ವೀರ ಸಾವರ್ಕರ್ ರವರಿಗೆ ಭಾರತ ರತ್ನ ಆಗ್ರಹಿಸಿ “ಸಾವರ್ಕರ್ ಸಮ್ಮಾನ್ ಯಾತ್ರ”ಗೆ ಹಿಂದೂ ಮಹಾಸಭಾದಿಂದ ಗೌರವದ ಸ್ವಾಗತ

ಮಂಗಳೂರು: ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆಯಬೇಕೆಂಬ ಆಗ್ರಹದೊಂದಿಗೆ ನಡೆಯುತ್ತಿರುವ “ವೀರ ಸಾವರ್ಕರ್ ಸನ್ಮಾನ್ ಯಾತ್ರೆ” ಪ್ರಾರಂಭಗೊಂಡಿದೆ.

ಈ ಯಾತ್ರೆಯು ಮೇ 28ರಂದು ಸಾವರ್ಕರ್ ರವರ ಜನ್ಮಸ್ಥಳ ನಾಸಿಕ್‌ನಲ್ಲಿ, ಅವರ ಮೊಮ್ಮಗ ಶ್ರೀ ರಂಜಿತ್ ಸಾವರ್ಕರ್ ರವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡು, ದಾರಿಯಲ್ಲಿ ದೇಶದ ವಿವಿಧ ರಾಜ್ಯಗಳನ್ನು ತಲುಪುತ್ತಿದೆ.
28ನೇ ತಾರೀಕಿಗೆ ನಾಸಿಕ್ ನಿಂದ ಹೊರಟಂತಹ ಸಾವರ್ಕರ್ ಸನ್ಮಾನ್ ಯಾತ್ರ ನಂತರ ಗೋವಾ ಮಾರ್ಗವಾಗಿ ಗಡಿ ಜಿಲ್ಲೆ ಕಾರವಾರ ಮುಖಾಂತರ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿ ಅಲ್ಲಿಂದ ಭಟ್ಕಳ ಉಡುಪಿ ಮಾರ್ಗವಾಗಿ ಮಂಗಳೂರಿನ ಸುರತ್ಕಲ್ ನಲ್ಲಿರುವ ಹಿಂದೂ ಮಹಾಸಭಾ ಕೇಂದ್ರ ಕಚೇರಿಗೆ ಭೇಟಿ ನೀಡಿ ಹಿಂದೂ ಮಹಾಸಭಾ ರಾಷ್ಟ್ರೀಯ ನಾಯಕರದ ರಾಜೇಶ್ ಪವಿತ್ರನ್ ರವರು ಯಾತ್ರೆಯನ್ನು ಬರ ಮಾಡಿಕೊಂಡಿದ್ದರು.ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ಹಿಂದು ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ. ಎಲ್ ಕೆ ಸುವರ್ಣ ರವರು ವಹಿಸಿಕೊಂಡಿದ್ದು ನಂತರ ಯಾತ್ರೆಯನ್ನು ಮಂಗಳೂರಿನ ಮಾರ್ಗವಾಗಿ ಹಾಸನ, ಬೆಂಗಳೂರು, ಮುಖಾಂತರ ತಮಿಳುನಾಡಿಗೆ ಬಿಳ್ಕೊಟ್ಟಿದ್ದಾರೆ.
