ಬೆಂಗಳೂರಿನಲ್ಲಿ ವೈರಲ್ ಆದ ಮನೆಕೆಲಸದಾಕೆಯ ಮೆಸೇಜ್: ರಜೆ ಕೇಳುವಾಗ ‘ಪ್ರೊಫೆಷನಲ್’ ಆಗಿ ಮೆಸೇಜ್ ಕಳುಹಿಸಿದ ಮಹಿಳೆ

ಬೆಂಗಳೂರಿನಲ್ಲಿ ಓರ್ವ ಮಹಿಳೆಯು, ತನ್ನ ಮನೆಕೆಲಸದಾಕೆ ವಾಟ್ಸಾಪ್ ಮೆಸೇಜ್ ಮಾಡಿರೋ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಪ್ರೊಫೆಶನಲ್ ಆಗಿ ಮೆಸೇಜ್ ಮಾಡಿದ ಮಹಿಳೆ!
ನನ್ನ ಮನೆಕೆಲಸದವಳು, ರಜೆ ತೆಗೆದುಕೊಳ್ಳುವಾಗ “ಪ್ರೊಫೆಶನಲ್” ಆಗಿ ಮೆಸೇಜ್ ಕಳಿಸುವ ಬಗ್ಗೆ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“ನಾನು ಕೆಲಸ ಮಾಡಿದ ಅರ್ಧದಷ್ಟು ಜನರಿಗಿಂತಲೂ ಹೆಚ್ಚು ಪ್ರೊಫೆಶನಲ್ ಆಗಿ ನನ್ನ ಮನೆಕೆಲಸದವಳು ರಜೆ ತೆಗೆದುಕೊಳ್ಳುವಾಗ ಕಾರಣವನ್ನು ಕೊಡ್ತಾಳೆ. ಆಕೆ ಇಂಗ್ಲಿಷ್‌ನಲ್ಲಿ ಯಾಕೆ ರಜೆ ಬೇಕು? ಎಷ್ಟು ದಿನ ಬೇಕು ಎಂದು ವಿವರಿಸುತ್ತಾಳೆ” ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ.
ಮೆಸೇಜ್‌ನಲ್ಲಿ ಏನಿತ್ತು?
100/100ರಷ್ಟು ಅವಳು ಪ್ರೊಫೆಶನಲ್ ಆಗಿದ್ದಾಳೆ, ಆಕೆಯ 10 ವರ್ಷದ ಮಗಳು ಈ ಮೆಸೇಜ್ ಟೈಪ್ ಮಾಡುತ್ತಾಳೆ ಎಂದು ಕೂಡ ಅವರು ವಿವರಿಸಿದ್ದಾರೆ. ತನ್ನ ಪೋಸ್ಟ್‌ನಲ್ಲಿ ಒಂದು ಸ್ಕ್ರೀನ್‌ಶಾಟ್‌ನೊಂದಿಗೆ ಆಕೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ನನಗೆ ಆರೋಗ್ಯವಾಗಿಲ್ಲ, ನನಗೆ ಶೀತ, ಗಂಟಲು ಸೋಂಕು ಇದೆ, ಆದ್ದರಿಂದ ಇಂದು ಕೆಲಸಕ್ಕೆ ಬರುವುದಿಲ್ಲ” ಎಂದು ಮನೆಕೆಲಸದ ಮೆಸೇಜ್‌ನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಯಾರು? ಯಾರು ಏನು ಹೇಳಿದರು?
ಇದಕ್ಕೆ ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದು, “ಉತ್ತರ ಭಾರತದ ಮೂಲದಿಂದ ಮನೆಕೆಲಸ ಮಾಡುವವರು ಯಾವುದೇ ಮಾಹಿತಿಯನ್ನು ನೀಡದೆ ಬರೀ ರಜೆ ತೆಗೆದುಕೊಳ್ಳುತ್ತಾರೆ. ಆದರೆ ನನ್ನ ಮನೆಕೆಲಸ ಮಾಡುವವಳು ಮಾತ್ರ ಯಾಕೆ ರಜೆ ತೆಗೆದುಕೊಳ್ತಿದ್ದೀನಿ ಅಂತ ಕೂಡ ಹೇಳೋದಿಲ್ಲ. ಹೀಗಾಗಿ ನನ್ನ ಆಫೀಸ್‌ನಲ್ಲಿ ನಾನು ಯಾಕೆ ತಡ ಮಾಡಿದೆ ಅಂತ ಬಾಸ್‌ಗೆ ಹೇಗೆ ಹೇಳಲಿ ಎಂದು ಯೋಚಿಸುತ್ತೇನೆ” ಎಂದು ಹೇಳಿದ್ದಾರೆ.
ಮತ್ತೊಬ್ಬರು “ನಾನು ನನ್ನ ಆಫೀಸ್‌ನಲ್ಲಿ ರಜೆ ತೆಗೆದುಕೊಳ್ಳುವಾಗ ಯಾವುದೇ ಕಾರಣಗಳನ್ನೇ ನೀಡುವುದಿಲ್ಲ, ಇದು ಇದಕ್ಕಿಂತ ಹೆಚ್ಚು ಪ್ರೊಫೆಶನಲ್ ಆಗಿದೆ” ಎಂದಿದ್ದಾರೆ.
ಇನ್ನೊಬ್ಬರು, “ನನ್ನ ಮನೆಕೆಲಸದವಳು ನನಗೆ ಹುಷಾರಾಗಿಲ್ಲ ಎಂದಾಗ, ಔಷಧಿಗಳನ್ನು ತಂದುಕೊಟ್ಟು ನನ್ನ ಆರೋಗ್ಯವನ್ನು ವಿಚಾರಿಸುತ್ತಿದ್ದಳು. ಇದು ನಿಜವಾಗಿಯೂ ಬೆಂಗಳೂರಿನಲ್ಲಿ ಅಪರೂಪ” ಎಂದಿದ್ದಾರೆ.
ಇನ್ನೊಬ್ಬರು “ಇದು ತುಂಬ ಚೆನ್ನಾಗಿದೆ. ದೆಹಲಿಯಲ್ಲಿ ನನ್ನ ಮನೆಕೆಲಸದವಳು ವಾಯ್ಸ್ ನೋಟ್ ಕಳಿಸೋದರಲ್ಲಿ ಪರಿಣಿತಿ ಹೊಂದಿದ್ದಾಳೆ. ‘ಇಂದು ನಾನು ಬರುವುದಿಲ್ಲ ಅಂತ ಮೆಸೇಜ್ ಕಳಿಸ್ತಾಳೆ” ಎಂದಿದ್ದಾರೆ.
ತನ್ನ ಮನೆಕೆಲಸದವಳ ಖಾಸಗಿ ಸಂಭಾಷಣೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಕ್ಕೆ ಕೆಲವರು ಬೇಸರ ಹೊರಹಾಕಿದ್ದಾರೆ.