Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫ್ರಾನ್ಸ್‌ನಲ್ಲಿ ಭೀಕರ ‘ಸಿರಿಂಜ್ ದಾಳಿ’: ಸಂಗೀತ ಉತ್ಸವದಲ್ಲಿ 145ಕ್ಕೂ ಹೆಚ್ಚು ಜನರಿಗೆ ಸೂಜಿ ಇರಿತ

Spread the love

ಫ್ರಾನ್ಸ್‌ನಲ್ಲಿ ಇಂಜೆಕ್ಷನ್ ಅಟ್ಯಾಕ್: 145ಕ್ಕೂ ​​ಹೆಚ್ಚು ಮಂದಿಗೆ ಚುಚ್ಚುಮದ್ದು

ಫ್ರಾನ್ಸ್‌ನಲ್ಲಿ ಇಂಜೆಕ್ಷನ್ ಅಟ್ಯಾಕ್: ಹದಿಹರೆಯದ ಹುಡುಗಿಯರೇ ಹೆಚ್ಚು!

ಫ್ರಾನ್ಸ್‌ನ ವಾರ್ಷಿಕ ಬೀದಿ ಸಂಗೀತ ಉತ್ಸವ ‘ಫೆಟೆ ಡೆ ಲಾ ಮ್ಯೂಸಿಕ್’ ಸಂಭ್ರಮದ ಸಂದರ್ಭದಲ್ಲಿ ದೇಶಾದ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ.

ಸಂಗೀತ ಕೇಳುತ್ತಾ, ಆನಂದಿಸುತ್ತಿದ್ದ ಜನರ ಮೇಲೆ ಏಕಾಏಕಿ ಸಿರಿಂಜ್ ದಾಳಿಗಳು (Syringe Attack) ನಡೆದಿವೆ. ಫ್ರೆಂಚ್ ಆಂತರಿಕ ಸಚಿವಾಲಯದ ಪ್ರಕಾರ, ಸೋಮವಾರ 145ಕ್ಕೂ ಹೆಚ್ಚು ಜನರಿಗೆ ಸೂಜಿಯಿಂದ ಇರಿತವಾದ ಘಟನೆಗಳು ವರದಿಯಾಗಿವೆ.

ಪ್ಯಾರಿಸ್‌ನಲ್ಲಿ ಕನಿಷ್ಠ 13 ಪ್ರಕರಣಗಳನ್ನು ಪೊಲೀಸರು ದೃಢೀಕರಿಸಿದ್ದು, 12 ಶಂಕಿತರನ್ನು ಬಂಧಿಸಲಾಗಿದೆ. ರಾಜಧಾನಿಯಲ್ಲಿ ‘ಅಭೂತಪೂರ್ವ ಜನಸಂದಣಿ’ಯೊಂದಿಗೆ ನಡೆದ ಈ ಉತ್ಸವದಲ್ಲಿ, ಈ ದಾಳಿಗಳು ಭಯದ ವಾತಾವರಣವನ್ನು ಸೃಷ್ಟಿಸಿವೆ. ಒಂದು ಡಜನ್‌ಗಿಂತಲೂ ಹೆಚ್ಚು ಯುವತಿಯರು ಸಿರಿಂಜ್ ಇರಿತದಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 15 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕ ಸೇರಿದಂತೆ ಮೂವರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *