ಧರ್ಮ ಮರೆಮಾಚಿ ಹಿಂದೂ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಗರ್ಭಪಾತಕ್ಕೆ ಒತ್ತಾಯ!

ನವದೆಹಲಿ – ವಸಂತ ಕುಂಜ್ ಪ್ರದೇಶದಲ್ಲಿ ಮಹಮ್ಮದ್ ರೆಹಾನ್ ಎಂಬಾತ ಮದುವೆಯ ಭರವಸೆ ನೀಡಿ ಹಿಂದೂ ಯುವತಿ ಮೇಲೆ ಬಲಾತ್ಕಾರ ಮಾಡಿದ್ದಾನೆ. ಸಂತ್ರಸ್ತ ಯುವತಿ ಎರಡು ಬಾರಿ ಗರ್ಭಿಣಿಯಾಗಿದ್ದಳು. ರೆಹಾನ್ ವಂಚಿಸಿ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದನು.

ಅಂತಿಮವಾಗಿ ಸಂತ್ರಸ್ತ ಯುವತಿ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಯುವತಿಗೆ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿ ರೆಹಾನ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮಹಮ್ಮದ್ ರೆಹಾನ್ ತನ್ನ ಧರ್ಮವನ್ನು ಮರೆಮಾಚಿ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದನು. ನಂತರ ಮದುವೆಯ ಭರವಸೆ ನೀಡಿ ಹಲವು ವರ್ಷಗಳಿಂದ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಬಲಾತ್ಕಾರ ಮಾಡುವಾಗ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಫೋಟೋಗಳನ್ನೂ ಸಹ ತೆಗೆದಿದ್ದನು. ಅವುಗಳನ್ನು ಪ್ರಸಾರ ಮಾಡುವುದಾಗಿ ಆಕೆಗೆ ಬೆದರಿಕೆ ಹಾಕುತ್ತಿದ್ದನು. ರೆಹಾನ್ ವಿಮಾನ ನಿಲ್ದಾಣದಲ್ಲಿ ಸರಕು ರವಾನೆ ವಿಭಾಗದಲ್ಲಿ ಕೆಲಸ ಮಾಡುತ್ತಾನೆ.
