Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಘೋರ ದುರಂತ: ಮೂರನೇ ಮಹಡಿಯಿಂದ ಕೆಳಕ್ಕೆ ಬಿತ್ತು ಕಂದಮ್ಮ!

Spread the love

ಬೆಂಗಳೂರು: ಆಟವಾಡುತ್ತಾ ಮೂರನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ (Bengaluru) ನಾಯಂಡಳ್ಳಿಯಲ್ಲಿ (Nayandahalli) ನಡೆದಿದೆ.
ಆಟವಾಡುತ್ತಾ ಮಗು ಕೆಳಗೆ ಬಿದ್ದ ಎದೆ ಝಲ್ ಎನ್ನುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಏ.6ರಂದು ಈ ಘಟನೆ ನಡೆದಿದೆ.ಮಗು ಕೆಳಗೆ ಬಿದ್ದ ತಕ್ಷಣ ಅದರ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ. ವಿಷ್ಯ ತಿಳಿದು ಕೆಳಗೆ ಓಡಿ ಬಂದ ತಾಯಿ ಮಗುವಿನ ಸ್ಥಿತಿ ಕಂಡು ರಸ್ತೆ ಮಧ್ಯೆಯೇ ಮೂರ್ಛೆ ಹೋಗಿದ್ದಾರೆ. ಕೂಡಲೇ ಕುಟುಂಬದವರು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದೂವರೆ ವರ್ಷದ ಹೆಣ್ಣು ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಮಗುವಿನ ಸ್ಥಿತಿ ಕಂಡು ತಂದೆ-ತಾಯಿ ಕಣ್ಣೀರು ಸುರಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *