ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿಗೆ ಹೈಕೋರ್ಟ್ ನಿಂದ ಶಾಕ್

ನವದೆಹಲಿ :ಪರೀಕ್ಷಾ ಕೇಂದ್ರಕ್ಕೆ 6 ನಿಮಿಷ ತಡವಾಗಿ ಆಗಮಿಸಿದ್ದಕ್ಕಾಗಿ ಪರೀಕ್ಷೆ ಬರೆಯಲು ಅವಕಾಶ ನೀಡದ ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (ಸಿಯುಇಟಿ) ನಿಯಮದ ವಿರುದ್ಧ ದಾವೆ ಹೂಡಿದ್ದ ವಿದ್ಯಾರ್ಥಿಯೊಬ್ಬನ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದೆ.
ವಿದ್ಯಾರ್ಥಿಗೆ ಸಮಯಪಾಲನೆಯ ಮಹತ್ವದ ಬಗ್ಗೆ ತಿಳಿಹೇಳಿರುವ ಕೋರ್ಟ್, ಸಣ್ಣ ವಿಳಂಬವೆಂಬ ಕಾರಣಕ್ಕೆ ಪರೀಕ್ಷೆಯ ಸಮಗ್ರತೆಯನ್ನು ರಾಜಿ ಮಾಡಿಕೊಳ್ಳುವಂತಹ ವಿನಾಯಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತು.