ಎಚ್ಐವಿ ಗೆದ್ದು ಬರಲು ಸಿಕ್ಕಿತು ಔಷಧಿ- ಎಷ್ಟು ಗುಣ ಪಡಿಸುವ ಶಕ್ತಿ ಇದೆ ಈ ಔಷಧಿಗೆ?

ಹೆಚ್ಐವಿ ಚಿಕಿತ್ಸೆಗಾಗಿ ದಶಕಗಳ ಪ್ರಯತ್ನಗಳ ಪ್ರಯತ್ನ ನಡೆದರೂ ಕೂಡಾ, ಪ್ರತಿ ವರ್ಷ 10 ಲಕ್ಷಕ್ಕಿಂತಲೂ ಹೆಚ್ಚು ಜನರು HIV ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೂ ಔಷಧ ಕಂಡು ಹಿಡಿಯಲು ಆಗಿರಲಿಲ್ಲ. ಆದರೆ, ಅಮೆರಿಕ ಆಹಾರ ಮತ್ತು ಔಷಧ ಆಡಳಿತವು ಕೇವಲ ಎರಡು ಚುಚ್ಚುಮದ್ದುಗಳ ಮೂಲಕ HIVಯನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಔಷಧವಾದ ಲೆನಾಕ್ಯಾಪವಿರ್ಗೆ ಅನುಮೋದಿಸಿದೆ.

ಪ್ರಿ-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ (PrEP) ಎಂದು ಕರೆಯಲ್ಪಡುವ HIV ತಡೆಯುವ ಔಷಧಗಳು ಒಂದು ದಶಕಕ್ಕೂ ಹೆಚ್ಚು ಕಾಲ ಅಸ್ತಿತ್ವದಲ್ಲಿದ್ದರೂ, ದೈನಂದಿನ ಬಳಕೆಗೆ ಲಭ್ಯವಿರಲಿಲ್ಲ.
‘ಹಲವು ದಶಕಗಳಿಂದ ಎಚ್‌ಐವಿ ವಿರುದ್ಧದ ಹೋರಾಟದಲ್ಲಿ ಇಂದು ಜಯ ಸಿಕ್ಕಿದೆ. ಈ ಔಷಧ ನಮ್ಮ ಕಾಲದ ಅದ್ಭುತ ಔಷಧವಾಗಿದ್ದು, ಎಚ್‌ಐವಿ ರೋಗವನ್ನು ಕೊನೆಗೊಳಿಸಲು ಸಹಾಯ ಮಾಡಲಿದೆ’ ಎಂದು ಗಿಲಿಯಡ್ ಸೈನ್ಸಸ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇನಿಯಲ್ ಒಡೇ ಹೇಳಿದ್ದಾರೆ.
‘ಈ ಔಷಧಿಯನ್ನು ವರ್ಷಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ಇದು ಪರೀಕ್ಷೆಯಲ್ಲಿ ಅದ್ಭುತ ಫಲಿತಾಂಶವನ್ನು ಕಂಡಿದೆ. ಅಂದರೆ ಇದು ಎಚ್‌ಐವಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಗಿಲಿಯಡ್ ವಿಜ್ಞಾನಿಗಳು ಎಚ್‌ಐವಿಯನ್ನು ಕೊನೆಗೊಳಿಸುವುದಕ್ಕೆ ತಮ್ಮ ಜೀವಮಾನದಲ್ಲೇ ಅತ್ಯುತ್ತಮ ಕೆಲಸ ಮಾಡಿದ್ದಾರೆ’ ಎಂದು ಡೇನಿಯಲ್ ಒಡೇ ಹೇಳಿದ್ದಾರೆ.

ಯೆಝ್‌ಟುಗೋ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಲೆನಕಾಪವಿರ್ ಔಷಧ, ವಯಸ್ಕರು ಮತ್ತು ಹದಿಹರೆಯದವರಲ್ಲಿ ಎಚ್‌ಐವಿ ಹರಡುವಿಕೆಯನ್ನು ಶೇಕಡಾ 99.9 ಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೆ.
ಔಷಧ ಕಂಡು ಹಿಡಿದ ಕಂಪನಿಯು ಎರಡು ದೊಡ್ಡ ಪ್ರಯೋಗಗಳನ್ನು ನಡೆಸಿದೆ. ಉಪ-ಸಹಾರನ್ ಆಫ್ರಿಕಾದಲ್ಲಿ 2,000ಕ್ಕೂ ಹೆಚ್ಚು ಮಹಿಳೆಯರಲ್ಲಿದ್ದ HIV ಸೋಂಕು ಸಂಪೂರ್ಣ ನಾಶವಾಗಿದೆ.
2,000ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರನ್ನು ಬಳಸಿ ಮಾಡಿದ ಎರಡನೇ ಪ್ರಯೋಗದಲ್ಲಿ, 99.9 ಪ್ರತಿಶತ ರೋಗ ತಡೆಯಲಾಗಿದೆ.
