Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀಲಿ ಆಧಾರ್ ಕಾರ್ಡ್ ಪಡೆಯಲು ಇಲ್ಲಿದೆ ವಿಧಾನ

Spread the love

ಬೆಂಗಳೂರು : ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್​ ಕಾರ್ಡ್​ ಇದ್ದೇ ಇದೆ. ಆಧಾರ್​ ಕಾರ್ಡ್​ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿರುವ ಆಧಾರ್​ ಕಾರ್ಡ್​ ಇದ್ದರೆ ಈಗ ಹಲವಾರು ಕೆಲಸಗಳು ಸುಲಭ ಜೊತೆಗೆ ಸರ್ಕಾರಿ ಸೌಲಭ್ಯಗಳಿಗೆ ಇವು ಕಡ್ಡಾಯವಾಗಿ ಬೇಕು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ನಿಮಗೆ ನೀಲಿ ಆಧಾರ್​ ಕಾರ್ಡ್​ ಬಗ್ಗೆ ತಿಳಿದಿದ್ಯಾ? ಏನಿದು ನೀಲಿ ಆಧಾರ್​ ಕಾರ್ಡ್​ ? ಏನಿದರ ಪ್ರಯೋಜನ? ಯಾರು ಮಾಡಿಸಬೇಕು? ಹೇಗೆ ಮಾಡಿಸುವುದು, ಆನ್​ಲೈನ್​ನಲ್ಲಿ ಸಲ್ಲಿಕೆ ಹೇಗೆ ಇತ್ಯಾದಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಅಂದಹಾಗೆ, ನೀಲಿ ಆಧಾರ್​ ಕಾರ್ಡ್​ ಹೊಸತೇನಲ್ಲ. ಇದು ಬಂದು ಹಲವು ವರ್ಷಗಳೇ ಆಗಿವೆ. ಈ ಆಧಾರ್​ ಕಾರ್ಡ್​ ಮಾಡಿಸುವುದು ಐದು ವರ್ಷದ ಒಳಗಿನ ಮಕ್ಕಳಿಗೆ. ಇದು ನಿರ್ದಿಷ್ಟವಾಗಿ 5 ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಆಧಾರ್​ ಕಾರ್ಡ್​ ಕೂಡ ಮಕ್ಕಳಿಗಾಗಿ ಮಾಡಿಸಬಹುದು. ಆದರೆ ನೀಲಿ ಆಧಾರ್​ ಕಾರ್ಡ್​ನ ವಿಶೇಷತೆ ಎದರೆ, 5 ವರ್ಷದೊಳಗಿನ ಮಕ್ಕಳು ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವ ಅಗತ್ಯವಿಲ್ಲ. ಬದಲಾಗಿ, ಅವರ ವಿಶಿಷ್ಟ ಗುರುತನ್ನು ಜನಸಂಖ್ಯಾ ಡೇಟಾ ಮತ್ತು ಅವರ ಪೋಷಕರ UID ಗೆ ಸಂಪರ್ಕಿಸಲಾದ ಮುಖದ ಚಿತ್ರವನ್ನು ಬಳಸಿಕೊಂಡು ಪ್ರಕ್ರಿಯೆಗೊಳಿಸಲಾಗುತ್ತದೆ. ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಚಿಕ್ಕ ಮಕ್ಕಳನ್ನು ಸೇರಿಸುವುದನ್ನು ಸರಳಗೊಳಿಸುವಲ್ಲಿ ನೀಲಿ ಆಧಾರ್ ಕಾರ್ಡ್ ಮಹತ್ವವನ್ನು ಹೊಂದಿದೆ.


Spread the love
Share:

administrator

Leave a Reply

Your email address will not be published. Required fields are marked *