Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೈಕ್ ಟ್ಯಾಕ್ಸಿಗೆ ಕೇಂದ್ರದ ಗ್ರೀನ್ ಸಿಗ್ನಲ್: ಕರ್ನಾಟಕದಲ್ಲೂ ಶೀಘ್ರ ಸೇವೆ ಆರಂಭ? ಹೊಸ ಮಾರ್ಗಸೂಚಿ ಬಿಡುಗಡೆ!

Spread the love

ನವದೆಹಲಿ: ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿ ಇತ್ತೀಚೆಗೆ ನಿಷೇಧಕ್ಕೊಳಗಾಗಿದ್ದ ಬೈಕ್ ಟ್ಯಾಕ್ಸಿ ಸೇವೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೌದು.. ರಾಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಪರಿಹಾರವಾಗಿ, ಜುಲೈ 1 ರಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರನ್ವಯ ಪ್ರಯಾಣಿಕರ ಸವಾರಿಗಳಿಗೆ ಸಾರಿಗೆಯೇತರ (ಖಾಸಗಿ) ಮೋಟಾರ್‌ ಸೈಕಲ್‌ಗಳ ಬಳಕೆಯನ್ನು ಅನುಮತಿ ನೀಡಲಾಗಿದೆ.

ಇಂದು ಹೊರಡಿಸಲಾದ ಕೇಂದ್ರದ ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳು, 2025, ರಾಜ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟು ಪ್ರಯಾಣಿಕರ ಸವಾರಿಗಳಿಗೆ ಸಾರಿಗೆಯೇತರ (ಖಾಸಗಿ) ಮೋಟಾರ್‌ಸೈಕಲ್‌ಗಳ ಬಳಕೆಯನ್ನು ಅನುಮತಿಸುತ್ತದೆ ಎನ್ನಲಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳು 2025 ಅನ್ನು ಹೊರಡಿಸಿದ್ದು, ರಾಜ್ಯ ಸರ್ಕಾರಗಳು ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಯಾಣಿಕರನ್ನು ಸಾಗಿಸಲು ಸಾರಿಗೆಯೇತರ ಮೋಟಾರ್‌ಸೈಕಲ್‌ಗಳನ್ನು (ಅಂದರೆ, ಖಾಸಗಿ ದ್ವಿಚಕ್ರ ವಾಹನಗಳು) ಬಳಸಲು ಅನುಮತಿ ನೀಡಬಹುದು ಎಂದು ಹೇಳಿದೆ.

ನವೀಕರಿಸಿದ ಮಾರ್ಗಸೂಚಿಗಳ ಷರತ್ತು 23 ರ ಪ್ರಕಾರ, ರಾಜ್ಯಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67(3) ರ ಅಡಿಯಲ್ಲಿ ಅಂತಹ ಮೋಟಾರ್‌ ಸೈಕಲ್‌ಗಳ ಸಂಗ್ರಾಹಕತೆಯನ್ನು ಅಧಿಕೃತಗೊಳಿಸಬಹುದು ಮತ್ತು ದೈನಂದಿನ, ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳ ಆಧಾರದ ಮೇಲೆ ಅಧಿಕಾರ ಶುಲ್ಕವನ್ನು ವಿಧಿಸಲು ಸಹ ಅನುಮತಿಸಲಾಗಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಸಂಗ್ರಾಹಕರು ಸುರಕ್ಷತೆ, ಸವಾರರ ಆನ್‌ಬೋರ್ಡಿಂಗ್, ವಿಮೆ ಮತ್ತು ಇತರ ಷರತ್ತುಗಳನ್ನು ಸಹ ಪಾಲಿಸಬೇಕು ಎಂದು ಹೇಳಿದೆ.

ಅಂತಿಮ ನಿರ್ಣಯ ರಾಜ್ಯ ಸರ್ಕಾರಗಳದ್ದೇ

ಇದೇ ವೇಳೆ ಬೈಕ್ ಟ್ಯಾಕ್ಸಿ ಸೇವೆಗಳ ಅನುಮೋದನೆ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುತ್ತದೆ ಎಂದೂ ಹೇಳಲಾಗಿದೆ.

ಕರ್ನಾಟಕದಲ್ಲಿ ನಿಷೇಧಕ್ಕೊಳಗಾಗಿರುವ ಸೇವೆ

ಇನ್ನು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ನಿಷೇಧ ಹೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಾರ್ಗಸೂಚಿ ಹೊರಡಿಸಿರುವುದು ಬೈಕ್ ಟ್ಯಾಕ್ಸಿ ಸೇವಾ ಸಂಸ್ಥೆಗಳಿಗೆ ಬಿಗ್ ರಿಲೀಫ್ ನೀಡಿದೆ. ಈ ಪ್ರಕರಣ ಪ್ರಸ್ತುತ ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ. ರಾಪಿಡೋ, ಓಲಾ, ಉಬರ್‌ನಂತಹ ಸಂಗ್ರಾಹಕರು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಇತ್ತ ಬೈಕ್ ಟ್ಯಾಕ್ಸಿ ಚಾಲಕರು ಮತ್ತು ಅಗ್ರಿಗೇಟರ್ ಸಂಸ್ಥೆಗಳು ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ.

Rapido ಸಂತಸ

ಇನ್ನು ಅತ್ತ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗುತ್ತಲೇ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರ್ಯಾಪಿಡೋ ಸಂಸ್ಥೆ, ‘ಪ್ರಯಾಣಿಕರ ಪ್ರಯಾಣಕ್ಕಾಗಿ ಸಾರಿಗೆಯೇತರ ಮೋಟಾರ್‌ ಸೈಕಲ್‌ಗಳನ್ನು ಒಟ್ಟುಗೂಡಿಸಲು ಅನುಮತಿಸುವ ಹೊಸ ಮೋಟಾರು ವಾಹನಗಳ ಸಂಗ್ರಾಹಕ ಮಾರ್ಗಸೂಚಿಗಳು, 2025 ರ ಷರತ್ತು 23 ಅನ್ನು ಕಾರ್ಯಗತಗೊಳಿಸುವ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67(3) ರ ಅಡಿಯಲ್ಲಿ ರಾಜ್ಯದ ಅಧಿಕಾರಗಳಲ್ಲಿ ಬೇರೂರಿರುವ ಈ ಕ್ರಮವು, ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಮತ್ತು ಅಂತರ್ಗತ ಭಾರತವಾದ ವಿಕಸಿತ ಭಾರತ ಕಡೆಗೆ ಭಾರತದ ಪ್ರಯಾಣದಲ್ಲಿ ಒಂದು ಮೈಲಿಗಲ್ಲು” ಎಂದು ತಿಳಿಸಿದೆ.

ಅಂತೆಯೇ “ಸಾರಿಗೆಯೇತರ ಮೋಟಾರ್‌ ಸೈಕಲ್‌ಗಳನ್ನು ಹಂಚಿಕೆಯ ಚಲನಶೀಲತೆಯ ಸಾಧನವಾಗಿ ಗುರುತಿಸುವ ಮೂಲಕ, ಸರ್ಕಾರವು ಲಕ್ಷಾಂತರ ಜನರಿಗೆ, ವಿಶೇಷವಾಗಿ ಸೇವೆ ಸಲ್ಲಿಸದ ಮತ್ತು ಹೈಪರ್‌ಲೋಕಲ್ ಪ್ರದೇಶಗಳಲ್ಲಿ ಹೆಚ್ಚು ಕೈಗೆಟುಕುವ ಸಾರಿಗೆ ಆಯ್ಕೆಗಳಿಗೆ ಬಾಗಿಲು ತೆರೆದಿದೆ” ಎಂದು ಹೇಳಿಕೆಯಲ್ಲಿ ಹೇಳಿದೆ.


Spread the love
Share:

administrator

Leave a Reply

Your email address will not be published. Required fields are marked *