ಕಿಲಿಮಂಜಾರೋದಲ್ಲಿ ಹೆಲಿಕಾಪ್ಟರ್ ಪತನ: ಐವರ ದುರ್ಮರಣ

ಬುಧವಾರ ತಾಂಜಾನಿಯಾದ ಮೌಂಟ್ ಕಿಲಿಮಂಜಾರೋದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಆಫ್ರಿಕಾದ ಅತಿ ಎತ್ತರದ ಪರ್ವತದ ಶಿಖರಕ್ಕೆ ಹೋಗುವ ಪರ್ವತಾರೋಹಿಗಳ ಅಂತಿಮ ನಿಲ್ದಾಣಗಳಲ್ಲಿ ಒಂದಾದ ಬರಾಫು ಕ್ಯಾಂಪ್ ಬಳಿ ಈ ಅಪಘಾತ ಸಂಭವಿಸಿದೆ.


ಟಾಂಜಾನಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರವು ಹೇಳಿಕೆಯೊಂದರಲ್ಲಿ, ಹೆಲಿಕಾಪ್ಟರ್ ಪರ್ವತದ ಎತ್ತರದ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿಸಿದೆ. ಆ ಸಮಯದಲ್ಲಿ ಹೆಲಿಕಾಪ್ಟರ್ ವೈದ್ಯಕೀಯ ರಕ್ಷಣಾ ಕಾರ್ಯಾಚರಣೆಯಲ್ಲಿತ್ತು ಎಂದು ಸ್ಥಳೀಯ ಮಾಧ್ಯಮಗಳು ನಂತರ ತಿಳಿಸಿವೆ.