Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಿಯಾಲಿಟಿ ಶೋ ಮದ್ವೆಯಲ್ಲಿ ಹೈಡ್ರಾಮಾ: ಮಂಗಳಸೂತ್ರ ನಾಪತ್ತೆಯಾಗಿ ಕಣ್ಣೀರಿಟ್ಟ ನಟಿ ಅವಿಕಾ ಗೋರ್; ನೆಟ್ಟಿಗರಿಂದ ಆಕ್ರೋಶ

Spread the love

ಹಿಂದಿ ನಟಿ ಅವಿಕಾ ಗೋರ್ ಟಿವಿ ಸೀರಿಯಲ್‌ನ ರಿಯಾಲಿಟಿ ಶೋದಲ್ಲೇ ಮದುವೆಯಾಗುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಅವರ ಮದುವೆಗೆ ಕ್ಷಣಗಳಿರುವಾಗ ಮಂಗಳಸೂತ್ರ ನಾಪತ್ತೆಯಾಗಿ ನಟಿ ಗಾಬರಿಯಾಗಿ ಅಳುತ್ತಿದ್ದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆಗೆ ಕ್ಷಣಗಳಿರುವಾಗ ಮಂಗಳಸೂತ್ರ ನಾಪತ್ತೆ

ಹಿಂದಿ ಸಿನಿಮಾ ಸೀರಿಯಲ್‌ಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿರುವ ಬಾಲಿವುಡ್ ನಟಿ ಅವಿಕಾ ಗೋರ್ ಟಿವಿ ಸೀರಿಯಲ್‌ನ ರಿಯಾಲಿಟಿ ಶೋದಲ್ಲೇ ಮದುವೆಯಾಗುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಅವರ ಮದುವೆಗೆ ಕ್ಷಣಗಳಿರುವಾಗ ಮಂಗಳಸೂತ್ರ ನಾಪತ್ತೆಯಾಗಿ ನಟಿ ಗಾಬರಿಯಾಗಿ ಅಳುತ್ತಿದ್ದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.

ನಟಿ ಅವಿಕಾ ಗೋರ್ ಮದ್ವೆಯಲ್ಲಿ ಹೈಡ್ರಾಮಾ

ಹಿಂದಿ ಕಲರ್ಸ್ ಚಾನೆಲ್‌ನ ಪತಿ ಪತ್ನಿ ಔರ್‌ ಪಂಗಾ ಕಾರ್ಯಕ್ರಮದಲ್ಲಿ ನಟಿ ಅವಿಕಾ ಗೋರ್ ತಮ್ಮ ಗೆಳೆಯ ಮಿಲಿಂದ್ ಚಂದ್ವಾನಿ ಅವರ ಜೊತೆ ಹಸೆಮಣೆ ಏರಿದ್ದರು. ಆದರೆ ಇನ್ನೇನು ಮುಹೂರ್ತಕ್ಕೆ ಕೆಲವೇ ಕ್ಷಣಗಳಿರುವಾಗ ಮಂಗಳಸೂತ್ರ ನಾಪತ್ತೆಯಾಗಿ ನಟಿ ಅವಿಕಾ ಗೋರ್ ಭಯ ಹಾಗೂ ಗೊಂದಲದಿಂದ ಕಣ್ಣೀರಿಟ್ಟಿದ್ದಾರೆ.

ಮಂಗಳಸೂತ್ರ ಮಿಸ್ ಆಗಿ ಆತಂಕ

ಸಾಮಾಜಿಕ ಜಾಲತಾಣದಲ್ಲಿ ತೆರೆ ಹಿಂದಿನ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ನಟಿ ಆತಂಕದಿಂದ ಕಣ್ಣುಗಳಲ್ಲಿ ನೀರು ತುಂಬಿಕೊಂಡಿರುವುದನ್ನು ಕಾಣಬಹುದುದಾಗಿದೆ. ಸಿಬ್ಬಂದಿ ಹಾಗೂ ಸಹ ಸ್ಪರ್ಧಿಗಳು ಅವರನ್ನು ಸುತ್ತುವರೆದಿದ್ದು, ಸೋನಾಲಿ ಬೇಂದ್ರೆ ಅವರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಶಮನಗೊಳಿಸಲು ಪ್ರಯತ್ನಿಸುತ್ತಿರುವಾಗ ಅವರು ಮತ್ತಷ್ಟು ಕಣ್ಣೀರಿಟ್ಟಿದ್ದಾರೆ.

ರಿಯಾಲಿಟಿ ಶೋದಲ್ಲಿ ಅವಿಕಾ ಗೋರ್ ಮದ್ವೆ

ಆದರೆ ಹಾಸ್ಯನಟ ಕೃಷ್ಣ ಅಭಿಷೇಕ್ ಅವರು ಈ ಕ್ಷಣದಲ್ಲಿ ಫ್ರಾಂಕ್ ಮಾಡುವುದಕ್ಕಾಗಿ ಮಂಗಳಸೂತ್ರವನ್ನು ಅಡಗಿಸಿಟ್ಟಿರಬಹುದೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದಾಗ ಅಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಕೃಷ್ಣ ಅಭಿಷೇಕ್ ಅವರು ಈ ಊಹಾಪೋಹಾವನ್ನು ನಿರಾಕರಿಸಿದ್ದಲ್ಲದೇ ಘಟನೆಗೂ ತನಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ.

ಸಮಾಧಾನ ಮಾಡಿದ ಕಾಮಿಡಿಯನ್ ಮುನಾವರ್ ಫಾರೂಕಿ

ಇದರಿಂದ ಗೊಂದಲ ಹೆಚ್ಚಾಗಿದ್ದು, ಕಾಮಿಡಿಯನ್ ಮುನಾವರ್ ಫಾರೂಕಿ ಅವರು ಈ ನಟಿ ಹಾಗೂ ಆಕೆಯ ಪತಿಯ ಮುಂದೆ ಬಂದು ಅವರನ್ನು ಸಮಾಧಾನಿಸುತ್ತಾ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸುವಂತೆ ಕೇಳಿಕೊಳ್ಳುತ್ತಾರೆ. ಇಲ್ಲಿ ಯಾರೂ ಫ್ರಾಂಕ್ ಮಾಡಿಲ್ಲ,ಮಂಗಳಸೂತ್ರ ಶೀಘ್ರದಲ್ಲೇ ಸಿಗುವ ಸಾಧ್ಯತೆಯಿದೆ ಎಂದು ಅವರು ಎಲ್ಲರಿಗೂ ಭರವಸೆ ನೀಡುತ್ತಾರೆ.

ಅವಿಕಾ ಗೋರ್ ಮಿಲಿಂದ್ ಚಂದ್ವಾನಿ ಮದ್ವೆ

ಇತ್ತ ಅವಿಕಾ ಪತಿ ಮಿಲಿಂದ್ ಚಂದ್ವಾನಿ ಅವಿಕಾಳೊಂದಿಗೆ ಮಾತನಾಡುತ್ತಾ, ಅವಳು ಕಣ್ಣೀರು ಒರೆಸುತ್ತಾ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ವಂತ ಮದುವೆಯಲ್ಲೂ ಇವರು ನಾಟಕ ಮಾಡೋದು ಬಿಡಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೋಗೆ ನೆಟ್ಟಿಗರ ಆಕ್ರೋಶ

ಅನೇಕರು ಈ ವೀಡಿಯೋದಲ್ಲಿ ಅವಿಕಾ ಸ್ಥಿತಿ ನೋಡಿ ಬೇಸರಿಸಿದರೆ ಇನ್ನೂ ಕೆಲವರು ಆ ಪರಿಸ್ಥಿತಿಯನ್ನು ಡ್ರಾಮಾಡದಂತೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರು ಮದುವೆಯಲ್ಲೂ ನಟನೆ ಮಾಡ್ತಿದ್ದಾರೆ ಎಂದು ಒಬ್ಬರು ಬೈಕೊಂಡರೆ, ಮತ್ತೆ ಕೆಲವರು ಎಲ್ಲವನ್ನೂ ಮನೋರಂಜನೆಯಾಗಿ ಮಾಡಬಾರದು ಕೆಲವು ವಿಚಾರಗಳು ಖಾಸಗಿಯಾಗಿ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಮದ್ವೆಯಲ್ಲೂ ಡ್ರಾಮಾ ಮಾಡ್ತಿದ್ದಾರೆ ಎಂದ ನೆಟ್ಟಿಗರು

ಹಾ ಹೀಗೆ ಕಾಮಿಡಿ ಶೋದಲ್ಲಿ ಮದುವೆ ಮಾಡಿ ಮದುವೆಯನ್ನು ತಮಾಷೆ ಮಾಡ್ತಿದ್ದಾರೆ ಎಂದರೆ ಇನ್ನೊಬ್ಬರು ಇವರು ನಟನೆ ಚೆನ್ನಾಗಿ ಮಾಡ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರ ಟೀಕೆಯ ನಡುವೆಯೂ ಹಲವು ಅಭಿಮಾನಿಗಳು ಅವಿಕಾರನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆಯ ಅಳು ಮಂಗಳಸೂತ್ರ ಮೇಲೆ ಆಕೆಗಿರುವ ಭಾವುಕ ಸಂಬಂಧ ಎಂದು ಅವರು ಕಾಮೆಂಟ್ ಮಾಡಿದ್ದಾರೆ.

ಪತಿ ಪತ್ನಿ ಔರ್ ಪಂಗಾದಲ್ಲಿ ವಿವಾಹದ ಜೋಡಿ

ಅವಿಕಾ ಮತ್ತು ಮಿಲಿಂದ್ ಸೆಪ್ಟೆಂಬರ್ 30ರಂದು ಪತಿ ಪತ್ನಿ ಔರ್ ಪಂಗಾದಲ್ಲಿ ವಿವಾಹವಾದರು, ಆದರೆ ಇವರ ಮದುವೆ ಎಪಿಸೋಡ್‌ ಟಿವಿ ಚಾನೆಲ್‌ನಲ್ಲಿ ಇನ್ನಷ್ಟೇ ಪ್ರಸಾರವಾಗಬೇಕಿದೆ. ಈ ಜೋಡಿಯ ವಿವಾಹವು ಕಾರ್ಯಕ್ರಮದ ಸೆಟ್‌ಗಳಲ್ಲಿಯೇ ಸಾಂಪ್ರದಾಯಿಕ ಸೆಟಪ್‌ನಲ್ಲಿ ನಡೆದಿದೆ. ಸಹ ಸ್ಪರ್ಧಿಗಳು ಮತ್ತು ನಿಕಟ ಕುಟುಂಬ ಸದಸ್ಯರು ಈ ಮದುವೆಯಲ್ಲಿ ಭಾಗವಹಿಸಿದ್ದರು.

ಮದುವೆ ಬಗ್ಗೆ ಅವಿಕಾ ಮಾತು

ನನ್ನ ತಂದೆ ನನ್ನನ್ನು ಮಂಟಪಕ್ಕೆ ಕರೆತಂದಾಗ ಮಿಲಿಂದ್ ಅವರ ಕಣ್ಣಲ್ಲಿ ನೀರು ತುಂಬಿತ್ತು. ಅದು ನಮಗೆ ತುಂಬಾ ಭಾವನಾತ್ಮಕ ಕ್ಷಣವಾಗಿತ್ತು. ನನ್ನ ಜೀವನದುದ್ದಕ್ಕೂ ನಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿರುವುದು ನನಗೆ ತುಂಬಾ ಧನ್ಯವೆನಿಸುತ್ತದೆ. ನಮ್ಮ ದಾಂಪತ್ಯದಲ್ಲಿ ಸಂತೋಷ ಮತ್ತು ಪ್ರೀತಿ ಇರಲಿ, ವರ್ಷಗಳಲ್ಲಿ ನಾವು ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಲೇ ಇರಬೇಕೆಂದು ಮತ್ತು ನಾವು ಹೀಗೆ ಒಟ್ಟಿಗೆ ಬೆಳೆಯೇಬೇಕೆಂದು ನಾನು ಬಯಸುತ್ತೇನೆ ಎಂದು ಅವಿಕಾ ಈ ಹಿಂದೆ ಹೇಳಿದ್ದರು.


Spread the love
Share:

administrator

Leave a Reply

Your email address will not be published. Required fields are marked *