಯುಪಿಐ ಬಳಸುತ್ತಾರೆ. ಹೀಗಾಗಿ, ಭಾರತದ ಡಿಜಿಟಲ್ ಪೇಮೆಂಟ್ ಸಿಸ್ಟಂ ಬಹಳ ವ್ಯಾಪಕವಾಗಿ ಹೋಗಿದೆ.

ಅಮೆರಿಕದಲ್ಲಿ ಪೇಮೆಂಟ್ ಸಿಸ್ಟಂ ಹೇಗಿದೆ?

ಅಮೆರಿಕದಲ್ಲಿ ಪೇಮೆಂಟ್ ಸಿಸ್ಟಂ ವಿವಿಧ ಖಾಸಗಿ ಸಂಸ್ಥೆಗಳ ಸುಪರ್ದಿಯಲ್ಲಿದೆ. ವೆನ್​ಮೋ, ಝೆಲ್ಲೆ, ಕ್ಯಾಷ್ ಆಯಪ್, ಆಯಪಲ್ ಪೇ, ಪೇಪಾಲ್ ಮೊದಲಾದ ಆಯಪ್​ಗಳಿವೆ. ಇವುಗಳದ್ದು ಬಹಳ ಮುಂದುವರಿದ ಪೇಮೆಂಟ್ ವ್ಯವಸ್ಥೆ ಇದೆ. ಆದರೆ, ಇಂಟರಾಪರಾಬಿಲಿಟಿ ಇಲ್ಲ. ಅಂದರೆ, ಪೇಪಾಲ್​ನಲ್ಲಿ ನೀವು ಹಣ ಕಳುಹಿಸಬೇಕೆಂದರೆ, ಸ್ವೀಕರಿಸುವವರೂ ಕೂಡ ಪೇಪಾಲ್ ನೊಂದಾಯಿಸಿಕೊಂಡಿರಬೇಕು.

ರಿಯಲ್ ಟೈಮ್ ಪೇಮೆಂಟ್ ಕಡಿಮೆ

ಮತ್ತೊಂದು ಸಂಗತಿ ಎಂದರೆ, ಅಮೆರಿಕದಲ್ಲಿ ಹೆಚ್ಚಿನ ಪೇಮೆಂಟ್ ಪ್ಲಾಟ್​ಫಾರ್ಮ್​ಗಳಲ್ಲಿ ರಿಯಲ್ ಟೈಮ್ ಪಾವತಿ ಆಗುವುದಿಲ್ಲ. ನೀವು ಹಣ ಕಳುಹಿಸಿದರೆ ಅದು ಅಂತಿಮವಾಗಿ ರವಾನೆಯಾಗಲು ಒಂದೆರಡು ದಿನವೇ ಬೇಕಾದೀತು. ಝೆಲ್ಲೆಯಂತಹ ಕೆಲ ಆಯಪ್​ಗಳು ರಿಯಲ್​ಟೈಮ್ ಪೇಮೆಂಟ್ ಸೌಲಭ್ಯ ತರುತ್ತಿವೆಯಾದರೂ ಕೆಲ ಬೆಂಬಲಿತ ಬ್ಯಾಂಕುಗಳಿಗೆ ಮಾತ್ರ ಅದು ಸೀಮಿತವಾಗಿದೆ.

ಪಾವತಿಗೆ ಶುಲ್ಕ

ಭಾರತದಲ್ಲಿ ಯುಪಿಐ ಹಣ ಪಾವತಿಗೆ ಶುಲ್ಕ ಇರುವುದಿಲ್ಲ. ಅಮೆರಿಕದಲ್ಲಿ ಕೆಲ ಆಯಪ್​ಗಳು ತತ್​ಕ್ಷಣಕ್ಕೆ ಹಣ ವರ್ಗಾವಣೆ ಮಾಡಲು ನಿರ್ದಿಷ್ಟ ಶುಲ್ಕ ವಿಧಿಸುತ್ತವೆ.

ಮಾಸ್ಟರ್ ಕಾರ್ಡ್, ವೀಸಾ, ಪೇಪಾಲ್, ದಿ ಕ್ಲಿಯರಿಂಗ್ ಹೌಸ್ ಇತ್ಯಾದಿ ಸಂಸ್ಥೆಗಳು ಅಮೆರಿಕದ ಪೇಮೆಂಟ್ ಸಿಸ್ಟಂ ಅನ್ನು ನಿರ್ವಹಿಸುತ್ತಿವೆ. ಇವುಗಳಿಗೆ ಲಾಭದ ಉದ್ದೇಶ ಪ್ರಧಾನವಾಗಿದೆ. ಭಾರತದ ಯುಪಿಐ ಅನ್ನು ಸರ್ಕಾರ ನಿರ್ವಹಿಸುತ್ತಿದ್ದು, ಅದರ ಬಳಕೆ ಸರ್ವವ್ಯಾಪಿಯಾಗಿದೆ. ಆದರೆ, ಅಮೆರಿಕದಲ್ಲಿ ಎಲ್ಲವೂ ಖಾಸಗಿ ಅಂಕೆಯಲ್ಲಿರುವುದರಿಂದ ಚದುರಿ ಹೋಗಿದೆ.

ಅಲ್ಲಿ ಈಗಲೂ ಕೂಡ ಹೆಚ್ಚಿನ ಡಿಜಿಟಲ್ ಪೇಮೆಂಟ್ ಕ್ರೆಡಿಟ್ ಕಾರ್ಡ್ ಮೂಲಕ ಆಗುತ್ತದೆ.

ಭಾರತದ ಯುಪಿಐ ವಿಶ್ವದೆಲ್ಲೆಡೆ ಜನಪ್ರಿಯವಾಗುತ್ತಿದೆ

ಭಾರತದಲ್ಲಿ ಯುಪಿಐ ಅತ್ಯಂತ ಯಶಸ್ವಿಯಾಗಿರುವುದು ಅದರ ಇಂಟರಾಪರಾಬಿಲಿಟಿ ಸಾಮರ್ಥ್ಯದಿಂದ. ಹಾಗೆಯೇ,ಬಹಳ ಸುಲಭ ಬಳಕೆಯೂ ಇದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಯುಪಿಐಗೆ ಜೋಡಿತವಾಗಿವೆ. ಜನರು ಬಹಳ ಸುಲಭವಾಗಿ ಯುಪಿಐಗೆ ನೊಂದಾಯಿಸಬಹುದು.

ಯುಪಿಐ ಅನ್ನು ಸರ್ಕಾರವೇ ನಿಭಾಯಿಸುತ್ತಿರುವುದರಿಂದ ಜನರಿಗೆ ಶುಲ್ಕದ ತಲೆನೋವು ಇಲ್ಲ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಇನ್​ಫ್ರಾಸ್ಟ್ರಕ್ಚರ್​ ಮೇಲೆ ಯುಪಿಐ ನೆಲೆ ನಿಂತಿರುವುದರಿಂದ ಸುರಕ್ಷಿತವೂ ಎನಿಸಿದೆ. ಎಲ್ಲವೂ ರಿಯಲ್ ಟೈಮ್​​ನಲ್ಲಿ ಸೆಟಲ್ಮೆಂಟ್ ಆಗುತ್ತದೆ.

ಭಾರತದ ಯುಪಿಐ ಬಗ್ಗೆ ವಿಶ್ವದ ಅನೇಕ ದೇಶಗಳು ಆಸಕ್ತಿ ತೋರಿವೆ. ಈಗಾಗಲೇ ಎಂಟು ದೇಶಗಳು ಯುಪಿಐ ಅನ್ನು ಅಳವಡಿಸಿಕೊಂಡಿವೆ. ಅಮೆರಿಕದಲ್ಲೂ ಹಲವು ಸೆಲಬ್ರಿಟಿಗಳು ಯುಪಿಐ ಮಾದರಿ ಪೇಮೆಂಟ್ ಸಿಸ್ಟಂ ತಮ್ಮ ದೇಶದಲ್ಲೂ ಬರಬೇಕು ಎಂದು ಒತ್ತಾಯಿಸುತ್ತಿರುವುದು ಉಂಟು.


Spread the love
Share:

administrator

Leave a Reply

Your email address will not be published. Required fields are marked *