ಹಬ್ಬದ ಹಂಗಾಮಿನಲ್ಲಿ ಎಲ್ಪಿಜಿ ಬೆಲೆ ಭರ್ಜರಿ ಏರಿಕೆ

ನವದೆಹಲಿ: ಹಬ್ಬದ ಋತುವಿನಲ್ಲಿಯೇ ಹಣದುಬ್ಬರದ ಆಘಾತ ಉಂಟಾಗಿದೆ. ಯುಗಾದಿ, ಹೋಳಿ ಮತ್ತು ರಂಜಾನ್ ಹತ್ತಿರ ಇರುವಾಗಲೇ ಎಲ್ಪಿಜಿ ದರ ಭರ್ಜರಿ (LPG Price Hike) ಏರಿಕೆಯಾಗಿದೆ. ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿರೋದು ಜನಸಾಮಾನ್ಯರಿಗೆ ಸಂಕಷ್ಟ ತಂದೊಡ್ಡಿದೆ.
ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳನ್ನು ಪರಿಶೀಲಿಸುತ್ತವೆ. ಇಂದಿನಿಂದ ಹೊಸ ತಿಂಗಳು ಪ್ರಾರಂಭವಾಗುತ್ತಿದೆ, ಇದು ಹಬ್ಬದ ತಿಂಗಳು. ಯುಗಾದಿ, ಹೋಳಿ ಮತ್ತು ರಂಜಾನ್ ಹೋಳಿ ಹಬ್ಬ ಹತ್ತಿರದಲ್ಲಿದೆ. ಮಾರ್ಚ್ 2 ರಿಂದ ಅಂದರೆ ನಾಳೆಯಿಂದ ರಂಜಾನ್ ಕೂಡ ಪ್ರಾರಂಭವಾಗಲಿದೆ. ಮದುವೆ ಸೀಸನ್ ಕೂಡ ಆಗಿರೋದ್ರಿಂದ ಜನಸಾಮಾನ್ಯರು ಸಿಲಿಂಡರ್ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದರು.