ಅಮೆರಿಕಾದಲ್ಲಿ ಐತಿಹಾಸಿಕ ದೀಪಾವಳಿ ಸಂಭ್ರಮ: ಲಾಸ್ ಏಂಜಲೀಸ್ ಸಿಟಿ ಹಾಲ್‌ನಲ್ಲಿ ಮೊದಲ ಬಾರಿಗೆ ದೀಪಗಳ ಹಬ್ಬ ಆಚರಣೆ!

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಭಾರತದ ಹೊರತಾಗಿ ಹೊರ ದೇಶಗಳಲ್ಲೂ ಬಲು ಜೋರಾಗಿ ನಡೆಯುತ್ತಿದೆ. ಅಮೇರಿಕಾದ ಲಾಸ್ ಏಂಜಲೀಸ್ ಸಿಟಿ ಹಾಲ್ ತನ್ನ ಮೊದಲ ಐತಿಹಾಸಿಕ ದೀಪಾವಳಿ ಆಚರಣೆಗೆ ಸಾಕ್ಷಿಯಾಯಿತು. ಮೊದಲ ಭಾರತೀಯ ಅಮೇರಿಕನ್ ನಗರ ಪರಿಷತ್ ಸದಸ್ಯೆ ನಿತ್ಯಾ ರಾಮನ್ ನೇತೃತ್ವದಲ್ಲಿ, ಈ ಕಾರ್ಯಕ್ರಮವು ಸಾಂಸ್ಕೃತಿಕ ಸೌಹಾರ್ದತೆ ಮತ್ತು ಏಕತೆಯನ್ನು ಉತ್ತೇಜಿಸಿತು. ಕಾರ್ಯಕ್ರಮದಲ್ಲಿ ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಹಾಗೂ ಪ್ರಸ್ತುತ ಅಮೆರಿಕದ ಭಾರತ ರಾಯಭಾರಿ ಶ್ರೀ ಎರಿಕ್ ಗಾರ್ಸೆಟ್ಟಿ ಸೇರಿದಂತೆ ಪ್ರಮುಖ ಭಾರತೀಯ ವಲಸೆ ನಾಯಕರು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
