ಹಾಲಿವುಡ್ ನಟಿ ಕೆಲ್ಲಿ ಮ್ಯಾಕ್ (Kelly Mack) ನಿಧನ: ‘ವಾಕಿಂಗ್ ಡೆಡ್’ ಖ್ಯಾತಿಯ ನಟಿಗೆ ಕೇವಲ 33 ವರ್ಷ

ಮನರಂಜನಾ ಜಗತ್ತಿನ ಪ್ರಸಿದ್ಧ ನಟಿ ಅಗಲಿಕೆ ಅವರ ಅಪಾರ ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ನೋವು ನೀಡಿದೆ. ನಟಿ ಕೇವಲ 33 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅಪರೂಪದ ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ, ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.
ಹೌದು.. ಜನಪ್ರಿಯ ಹಾಲಿವುಡ್ ವೆಬ್ ಸರಣಿ ವಾಕಿಂಗ್ ಡೆಡ್‌ನ ನಟಿ ಕೆಲ್ಲಿ ಮ್ಯಾಕ್ ನಿಧನರಾಗಿದ್ದಾರೆ. ಕೆಲ್ಲಿ ನಿಧನದ ಸುದ್ದಿಯನ್ನು ಅವರ ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. “ನಮ್ಮ ಪ್ರೀತಿಯ ಕೆಲ್ಲಿ ಇನ್ನು ಮುಂದೆ ನಮ್ಮೊಂದಿಗೆ ಇಲ್ಲ ಅಂತ ಹೇಳಲು ನಮಗೆ ತುಂಬಾ ದುಃಖವಾಗುತ್ತಿದೆ.. ಅವರು ನಮ್ಮೆಲ್ಲರನ್ನೂ ಬಿಟ್ಟು ಶಾಶ್ವತವಾಗಿ ದೂರ ಹೋಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಕೆಲ್ಲಿ ಮೆಕ್‌ಜಿ ಗ್ಲಿಯೋಮಾ ಎಂಬ ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಲ್ಲಿ ಜುಲೈ 10, 1992 ರಂದು ಜನಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಟನಾ ಕ್ಷೇತ್ರವನ್ನು ಪ್ರವೇಶಿಸಿದರು. ಅಲ್ಪಾವಧಿಯಲ್ಲಿಯೇ, ತಮ್ಮ ಅತ್ಯುತ್ತಮ ನಟನೆಯ ಮೂಲಕ ಹಾಲಿವುಡ್‌ನಲ್ಲಿ ಪ್ರತ್ಯೇಕ ಸ್ಥಾನವನ್ನು ಸೃಷ್ಟಿಸಿಕೊಂಡರು. ಇದೀಗ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ.
ಕೆಲ್ಲಿ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ವಾಕಿಂಗ್ ಡೆಡ್ ವೆಬ್ ಸರಣಿಯ ಮೂಲಕ ಈ ಚೆಲುವೆ ಮುನ್ನೆಲೆಗೆ ಬಂದರು. ಇದಲ್ಲದೆ, 9-1-1 ಚಿಕಾಗೋ, ಸ್ಕೋಲ್ಡ್ ದಿ ಮಾಡರ್ನ್ ಫ್ಯಾಮಿಲಿ ಮತ್ತು ಇತರ ಸಿನಿಮಾಗಳಲ್ಲಿನ ಪಾತ್ರಗಳ ಮೂಲಕ ಜನಮನ ಗೆದ್ದರು. ಕೆಲ್ಲಿ ಮ್ಯಾಕ್ ಅವರ ಅಕಾಲಿಕ ಮರಣವು ಹಾಲಿವುಡ್ ಚಲನಚಿತ್ರೋದ್ಯಮವನ್ನು ಶೋಕದಲ್ಲಿ ಮುಳುಗಿಸಿದೆ. ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ..