Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಿಂದೂ ಮಹಾಸಭಾ ಜಿಲ್ಲಾಧಿಕಾರಿಯ ಬೆಂಬಲಕ್ಕೆ ನಿಲ್ಲುತ್ತದೆ-ಡಾ. ಎಲ್. ಕೆ. ಸುವರ್ಣ

Spread the love

ಹಿಂದೂ ಮಹಾಸಭಾ ಕರ್ನಾಟಕ ಘಟಕ ರಾಜ್ಯ ಅಧ್ಯಕ್ಷ ಡಾ. ಎಲ್. ಕೆ ಸುವರ್ಣ ಅವರು ಉಡುಪಿ ಜಿಲ್ಲಾಧಿಕಾರಿ ಅವರು ಪರ್ಯಾಯ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಬಳಸಿದ್ದನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. “ಹಿಂದೂ ರಾಷ್ಟ್ರದಲ್ಲಿ ದೇವಸ್ಥಾನ ಕಾರ್ಯಕ್ರಮಗಳಲ್ಲಿ ಓಂಕಾರ ಧ್ವಜ ಬಳಸಲು ಯಾವ ಸರ್ಕಾರದ ಪರವಾನಿಗೆಯೂ ಬೇಕಿಲ್ಲ, ಇದು ಸನಾತನ ಹಿಂದೂ ಸಮಾಜದ ಸಂಪ್ರದಾಯ. ಹಿಂದೂ ಸಮಾಜದ ಕಾರ್ಯಕ್ರಮಗಳಲ್ಲಿ ಕೇಸರಿ ಧ್ವಜ ಬಳಸುವುದು ಸರಿಯಾಗಿದೆ. ಇದನ್ನು ವಿರೋಧಿಸುವವರು ಹಿಂದೂ ಸಮಾಜದ ಮತ್ತು ದೇಶದ ಶತ್ರುಗಳು ” ಎಂದು ಅವರು ಹೇಳಿದ್ದಾರೆ.

ಇದರ ವಿರುದ್ಧ ದೂರು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಹಿಂದೂ ಮಹಾಸಭಾ ಜಿಲ್ಲಾಧಿಕಾರಿಯ ಜೊತೆ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆಭಗವಾ ದ್ವಜ ಸಾಮಾನ್ಯ ಧ್ವಜ ಅಲ್ಲ, ಬದಲಾಗಿ ಇದು ಧೈರ್ಯ, ತ್ಯಾಗ, ಧರ್ಮ, ವೀರತೆ ಮತ್ತು ನಿಸ್ವಾರ್ಥ ಸೇವೆಯ ಸಂಕೇತ ವಾಗಿರುತ್ತದೆ. ಭಗವಾದ್ವಜ ಮಹಾಭಾರತ, ರಾಮಾಯಣ ಯುದ್ಧಗಳಲ್ಲಿ ಧರ್ಮದ ಸಂಕೇತವಾಗಿ ರಾರಾಜಿಸಿದೆ. ಶಿವಾಜಿ ಮಹಾರಾಜ, ರಾಣಾ, ಮಹಾರಾಣ ಪ್ರತಾಪ್ ರಂತಹ ಮಹಾನ್ ವಿರಾಟ್ ನಾಯಕರ ವಿಜಯದ ಗುರುತು ಕೂಡ ಭಾಗವ ಧ್ವಜ ಆಗಿತ್ತು.

ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಭಗವಾ ದ್ವಜ ಅದೆಂದೂ ರಾಜಕೀಯವಾಗಿರಲಿಲ್ಲ, ಆದರೆ ಇಟಲಿ ನಾಯಕರ ನಾಯಕತ್ವದ ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಜಕೀಯ ವಸ್ತು ವಾಗಿರುವುದು ವಿಪರ್ಯಾಸ. ಎಂದು ಹಿಂದೂಮಹಾ ಸಭಾ ರಾಜ್ಯಾಧ್ಯಕ್ಷರಾದ ಡಾ. ಎಲ್. ಕೆ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು


Spread the love
Share:

administrator

Leave a Reply

Your email address will not be published. Required fields are marked *