Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಭೀಕರ ಘಟನೆ: 2 ವರ್ಷದ ಮಗುವನ್ನು ನೆಲಕ್ಕೆ ಎಸೆದ ಆರೋಪಿಯ ಬಂಧನ

Spread the love

ಮಾಸ್ಕೋ, ಜೂನ್ 26: ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಪುಟ್ಟ ಮಗುವನ್ನು ವ್ಯಕ್ತಿಯೊಬ್ಬ ಸುಮ್ಮನೆ ಎತ್ತಿ ನೆಲಕ್ಕೆ ಎಸೆದ ಘಟನೆ ಮಾಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹೃದಯ ವಿದ್ರಾವಕ ವಿಡಿಯೋ ವೈರಲ್ ಆಗಿದೆ. ಎರಡು ವರ್ಷದ ಬಾಲಕನ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಮಗು ಸದ್ಯ ಕೋಮಾದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.


ಮಗು ಇರಾನ್ ದೇಶದ ಪ್ರಜೆ ಎಂದು ವರದಿಯಾಗಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ದ ಹಿನ್ನಲೆ ತಾಯಿ ತಮ್ಮ ಮಕ್ಕಳೊಂದಿಗೆ ರಷ್ಯಾಕ್ಕೆ ಆಗಮಿಸಿದ್ದರು. ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಮಗುವಿನ ತಾಯಿ ಲಗೇಜ್ ಟ್ರಾಲಿ ತರಲು ಮಗುವನ್ನು ಬಿಟ್ಟು ಹೋಗಿದ್ದರು. ಈ ವೇಳೆ ಬೆಲರೂಸಿಯನ್ ವ್ಯಕ್ತಿಯೊಬ್ಬ ಹಿಡಿದು ನೆಲದ ಮೇಲೆ ಎಸೆದಿದ್ದಾನೆ.

ಮಗು ಗಂಭೀರವಾಗಿ ಗಾಯಗೊಂಡು, ಕೋಮಾಗೆ ಜಾರಿದೆ. ಬಾಲಕನ ತಲೆಗೆ ಹಾಗೂ ಬೆನ್ನುಹುರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಆದರೆ ಈ ವ್ಯಕ್ತಿ ಈ ರೀತಿ ನಡೆದುಕೊಂಡಿದ್ದೇಕೆ ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹಲ್ಲೆ ಮಾಡಿದ ಆರೋಪಿಯನ್ನು ಬೆಲಾರಸ್‌ನ 31 ವರ್ಷದ ವ್ಲಾಡಿಮಿರ್ ವಿಟ್ಕೋವ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಮಗುವಿನ ವಿರುದ್ಧದ ಕೃತ್ಯಕ್ಕೆ ಜನಾಂಗೀಯ ದ್ವೇಷ ಅಥವಾ ಇತರ ಪ್ರೇರಣೆ ಇದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *