Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೈಡ್ರಾಮಾ: ಟಾಯ್ಲೆಟ್‌ನಿಂದ ಹೊರಬಂದ ಯುವಕ-ಯುವತಿ

Spread the love

ಎಕ್ಸ್‌ಪ್ರೆಸ್ ರೈಲೊಂದರ ಶೌಚಾಲಯವು ಸುಮಾರು ಒಂದೂವರೆ ಗಂಟೆಗಳ ಕಾಲ ಲಾಕ್ ಆಗಿತ್ತು. ಅನುಮಾನಗೊಂಡ ಪ್ರಯಾಣಿಕರು ಬಾಗಿಲು ತೆರೆಸಿದಾಗ, ಒಳಗಿನಿಂದ ಯುವಕ ಮತ್ತು ಯುವತಿಯೊಬ್ಬಳು ಹೊರಬಂದಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರು ಮತ್ತು ಜೋಡಿಯ ನಡುವೆ ತೀವ್ರ ವಾಗ್ವಾದ ನಡೆದಿದೆ.ಎಕ್ಸ್‌ಪ್ರೆಸ್ ರೈಲಿನ ವಿಡಿಯೋ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಕ್ಸ್‌ಪ್ರೆಸ್ ರೈಲಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವೈರಲ್ ವಿಡಿಯೋದಲ್ಲಿ ಯುವಕ ಮತ್ತು ಯುವತಿಯೊಬ್ಬಳು ಟ್ರೈನ್ ಟಾಯ್ಲೆಟ್‌ನಿಂದ ಹೊರ ಬರುತ್ತಿರೋದನ್ನು ಗಮನಿಸಬಹುದು. ಶೌಚಾಲಯದಿಂದ ಹೊರ ಬರುತ್ತಿದ್ದಂತೆ ಯುವತಿ ವಿಡಿಯೋ ಮಾಡದಂತೆ ಅವಾಜ್ ಹಾಕಿದ್ದಾಳೆ. ಆದರೆ ಪ್ರಯಾಣಿಕರು ಮಾತ್ರ ಯುವಕ-ಯುವತಿಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.ಹೊರಗೆ ಬಂದ ಯುವಕ
ಎಕ್ಸ್‌ಪ್ರೆಸ್ ರೈಲಿನಲ್ಲಿ ಘಟನೆ ನಡೆದಿದ್ದು, ನಿಖರವಾಗಿ ಯಾವ ಟ್ರೈನ್ ಎಂದು ತಿಳಿದು ಬಂದಿಲ್ಲ. ಸುಮಾರು ಒಂದೂವರೆ ಗಂಟೆ ಕಾಲ ರೈಲಿನ ಶೌಚಾಲಯದ ಬಾಗಿಲು ಬಂದ್ ಆಗಿತ್ತು. ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಪ್ರಯಾಣಿಕರು, ಒಳಗೆ ಯಾರಿದ್ದೀರಿ? ಹೊರಗೆ ಬನ್ನಿ ಎಂದು ಕರೆದಿದ್ದಾರೆ. ಪ್ರಯಾಣಿಕರು ಕೂಗುತ್ತಿದ್ದಂತೆ ಬಾಗಿಲು ತೆರೆದು ಯುವಕ ಹೊರಗೆ ಬರುತ್ತಾನೆ. ಯುವಕ ಬರುತ್ತಿದ್ದಂತೆ ಹಿಂದಿನಿಂದಲೇ ಶೌಚಾಲಯದ ಬಾಗಿಲು ಕ್ಲೋಸ್ ಆಗುತ್ತದೆ.ಒಂದೂವರೆ ಗಂಟೆಯಿಂದ ಟಾಯ್ಲೆಟ್ ಬಂದ್
ವೈರಲ್ ವಿಡಿಯೋ ಶುರುವಾಗುವುದೇ ಟ್ರೈನ್ ಟಾಯ್ಲೆಟ್‌ನ ಮುಚ್ಚಿದ ಬಾಗಿಲಿನಿಂದ ವಿಡಿಯೋ ಮಾಡುತ್ತಿರುವ ವ್ಯಕ್ತಿ, ಈ ಬಾಗಿಲು ಸುಮಾರು ಒಂದೂವರೆ ಗಂಟೆಯಿಂದ ಒಳಗಿನಿಂದ ಲಾಕ್ ಆಗಿದೆ ಅಂತ ಹೇಳುತ್ತಾನೆ. ಬಾಗಿಲು ತೆರೆಯಿರಿ ಅಂದಾಗ, ಒಳಗೆ ಯಾರಿಗೋ ಹುಷಾರಿಲ್ಲ ಅಂತ ಉತ್ತರ ಬಂದಿದೆ. ಆದರೆ ಇಷ್ಟೊಂದು ಹೊತ್ತು ಟಾಯ್ಲೆಟ್ ಬಂದ್ ಆಗಿದ್ದರಿಂದ ಬೇರೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಇದೇ ವೇಳೆ ಕೆಲ ಪ್ರಯಾಣಿಕರು ಬಾಗಿಲು ತಟ್ಟಲು ಶುರುಮಾಡಿದ್ದಾರೆಬಾಗಿಲು ತೆರೆಯುತ್ತಿದ್ದಂತೆ ಜೋಡಿ ಪ್ರತ್ಯಕ್ಷ
ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲದ ವಾಗ್ವಾದದ ನಂತರ, ಇದ್ದಕ್ಕಿದ್ದಂತೆ ಟಾಯ್ಲೆಟ್ ಬಾಗಿಲು ತೆರೆದುಕೊಳ್ಳುತ್ತದೆ. ಒಳಗಿನಿಂದ ಒಬ್ಬ ಯುವಕ ಹೊರಗೆ ಬರುತ್ತಾನೆ. ಬೋಗಿಯಲ್ಲಿದ್ದ ಕೆಲವು ಪ್ರಯಾಣಿಕರು ಅವನ ಮೇಲೆ ಗರಂ ಆಗಿ, ಯಾಕೆ ಇಷ್ಟು ಹೊತ್ತು ಬೇಕಾಯ್ತು ಅಂತ ಪ್ರಶ್ನೆ ಮಾಡುತ್ತಾರೆ. ಇದೇ ವೇಳೆ, ಟಾಯ್ಲೆಟ್‌ನಿಂದ ಒಬ್ಬ ಯುವತಿಯೂ ಹೊರಗೆ ಬರುತ್ತಾಳೆ. ಹೊರಗೆ ಬರ್ತಿದ್ದಂತೆ ಪ್ರಯಾಣಿಕರನ್ನು ನೋಡಿ ಯುವತಿ ತುಂಬಾನೇ ಗಾಬರಿಯಾಗಿದ್ದಳು. ಪ್ರಯಾಣಿಕರು ಮತ್ತು ಆ ಜೋಡಿಯ ನಡುವೆ ಮಾತಿನ ಚಕಮಕಿ ಶುರುವಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಬಾಗಿಲು ತೆರೆಯುತ್ತಿದ್ದಂತೆ ಜೋಡಿ ಪ್ರತ್ಯಕ್ಷ
ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲದ ವಾಗ್ವಾದದ ನಂತರ, ಇದ್ದಕ್ಕಿದ್ದಂತೆ ಟಾಯ್ಲೆಟ್ ಬಾಗಿಲು ತೆರೆದುಕೊಳ್ಳುತ್ತದೆ. ಒಳಗಿನಿಂದ ಒಬ್ಬ ಯುವಕ ಹೊರಗೆ ಬರುತ್ತಾನೆ. ಬೋಗಿಯಲ್ಲಿದ್ದ ಕೆಲವು ಪ್ರಯಾಣಿಕರು ಅವನ ಮೇಲೆ ಗರಂ ಆಗಿ, ಯಾಕೆ ಇಷ್ಟು ಹೊತ್ತು ಬೇಕಾಯ್ತು ಅಂತ ಪ್ರಶ್ನೆ ಮಾಡುತ್ತಾರೆ. ಇದೇ ವೇಳೆ, ಟಾಯ್ಲೆಟ್‌ನಿಂದ ಒಬ್ಬ ಯುವತಿಯೂ ಹೊರಗೆ ಬರುತ್ತಾಳೆ. ಹೊರಗೆ ಬರ್ತಿದ್ದಂತೆ ಪ್ರಯಾಣಿಕರನ್ನು ನೋಡಿ ಯುವತಿ ತುಂಬಾನೇ ಗಾಬರಿಯಾಗಿದ್ದಳು. ಪ್ರಯಾಣಿಕರು ಮತ್ತು ಆ ಜೋಡಿಯ ನಡುವೆ ಮಾತಿನ ಚಕಮಕಿ ಶುರುವಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ಮಾಡಿದ್ದಕ್ಕೂ ಶುರುವಾಯ್ತು ಜಗಳ
ವಿಷಯ ಇಷ್ಟಕ್ಕೇ ನಿಲ್ಲಲಿಲ್ಲ. ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ತನ್ನ ಅನುಮತಿ ಇಲ್ಲದೆ ವಿಡಿಯೋ ರೆಕಾರ್ಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ತಾನು ಯಾರ ಜೊತೆ ಒಳಗೆ ಹೋಗಿದ್ದೆ ಅನ್ನೋದು ತನ್ನ ವೈಯಕ್ತಿಕ ವಿಚಾರ, ಅದರ ವಿಡಿಯೋ ಮಾಡಲು ಯಾರಿಗೂ ಹಕ್ಕಿಲ್ಲ ಅಂತ ವಾದಿಸಿದ್ದಾಳೆ. ಇನ್ನೊಂದೆಡೆ, ಇಷ್ಟು ಹೊತ್ತು ಟಾಯ್ಲೆಟ್ ಬಂದ್ ಮಾಡಿದ್ದು ತಪ್ಪು, ಇದರಿಂದ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತೆ ಅಂತ ಕೆಲವು ಪ್ರಯಾಣಿಕರು ಹೇಳಿದ್ದಾರೆ.

RPFಗೆ ಒಪ್ಪಿಸುವುದಾಗಿ ಎಚ್ಚರಿಕೆ, ಟ್ರೈನ್‌ನಲ್ಲಿ ಟೆನ್ಶನ್
ಜಗಳ ಜೋರಾದಾಗ, ಕೆಲವು ಪ್ರಯಾಣಿಕರು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿ, ಇಬ್ಬರನ್ನೂ ರೈಲ್ವೆ ಪೊಲೀಸರಿಗೆ (RPF) ಒಪ್ಪಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಯುವತಿ, ತನಗೇನೂ ಅಭ್ಯಂತರವಿಲ್ಲ, ಆದರೆ ಮೊದಲು ನನ್ನ ವಿಡಿಯೋ ಡಿಲೀಟ್ ಮಾಡಿ ಅಂತ ಪಟ್ಟು ಹಿಡಿದಿದ್ದಾಳೆ. ಈ ವಿಡಿಯೋ ವೈರಲ್ ಆದರೆ ತನಗೆ ತೊಂದರೆಯಾಗಬಹುದು ಅಂತ ಯುವತಿ ಹೇಳುತ್ತಿರುವುದನ್ನು ವಿಡಿಯೋದ ಕೊನೆಯಲ್ಲಿ ಕೇಳಬಹುದು.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಕ್ಕಾಪಟ್ಟೆ ಶೇರ್ ಆಗ್ತಿದೆ. ಈ ಘಟನೆ ನಡೆದ ನಿಖರವಾದ ದಿನಾಂಕ, ಸ್ಥಳ ಅಥವಾ ರೈಲಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ರೈಲ್ವೆ ಇಲಾಖೆಯಿಂದಲೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ವೈರಲ್ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.


Spread the love
Share:

administrator

Leave a Reply

Your email address will not be published. Required fields are marked *