ಮಂಗಳೂರಿನಲ್ಲಿ ಭಾರಿ ಮಳೆಯ ಅವಾಂತರ-ಹಲವು ದ್ವಿಚಕ್ರ ವಾಹನಗಳಿಗೆ ಹಾನಿ

ಮಂಗಳೂರು: ಮಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಅಪಾರ ಹಾನಿಯುಂಟಾದ ವರದಿಯಾಗಿದೆ. ನಗರದ ಹಲೆವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದರೆ. ಕೆಲವು ಕಡೆಗಳಲ್ಲಿ ಗುಡ್ಡ ಕುಸಿದಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ ಸುಮಾರು 8.30 ರಿಂದ ಮಧ್ಯರಾತ್ರಿಯವರೆಗೆ ನಿರಂತರ ಸುರಿದ ಬಿರುಸಿನ ಮಳೆಗೆ ನಗರದ ಕೊಡಿಯಾಲ್ ಬೈಲು, ಪಂಪೈಲ್, ಪಡೀಲ್, ಬಜಾಲ್, ಮಾಲೆಮಾರ್, ಜಪ್ಪಿನಮೊಗರು, ಕೊಟ್ಟಾರಚೌಕಿ ಸಹಿತ ನಗರದ ಕೆಲವೊಂದು ಭಾಗದ ಮನೆ ಆವರಣಕ್ಕೆ ಕೃತಕ ನೆರೆ ಆವರಿಸಿದೆ. ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿದೆ.
ಸರ್ಕ್ಯೂಟ್ ಹೌಸ್ – ಬಿಜೈ ಬಳಿ ತಡರಾತ್ರಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಬುಧವಾರ ರಾತ್ರಿ ಬಿಜೈ ಬಟ್ಟಗುಡ್ಡ, ಆರ್ಯಸಮಾಜ ರಸ್ತೆ, ಪಂಪ್‌ವೆಲ್ , ಮಾಲೆಮಾರ್, ಕಾವೂರು ಉಲ್ಲಾಸ ನಗರ, ಕೊಟ್ಟಾರ ಚೌಕಿ ಮತ್ತಿತರ ಕಡೆಗಳಲ್ಲಾದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಡೆಗೊಡೆಯೊಂದು ಬಿದ್ದ ಪರಿಣಾಮ ರಸ್ತೆ ಬದಿ ನಲ್ಲಿಸಿದ ಹಲವಾರು ಬೈಕ್ ಗಳಿಗೆ ಹಾನಿಯಾದ ಘಟನೆ ನಡೆದಿದ್ದು. ಒಂದು ಕಾರು ಕೂಡ ಜಖಂಕೊಂಡಿದೆ,
