Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹನಿ ಸಿಂಗ್ ವಿವಾದ: ಕ್ಷಮೆಯಾಚಿಸಿದ ಗಾಯಕ!

Spread the love

ನವದೆಹಲಿ: ಗಾಯಕ ಯೋ ಯೋ ಹನಿ ಸಿಂಗ್ (Yo Yo Honey Singh) ದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅವರು ನೀಡಿದ ಅಸಭ್ಯ ಹೇಳಿಕೆ ಸಾರ್ವಜನಿಕರ ಆಕ್ರೋಶ ಪಡಿಸುತ್ತಿದ್ದಂತೆ ಇದೀಗ ಹನಿ ಸಿಂಗ್ ಕ್ಷಮೆ ಕೇಳಿದ್ದಾರೆ.

ನಡೆದಿದ್ದೇನು?

ಇತ್ತೀಚೆಗೆ ದೆಹಲಿಯ ಚಳಿಯ ವಾತಾವರಣದಲ್ಲಿ ಹನಿ ಸಿಂಗ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೇದಿಕೆಯ ಮೇಲೆ ಹಾಡುತ್ತಾ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದ ಹನಿ ಸಿಂಗ್, ದೆಹಲಿಯ ಚಳಿಯನ್ನು ಉಲ್ಲೇಖಿಸಿ ಒಂದು ಹೇಳಿಕೆ ನೀಡದರು.
“ಗಾಡಿ ಮೇ ಸೆಕ್ಸ್ ಕರೋ ದೆಹಲಿ ಕಿ ಥಂಡ್ ಮೇ…” (ದೆಹಲಿಯ ಚಳಿಯಲ್ಲಿ ಕಾರಿನೊಳಗೆ ಸೆಕ್ಸ್ ಮಾಡಿ) ಎಂದು ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ್ದಾರೆ. ಈ ವಿಡಿಯೋ ಕ್ಲಿಪ್ ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.ಹನಿ ಸಿಂಗ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಮಹಿಳೆಯರ ಬಗ್ಗೆ ಅಥವಾ ಸಾರ್ವಜನಿಕ ಘನತೆಗೆ ಕುಂದು ತರುವಂತಹ ‘ಅಶ್ಲೀಲ’ ಅಥವಾ ‘ಆಕ್ಷೇಪಾರ್ಹ’ ಮಾತುಗಳಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ವೈರಲ್ ವಿಡಿಯೋ ಮತ್ತು ಟೀಕೆ

ಕಾರ್ಯಕ್ರಮದ ವಿಡಿಯೋ ತುಣುಕುಗಳು ಇಂಟರ್ನೆಟ್‌ನಲ್ಲಿ ಹರಿದಾಡಲಾರಂಭಿಸಿದವು. ಅನೇಕರು ಹನಿ ಸಿಂಗ್ ಅವರ ಭಾಷೆಯ ಬಳಕೆಯನ್ನು ಖಂಡಿಸಿ, ಒಬ್ಬ ಜವಾಬ್ದಾರಿಯುತ ಕಲಾವಿದನಾಗಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಚ್ಚೆತ್ತುಕೊಂಡ ಹನಿ ಸಿಂಗ್, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಕೆಲವು ದಿನಗಳ ಮೊದಲು ಹನಿ ಸಿಂಗ್ ಅವರು ಕೆಲವು ಸ್ತ್ರೀರೋಗ ತಜ್ಞರು (Gynaecologists) ಮತ್ತು ಲೈಂಗಿಕ ತಜ್ಞರನ್ನು ಭೇಟಿಯಾಗಿದ್ದರಂತೆ. ಈ ವೇಳೆ ಯುವಜನರಲ್ಲಿ ಹರಡುತ್ತಿರುವ ಲೈಂಗಿಕ ರೋಗಗಳ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು. ವೇದಿಕೆಯ ಮೇಲೆ ಅಪಾರ ಸಂಖ್ಯೆಯ ಯುವಕರನ್ನು (Gen Z) ಕಂಡಾಗ, ಅವರಿಗೆ ‘ಸುರಕ್ಷಿತ ಲೈಂಗಿಕತೆ’ಯ ಬಗ್ಗೆ ಸಂದೇಶ ನೀಡಬೇಕು ಎಂದು ಹನಿ ಸಿಂಗ್ ನಿರ್ಧರಿಸಿದ್ದೇನು ಎಂದಿದ್ದಾರೆ.

ಯುವಕರಿಗೆ ಅವರದ್ದೇ ಭಾಷೆಯಲ್ಲಿ ಅರ್ಥ ಮಾಡಿಸಲು ಹೋಗಿ ಅಂತಹ ಪದಗಳನ್ನು ಬಳಸಿದೆ. ಆದರೆ ಅದು ಅನೇಕರಿಗೆ ನೋವುಂಟು ಮಾಡಿದೆ ಎಂದು ನನಗೆ ಈಗ ಅರ್ಥವಾಗಿದೆ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ನಾನು ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ.ಕಾರ್ಯಕ್ರಮದ ಭರದಲ್ಲಿ ಅಥವಾ ಉತ್ಸಾಹದಲ್ಲಿ ಅಂತಹ ಮಾತುಗಳು ಬಂದಿರಬಹುದು, ಆದರೆ ಯಾರನ್ನೂ ಅವಮಾನಿಸುವ ಉದ್ದೇಶ ನನಗಿರಲಿಲ್ಲ.ನಾನು ಯಾವಾಗಲೂ ನನ್ನ ಅಭಿಮಾನಿಗಳನ್ನು ಗೌರವಿಸುತ್ತೇನೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸುತ್ತೇನೆ ಎಂದು ತಿಳಿಸಿದ್ದಾರೆ. ಹನಿ ಸಿಂಗ್ ಅವರಿಗೆ ವಿವಾದಗಳೇನು ಹೊಸತಲ್ಲ. ಈ ಹಿಂದೆ ಕೂಡ ಅವರ ಹಾಡುಗಳಲ್ಲಿ ಮಹಿಳೆಯರನ್ನು ಕೀಳಾಗಿ ಚಿತ್ರಿಸುವ ಮತ್ತು ಅಶ್ಲೀಲ ಪದಗಳನ್ನು ಬಳಸುವ ಬಗ್ಗೆ ಅನೇಕ ಬಾರಿ ದೂರುಗಳು ದಾಖಲಾಗಿದ್ದವು. ಇತ್ತೀಚೆಗಷ್ಟೇ ಅವರು ತಮ್ಮ ವೈಯಕ್ತಿಕ ಬದುಕು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸುದ್ದಿಯಲ್ಲಿದ್ದರು. ಇದೀಗ ಮತ್ತೆ ಈ ಹೇಳಿಕೆಯ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *