ವಿಚ್ಛೇದನ ಪಡೆದು ಬಂದ ಮಗಳಿಗೆ ಬ್ಯಾಂಡ್-ಬಾಜಾ ಸ್ವಾಗತ; ಕಳಂಕವಲ್ಲ ಬದಲಾಗಿ ಮಗಳ ನಿರ್ಧಾರಕ್ಕೆ ಸಾಥ್ ನೀಡಿದ ನಿವೃತ್ತ ನ್ಯಾಯಾಧೀಶ

ಮೀರತ್: ಮಗಳನ್ನು ಖುಷಿಯಾಗಿಡುವುದಕ್ಕಿಂತ ದೊಡ್ಡ ಕರ್ತವ್ಯ ಮತ್ತೊಂದಿಲ್ಲ ಎಂದು ಹೇಳುತ್ತಾ ವಿಚ್ಛೇದನ ಪಡೆದು ಮನೆಗೆ ಬಂದ ಮಗಳನ್ನು ನಿವೃತ್ತ ನ್ಯಾಯಾಧೀಶರೊಬ್ಬರು ವಾದ್ಯಗಳೊಂದಿಗೆ ಸ್ವಾಗತಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ತಂದೆ ಮಗಳು ಮನೆಗೆ ಬಂದಿದ್ದನ್ನು ಕಳಂಕ ಎಂದು ಪರಿಗಣಿಸಿಲ್ಲ. ಬದಲಾಗಿ ಆಕೆಯ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.
ಮೀರತ್ ಕೌಟುಂಬಿಕ ನ್ಯಾಯಾಲಯದ ಹೊರಗೆ, ಸಂಬಂಧಿಕರು ನೃತ್ಯ ಮಾಡಿ ಸಿಹಿತಿಂಡಿಗಳನ್ನು ವಿತರಿಸಿ ಡೋಲು ಬಾರಿಸುತ್ತಾ ಮನೆಗೆ ಕರೆದೊಯ್ಯಲಾಯಿತು.ಐ ಲವ್ ಮೈ ಡಾಟರ್ ಎನ್ನುವ ಚಿತ್ರವನ್ನು ಕಪ್ಪು ಟಿ ಶರ್ಟ್ನಲ್ಲಿ ಮುದ್ರಿಸಲಾಗಿತ್ತು. ಏಪ್ರಿಲ್ 4 ರಂದು ನ್ಯಾಯಾಲಯವು ಅಧಿಕೃತವಾಗಿ ವಿಚ್ಛೇದನವನ್ನು ನೀಡಿದ ನಂತರ ಅವರು ಮನೆಗೆ ಹಿಂದಿರುಗಿದಾಗ ಅವರ ತಂದೆ ಆಕೆಯನ್ನು ಸಂತಸದಿಂದ ಬರಮಾಡಿಕೊಂಡರು.

ಪ್ರಣೀತಾ ಡಿಸೆಂಬರ್ 2018 ರಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾಗಿದ್ದರು. ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಕಿರುಕುಳವನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಮಗ ಹುಟ್ಟಿದ ಮೇಲೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅಂತಿಮವಾಗಿ ಗಂಡನನ್ನು ಬಿಡುವ ನಿರ್ಧಾರ ಮಾಡಿದ್ದರು. ಅದಕ್ಕೆ ತವರು ಮನೆಯಿಂದ ಬೆಂಬಲವೂ ಸಿಕ್ಕಿತ್ತು.