ಹಿಂದಿ ಚಿತ್ರ ‘ಸೈಯಾರಾ’ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು; ಆದರೆ, ಕೊರಿಯನ್ ಚಿತ್ರದ ನಕಲು ಎಂದು ಆರೋಪ!

ಕಳೆದ ಶುಕ್ರವಾರ ತೆರೆಗೆ ಬಂದ ಹಿಂದಿ ಚಿತ್ರ ಸೈಯಾರಾ ಸದ್ಯ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ಚಿತ್ರವೆನಿಸಿಕೊಂಡಿದೆ.

ಸಂಗೀತಗಾರ ಹಾಗೂ ಸಾಹಿತಿ ನಡವೆ ನಡೆಯುವ ಚಂದದ ಲವ್ ಸ್ಟೋರಿಯನ್ನು ನಿರ್ದೇಶಕ ಮೋಹಿತ್ ಸೂರಿ ನಿರ್ದೇಶಿಸಿದ್ದು, ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ.
ನಾಯಕ ಸಂಗೀತಗಾರನಾಗಿದ್ದು, ನಾಯಕಿಯ ಪರಿಚಯವಾದ ಬಳಿಕ ಅವಳು ಬರೆಯುವ ಕವಿತೆಗಳನ್ನು ಹಾಡುಗಳನ್ನಾಗಿ ಪರಿವರ್ತಿಸಿ ಇಬ್ಬರೂ ಯಶಸ್ವಿಯಾಗುತ್ತಾರೆ. ಹೀಗೆ ಎಲ್ಲವೂ ಸರಿ ಚೆನ್ನಾಗಿ ಸಾಗುತ್ತಾ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬೀಳಬೇಕೆನ್ನುವಷ್ಟರಲ್ಲಿ ನಾಯಕಿಗೆ ಮೆಮೊರಿ ಲಾಸ್ ಕಾಯಿಲೆ ಇರುವುದು ತಿಳಿದುಬರುತ್ತದೆ. ಬಳಿಕ ನಾಯಕ ಅತಿ ಖ್ಯಾತಿಯಲ್ಲಿರುವಾಗ ಹಾಡುವುದನ್ನು ಮುಂದುವರಿಸುತ್ತಾನಾ ಅಥವಾ ಮೆಮೊರಿ ಲಾಸ್ ಕಾಯಿಲೆಯಿಂದ ಬಳಲುವ ನಾಯಕಿಯ ಬಳಿ ಇರುವುದನ್ನು ಆರಿಸಿಕೊಳ್ತಾನಾ ಎನ್ನುವುದೇ ಚಿತ್ರದ ಕಥೆ.
ಹೀಗೆ ಎಮೋಷನಲ್ ಲವ್‌ಸ್ಟೋರಿ ಎನಿಸಿಕೊಂಡಿರುವ ಸೈಯಾರಾ ಮೊದಲ 3 ದಿನಕ್ಕೆ 100 ಕೋಟಿ ಗಳಿಸಿದ್ದು, ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದಾರೆ. ಆದರೆ ಇದೇ ಸಮಯಕ್ಕೆ ಚಿತ್ರ ಕದ್ದ ಮಾಲು ಎಂಬುದು ಬಹಿರಂಗವಾಗಿದೆ. ಹೌದು, 2004ರಲ್ಲಿ ತೆರೆಗೆ ಬಂದಿದ್ದ ʼಎ ಮೊಮೆಂಟ್ ಟು ರಿಮೆಂಬರ್ʼ ಎಂಬ ಕೊರಿಯನ್ ಕಥೆಯನ್ನೇ ನಿರ್ದೇಶಕ ಸೈಯಾರಾ ಹೆಸರಿನಲ್ಲಿ ತೆರೆ ಮೇಲೆ ತಂದಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು ನಿರ್ದೇಶಕನ ವಿರುದ್ಧ ಟೀಕೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
