Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮ್ಯಾಥೀವ್ ಪೆರ್ರಿ ಸಾವಿನ ಹಿಂದಿದೆ ಭೀಕರ ರಹಸ್ಯ: ‘ಫ್ರೆಂಡ್ಸ್’ ನಟನ ಸಾವಿಗೆ ವೈದ್ಯರೇ ಕಾರಣ?

Spread the love

Matthew Perry dies: From drug addictions to relations – 10 things to know |  Today News

ಫ್ರೆಂಡ್ಸ್’ (Friends), ವೆಬ್ ಸರಣಿಗಳಲ್ಲಿ ಅತ್ಯಂತ ಜನಪ್ರಿಯ. ಈಗಲೂ ಸಹ ನೆಟ್ಪ್ಲಿಕ್ಸ್ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ವೆಬ್ ಸರಣಿಗಳಲ್ಲಿ ಒಂದಾಗಿದೆ. ‘ಫ್ರೆಂಡ್ಸ್’ ನಲ್ಲಿ ನಟಿಸಿದ್ದ ಸ್ಟಾರ್ ಮ್ಯಾಥೀವ್ ಪೆರ್ರಿ ಕಳೆದ ವರ್ಷ ಅಕ್ಟೋಬರ್ನಲ್ಲಿ ನಿಧನ ಹೊಂದಿದರು.

ಪೆರ್ರಿಯ ಮೃತದೇಹ ಅವರದ್ದೇ ಮನೆಯ ಬಾತ್ಟಬ್ನಲ್ಲಿ ಪತ್ತೆ ಆಗಿದೆ. ಪೆರ್ರಿ ನಿಧನ ಹೃದಯಾಘಾತದಿಂದ ಆಗಿದೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಸುಮಾರು ಎರಡು ವರ್ಷಗಳ ಬಳಿಕ ತಿಳಿದು ಬಂದಿರುವ ವಿಷಯವೆಂದರೆ ಪೆರ್ರಿ ನಿಧನ ಆಕಸ್ಮಿಕವಲ್ಲ ಬದಲಿಗೆ ಕೊಲೆ!?

ಮ್ಯಾಥೀವ್ ಪೆರ್ರಿ, 2023ರ ಅಕ್ಟೋಬರ್ನಲ್ಲಿ ಲಾಸ್ ಏಂಜಲ್ಸ್ನ ತಮ್ಮ ಮನೆಯ ಬಾತ್ ಟಬ್ನಲ್ಲಿ ಪೆರ್ರಿಯ ಮೃತದೇಹ ಪತ್ತೆ ಆಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಕೆಟಮಿನ್ ಹೆಸರಿನ ಡ್ರಗ್ ಹೆಚ್ಚಿನ ಪ್ರಮಾಣದಲ್ಲಿ ಪತ್ತೆ ಆಗಿತ್ತು. ಈ ಡ್ರಗ್ ಇಂದಲೇ ಪೆರ್ರಿಗೆ ಹೃದಯಾಘಾತ ಆಗಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಐದು ಮಂದಿಯ ಮೇಲೆ ಆರೋಪ ಮಾಡಿದ್ದರು.

ನ್ಯಾಯಾಲಯದಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದಲೂ ವಿಚಾರಣೆ ನಡೆದಿದ್ದು, ಇದೀಗ ಮ್ಯಾಥೀವ್ ಪೆರ್ರಿಯ ವೈದ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಪೆರ್ರಿಗೆ ಉದ್ದೇಶಪೂರ್ವಕವಾಗಿ ವೈದ್ಯ ಸಾಲ್ವಡಾರ್ ಪ್ಲೆಸನಿಕಾ ಮತ್ತು ವೈದ್ಯ ಮಾರ್ಕ್ ಚಾವೆಜ್, ಕೆಟಮಿನ್ ಅನ್ನು ಹೆಚ್ಚಿಗೆ ಕೊಟ್ಟಿದ್ದರು ಎನ್ನಲಾಗಿದೆ. ಪೆರ್ರಿಯಿಂದ ಹೆಚ್ಚಿನ ಹಣ ಪಡೆಯುವ ಉದ್ದೇಶದಿಂದ ವೈದ್ಯ ಸಾಲ್ವಡಾರ್ ಪ್ಲೆಸನಿಕಾ ಮತ್ತು ಇನ್ನೂ ಕೆಲವರು ಸೇರಿಕೊಂಡು ಹೆಚ್ಚಿನ ಡೋಸ್ನ ಕೆಟಮಿನ್ ಮಾತ್ರೆಗಳನ್ನು ಪೆರ್ರಿಗೆ ಮಾರಾಟ ಮಾಡಿದ್ದರಂತೆ. ಮಾತ್ರವಲ್ಲದೆ ಅವನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಸಹ ಹೇಳಿಕೊಟ್ಟಿದ್ದರಂತೆ.

ಪೆರ್ರಿಗೆ ಕೆಟಮಿನ್ ನೀಡುವಾಗ, ಪೆರ್ರಿಗೆ ಖಿನ್ನತೆ ಇದೆ, ಅದನ್ನು ಹೋಗಲಾಡಿಸಲು ಅವರು ಕೆಟಮಿನ್ ತೆಗೆದುಕೊಳ್ಳುತ್ತಿದ್ದಾರೆ, ಪೆರ್ರಿ ಸಿಗರೇಟು ಸೇದುವ ಅಭ್ಯಾಸ ಬಿಡುವ ಕಾರಣಕ್ಕೆ ಕೆಟಮಿನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವೈದ್ಯರು ನಮೂದಿಸಿದ್ದರಂತೆ. ಆ ಕಾರಣಗಳು ಸಹ ಸುಳ್ಳು ಎಂದು ವಿಚಾರಣೆಯಿಂದ ತಿಳಿದಿದೆ. ಇಬ್ಬರು ವೈದ್ಯರು ಸೇರಿ ಐದು ಜನ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಇದೀಗ ಎಲ್ಲರಿಗೂ 40 ವರ್ಷ ಜೈಲು ಶಿಕ್ಷೆ ಆಗುವ ಸಂಭವ ಇದೆ.


Spread the love
Share:

administrator

Leave a Reply

Your email address will not be published. Required fields are marked *