Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಾಗಪುರ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾ*ತ: ಎಂಟು ಮಂದಿ ಮಹಿಳಾ ಕಾರ್ಮಿಕರ ದಾರುಣ ಸಾ*ವು

Spread the love

ಮುಂಬೈ: ಮಹಾರಾಷ್ಟ್ರದ ಜಲ್ಲಾ ಜಿಲ್ಲೆಯ ನಾಗುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ವೊಂದು ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿ ಮಹಿಳಾ ಕಾರ್ಮಿಕರು ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕದ್ವಾಂಚಿ ಗ್ರಾಮದ ಬಳಿ ಚಾಲಕ ಸೇರಿದಂತೆ ಒಟ್ಟು 11 ಜನರು ಟೆಂಪೋದಲ್ಲಿ ಕುಳಿತಿದ್ದರು. ವಾಹನ ಹೊರಡಲು ಸಿದ್ಧವಾದಾಗ ವೇಗವಾಗಿ ಬಂದ ಟ್ರಕ್‌ವೊಂದು ಹಿಂದಿನಿಂದ ಟೆಂಪೋಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ 7 ಮಂದಿ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಜಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಜಲ್ನಾ ತಹಸಿಲ್‌ ನಿವಾಸಿಗಳಾದ ಅಲ್ಮಾಬಾಯಿ ಅದನೆ (45), ಲಕ್ಷ್ಮಿಬಾಯಿ ಮದನ್ (35), ಮೀನಾ ಅದ್ಮನೆ (45), ಕಾಂಚನ್ ಅದ್ಮನೆ (50), ತಾರಾಬಾಯಿ ಚೌಧರಿ (60), ಕಡುಬಾಯಿ ಮದನ್ (55) ಮತ್ತು ಸುಮನ್ ಅದ್ಮನೆ (70) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *