Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಂಬೈನಲ್ಲಿ ಘೋರ ಕೃತ್ಯ: ಮದುವೆಗೆ ನಿರಾಕರಿಸಿದ ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ ಮಹಿಳೆ!

Spread the love

ಮುಂಬೈ: ಮಹಿಳೆಯೊಬ್ಬಳು (Woman) ಹೊಸ ವರ್ಷಾಚರಣೆಗೆ (New Year 2026) ಪ್ರಿಯಕರನನ್ನು (Lover) ಮನೆಗೆ ಕರೆಸಿ ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

25 ವರ್ಷದ ವಿವಾಹಿತ ಮಹಿಳೆ ತನ್ನ 44 ವರ್ಷದ ಪ್ರಿಯಕರನಿಗೆ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ಇದು ಅವರ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಡಿಸೆಂಬರ್ 31 ರಂದು ಮಹಿಳೆ ತನ್ನ ಪ್ರಿಯಕರನ ಮೇಲೆ ದಾಳಿ ನಡೆಸಿದ್ದಾಳೆ.

ಆರಂಭಿಕ ತನಿಖೆಯಲ್ಲಿ ಇಬ್ಬರೂ ಸಂಬಂಧಿಕರು ಎಂದು ತಿಳಿದುಬಂದಿದೆ. ಆರೋಪಿ ಮಹಿಳೆ ದಾಳಿಗೊಳಗಾದವನ ಸಹೋದರಿಯ ಅತ್ತಿಗೆ ಎಂದು ತಿಳಿದು ಬಂದಿದೆ. ಇಬ್ಬರೂ ಕಳೆದ ಆರರಿಂದ ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಪ್ರಿಯಕರ, ಮಹಿಳೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಎಂದು ವರದಿಯಾಗಿದೆ.

ಡಿಸೆಂಬರ್ 31 ರಂದು ಮಹಿಳೆ ಹೊಸ ವರ್ಷಕ್ಕೆ ಸ್ವೀಟ್ ನೀಡುವ ನೆಪದಲ್ಲಿ ಅವನನ್ನು ತನ್ನ ಮನೆಗೆ ಆಹ್ವಾನಿಸಿದ್ದಳು. ಆ ಸಮಯದಲ್ಲಿ, ಮಹಿಳೆಯ ಮಕ್ಕಳು ಮನೆಯಲ್ಲಿ ಮಲಗಿದ್ದರು. ಮಹಿಳೆ ಮೊದಲು ಪ್ರಿಯಕರನ ಪ್ಯಾಂಟ್ ತೆಗೆಯಲು ಹೇಳಿ, ಅಡುಗೆ ಮನೆಗೆ ಹೋಗಿ ತರಕಾರಿ ಕತ್ತರಿಸುವ ಚಾಕು ತಂದು, ಇದ್ದಕ್ಕಿದ್ದಂತೆ ಬಲಿಪಶುವಿನ ಖಾಸಗಿ ಅಂಗದ ಮೇಲೆ ದಾಳಿ ಮಾಡಿದ್ದಾಳೆ.

ತೀವ್ರ ಗಾಯವಾಗಿದ್ದ ವ್ಯಕ್ತಿ ಮನೆಗೆ ವಾಪಸ್‌ ಆದಾಗ, ಮಕ್ಕಳು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *